ಜಮ್ಮು& ಕಾಶ್ಮೀರದ ಹಜರತ್‌ಬಾಲ್ ದೇವಾಲಯದಲ್ಲಿರುವ ಅಶೋಕ ಲಾಂಛನದ ಧ್ವಂಸ: ಘಟನೆಯ ವಿರುದ್ಧ ಕಿಡಿಕಾರಿದ ಕೇಂದ್ರ ಸಚಿವ ಕಿರಣ್ ರಿಜಿಜು| Ashoka emblem

Ashoka emblem
Published on

Ashoka emblem: ಜಮ್ಮು ಮತ್ತು ಕಾಶ್ಮೀರದ ಹಜರತ್‌ಬಾಲ್ ದೇವಾಲಯದಲ್ಲಿರುವ ಅಶೋಕ ಲಾಂಛನದ ಧ್ವಂಸವನ್ನು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ತೀವ್ರವಾಗಿ ಖಂಡಿಸಿದ್ದಾರೆ.

ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ಕೇಂದ್ರ ಸಚಿವ ರಿಜಿಜು, ಹಜರತ್‌ಬಾಲ್ ದೇಗುಲ ಶಾಂತಿಯ ಸಂಕೇತವಾಗಿದೆ. ಪ್ರವಾದಿ ಮುಹಮ್ಮದ್​ರ ಅವಶೇಷದೊಂದಿಗೆ ಈ ದೇಗುಲದ ಆಳವಾದ ಸಂಪರ್ಕವು ನಂಬಿಕೆ ಮತ್ತು ಏಕತೆಯ ಪ್ರತಿಬಿಂಬಕ್ಕೆ ನಿಜವಾದ ಕೊಡುಗೆ ನೀಡಿದೆ. ದರ್ಗಾ ಹಜರತ್‌ಬಾಲ್ ಉದ್ಘಾಟನಾ ಕಲ್ಲಿನಿಂದ ಪವಿತ್ರ ಅಶೋಕ ಲಾಂಛನದ ಧ್ವಂಸವನ್ನು ನಾನು ಬಲವಾಗಿ ಖಂಡಿಸುತ್ತೇನೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವಿಧ್ವಂಸಕ ಕೃತ್ಯವನ್ನು ಬಲವಾಗಿ ಖಂಡಿಸಿದ ರಿಜಿಜು, ಇದನ್ನು ಭಯೋತ್ಪಾದಕ ದಾಳಿ ಎಂದು ಕರೆದರು. ಈ ಕೃತ್ಯ ಎಸಗಿದ ದುಷ್ಕರ್ಮಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಇದಕ್ಕೆ ಜಮ್ಮು ಮತ್ತು ಕಾಶ್ಮೀರದ ವಕ್ಫ್ ಮಂಡಳಿಯ ಅಧ್ಯಕ್ಷೆ ಡಾ. ದರಾಕ್ಷನ್ ಅಂದ್ರಾಬಿ ಪ್ರತಿಕ್ರಿಯಿಸಿದ್ದಾರೆ.

ಈ ಫಟನೆಯ ಬಗ್ಗೆ ಮಾತನಾಡಿರುವ ಅಂದ್ರಾಬಿ, ಈ ಘಟನೆ ತುಂಬಾ ದುರದೃಷ್ಟಕರ. ರಾಷ್ಟ್ರೀಯ ಲಾಂಛನಕ್ಕೆ ಕಳಂಕ ತರುವುದು ಭಯೋತ್ಪಾದಕ ದಾಳಿ ಎಂದು ಪರಿಗಣಿಸುತ್ತೇವೆ. ದಾಳಿಕೋರರು ಒಂದು ರಾಜಕೀಯ ಪಕ್ಷದ ಗೂಂಡಾಗಳು. ಈ ಜನರು ಈ ಹಿಂದೆಯೂ ಕಾಶ್ಮೀರವನ್ನು ನಾಶಪಡಿಸಿದ್ದರು. ಈಗ ಬಹಿರಂಗವಾಗಿ ದರ್ಗಾ ಷರೀಫ್ ಒಳಗೆ ಬಂದಿದ್ದಾರೆ ಎಂದು ಟೀಕಿಸಿದ್ದಾರೆ.

ಅಲ್ಲದೆ, ದರ್ಗಾದ ಮೇಲೆ ದಾಳಿ ಮಾಡಿದ ಗುಂಪು ದೊಡ್ಡ ಅಪರಾಧ ಮಾಡಿದೆ. ಇವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗುವುದು ಎಂದು ಅಂದ್ರಾಬಿ ಹೇಳಿದ್ದಾರೆ.

ಈ ಗುಂಪು ರಾಷ್ಟ್ರೀಯ ಲಾಂಛನಕ್ಕೆ ಕಳಂಕ ತರುವ ಮೂಲಕ ದೊಡ್ಡ ಅಪರಾಧ ಮಾಡಿದೆ. ಅವರು ದರ್ಗಾದ ಘನತೆಗೆ ಹಾನಿ ಮಾಡಿದ್ದಾರೆ. ಕೃತ್ಯ ಎಸಗಿದವರನ್ನು ಗುರುತಿಸಿದ ನಂತರ, ಅವರ ಜೀವಮಾನವಿಡೀ ದರ್ಗಾ ಪ್ರವೇಶಿಸುವುದನ್ನು ನಿಷೇಧಿಸಲಾಗುವುದು ಮತ್ತು ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗುವುದು ಎಂದು ಅಂದ್ರಾಬಿ ತಿಳಿಸಿದ್ದಾರೆ.

ಶ್ರೀನಗರದ ಪವಿತ್ರ ಹಜರತ್‌ಬಾಲ್ ದೇಗುಲದಲ್ಲಿ ಗುಂಪೊಂದು ಶಂಕುಸ್ಥಾಪನೆ ಕಲ್ಲಿನ ಮೇಲಿದ್ದ ಅಶೋಕ ಲಾಂಛನವನ್ನು ಧ್ವಂಸಗೊಳಿಸಿದಾಗ ವಿವಾದ ಭುಗಿಲೆದಿದೆ. ಇದು ರಾಷ್ಟ್ರೀಯ ಚಿಹ್ನೆಗಳು ಮತ್ತು ಧಾರ್ಮಿಕ ಭಾವನೆಗಳ ಬಗ್ಗೆ ಬಿಸಿ ಚರ್ಚೆಗೆ ನಾಂದಿ ಹಾಡಿದೆ.

ಘಟನೆಯ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ದೇವಾಲಯದ ಅಮೃತಶಿಲೆಯ ಫಲಕದ ಮೇಲಿನ ರಾಷ್ಟ್ರೀಯ ಲಾಂಛನವನ್ನು ಗುಂಪೊಂದು ವಿರೂಪಗೊಳಿಸುತ್ತಿರುವುದು ಕಂಡುಬಂದಿದ್ದು, ಪ್ರತಿಮೆಗಳನ್ನು ಕೆತ್ತುವುದು ಇಸ್ಲಾಮಿಕ್ ನೀತಿಗೆ ವಿರುದ್ಧವಾಗಿದೆ ಎಂದು ಗುಂಪು ಆರೋಪಿಸಿದೆ.

ಹಜರತ್‌ಬಾಲ್ ದೇಗುಲವು ಶ್ರೀನಗರದಲ್ಲಿರುವ ಒಂದು ಪೂಜ್ಯ ಧಾರ್ಮಿಕ ತಾಣವಾಗಿದ್ದು, ಪ್ರವಾದಿ ಮೊಹಮ್ಮದ್​ರ ಪವಿತ್ರ ಅವಶೇಷವನ್ನು ಹೊಂದಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net