ಎಲ್ಲ ಸೌಲಭ್ಯ ಇದ್ದರೂ ಬಳಸಿಕೊಳ್ಳುವಲ್ಲಿ ವಿಫಲ: ಡಿ.ಮಂಜುನಾಥ್

4th State Conference of Kannada Medical Writers
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ.ಮಂಜುನಾಥ್ ಪುಸ್ತಕ ಬಿಡುಗಡೆ ಮಾಡಿದರು. ಡಾ.ಕೆ.ಆರ್.ಶ್ರೀಧರ್ ,ಡಾ .ರಕ್ಷಾರಾವ್, ಡಾ ಅರುಣ್ ಡಾ. ಗುರುದತ್ ಡಾ. ವಿನಯ ಶ್ರೀನಿವಾಸ್, ಡಾ.ಶುಭ್ರತಾ ಹಾಗೂ ಡಾ. ಶಿವಾನಂದ ಕುಬಸದ ಇದ್ದರು.
Published on

ಶಿವಮೊಗ್ಗ: ಕರ್ನಾಟಕದಲ್ಲಿ ಎಲ್ಲ ಸೌಲಭ್ಯ ಇದೆ. ಆದರೆ ಅದನ್ನು ಬಳಸಿಕೊಳ್ಳುವಲ್ಲಿ ವಿಫಲವಾಗಿದ್ದೇವೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ.ಮಂಜುನಾಥ್ ಹೇಳಿದರು.

ಕನ್ನಡ ವೈದ್ಯ ಬರಹಗಾರರ 4ನೇ ರಾಜ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ಇಂದು ಕನ್ನಡ ಪತ್ರಿಕೆಗಳನ್ನು ಓದುವವರು ಕಡಿಮೆಯಾಗುತ್ತಿದ್ದಾರೆ. ಆದರೆ ವೈದ್ಯರು ಕನ್ನಡದಲ್ಲಿ ಅತ್ಯಂತ ಮೌಲಿಕ ಕೃತಿ ತಂದು ಕನ್ನಡವನ್ನು ಕಟ್ಟುವ ಕೆಲಸವನ್ನು ಮಾಡುತ್ತಿರುವುದು ಸಂತಸದ ವಿಷಯ ಎಂದರು.
ಪ್ಲೇಗ್ ರೋಗದಿಂದ ತಮ್ಮ ಮನೆಯಲ್ಲಿ ಸಹೋದರರು ಮೃತ ಪಟ್ಟಿದ್ದು ನೋಡಿ ನಾ.ಸು. ಹರ್ಡಿಕರ್ ಅವರು ವೈದ್ಯಕೀಯ ಶಿಕ್ಷಣ ಮಾಡುತ್ತಾರೆ. ಆದರೆ ಗಾಂಧೀಜಿ ಅವರು ಮೊದಲು ದೇಶ ಸ್ವಾತಂತ್ರ್ಯ ಪಡೆಯಲಿ ನಂತರ ಅನೇಕ ಜನ ವೈದ್ಯರು ತಯಾರಾಗುತ್ತಾರೆ ಎಂದು ಹೇಳಿ ಅವರನ್ನು ಸ್ವಾತಂತ್ರ್ಯ ಹೋರಾಟಗಾರರನ್ನಾಗಿ ಮಾಡುತ್ತಾರೆ. ಆದರೆ ಗಾಂಧಿ ಕನಸು ನನಸಾಗಿದೆ. ಇಂದು ವೈದ್ಯರು ಸಾಕಷ್ಟಿದ್ದಾರೆ. ಆದರೆ ಹಂದಿಗೋಡು ಕಾಯಿಲೆ ಮಂಗನಕಾಯಿಲೆಗೆ ಇಂದು ಔಷದ ಸಿಕ್ಕಿಲ್ಲ. ಅನೇಕ ಆಸ್ಪತ್ರೆಗಳಲ್ಲಿ ಸರಿಯಾದ ಕಾಯಿಲೆ ಯಾವುದೆಂದು ಗುರುತಿಸದೆ ಚಿಕಿತ್ಸೆ ನೀಡಿ ರೋಗಿಗಳ ಪ್ರಾಣಕ್ಕೆ ಕುತ್ತು ತರುವಂತೆ ಆಗಿದೆ.ಎಂದು ಸ್ವ ಅನುಭವ ಹೇಳಿದರು. ಹಾಗಾಗಿ ವೈದ್ಯರು ತಾವು ಕೊಡುವ ಚೀಟಿಯನ್ನು ಕನ್ನಡದಲ್ಲಿ ಅರ್ಥವಾಗುವಂತೆ ಬರೆದರೆ ಒಳ್ಳೆಯದು ಎಂದರು.
ಡಾ.ಕೆ.ಆರ್.ಶ್ರೀಧರ್ ಸರ್ವಾಧ್ಯಕ್ಷತೆ ವಹಿಸಿದ್ದರು. ಡಾ .ರಕ್ಷಾರಾವ್, ಡಾ ಅರುಣ್ ಡಾ. ಗುರುದತ್ ಡಾ. ವಿನಯ ಶ್ರೀನಿವಾಸ್, ಡಾ.ಶುಭ್ರತಾ ಹಾಗೂ ಡಾ. ಶಿವಾನಂದ ಕುಬಸದ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net