ನಕಲಿ ದೇಸಿ ತುಪ್ಪ ತಯಾರಿಸುವವರ ವಿರುದ್ಧ ಕಠಿಣ ಕ್ರಮ: ಐವರಿಗೆ ಜೀವಾವಧಿ ಶಿಕ್ಷೆ

ghee
ಸಾಂದರ್ಭಿಕ ಚಿತ್ರ
Published on

ಬರೇಲಿ: ಉತ್ತರ ಪ್ರದೇಶದ ಬರೇಲಿಯ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದ್ದು, ಸಾಕ್ಷ್ಯಾಧಾರಗಳ ಆಧಾರದ ಮೇಲೆ ನಕಲಿ ದೇಸಿ ತುಪ್ಪವನ್ನು ತಯಾರಿಸುವವರ ವಿರುದ್ಧ ನ್ಯಾಯಾಲಯವು ಕಠಿಣ ಕ್ರಮ ಕೈಗೊಂಡಿದೆ. 14 ವರ್ಷಗಳ ನಂತರ ಈ ಪ್ರಕರಣದ ತೀರ್ಪು ಹೊರಬಂದಿದ್ದು ನ್ಯಾಯಾಲಯವು ಐವರಿಗೆ ಶಿಕ್ಷೆ ಜತೆಗೆ 50 ಸಾವಿರ ರೂ. ದಂಡ ವಿಧಿಸಿದೆ.

ಬುಲಂದ್‌ಶಹರ್‌ನ ನಾಲ್ವರು ಮತ್ತು ಬರೇಲಿಯ ಒಬ್ಬರು ಈ ಕಲಬೆರಕೆ ದಂಧೆಯಲ್ಲಿ ತೊಡಗಿದ್ದರು. ಬರೇಲಿಯ ಒಂದು ಪ್ರದೇಶದಲ್ಲಿ ನೆಲಮಾಳಿಗೆಯೊಳಗೆ ನಕಲಿ ದೇಸಿ ತುಪ್ಪ ತಯಾರಿಸುವ ಕೆಲಸ ನಡೆಯುತ್ತಿತ್ತು. ಸಿಕ್ಕ ಮಾಹಿತಿ ಮೇರೆಗೆ 2009ರ ಅಕ್ಟೋಬರ್ 15ರಂದು ಸುಭಾಷ್ ನಗರ ಪೊಲೀಸ್ ಠಾಣೆಯ ಸರ್ವೋದಯ ನಗರದ ಬಳಿಯಿರುವ ಅನಂತ್ ಸಿಮೆಂಟ್ ಟ್ರೇಡರ್ಸ್​ನ ಬೇಸ್ ಮೆಂಟ್ ಮೇಲೆ ಪೊಲೀಸರು ದಾಳಿ ನಡೆಸಿ ಬುಲಂದ್‌ಶಹರ್‌ನ ದಿವಿಯ ಮಹೇಶ್, ಯೋಗೇಂದ್ರ, ಲೋಕಮಾನ್, ಸತ್ಯ ಪ್ರಕಾಶ್ ಮತ್ತು ಬರೇಲಿಯ ಬಿಹಾರಿಪುರದ ಸುಬೋಧ್ ಎಂಬಾತನನ್ನೂ 5 ಬಂಧಿಸಿದ್ದರು. ದಾಳಿ ವೇಳೆ ಸ್ಥಳದಿಂದ ಇಬ್ಬರು ಪರಾರಿಯಾಗಿದ್ದರು.

ಇದನ್ನೂ ಓದಿ: ಪುಲ್ವಾಮಾ: ಅನುಮಾನಾಸ್ಪದವಾಗಿ ಪತ್ತೆಯಾಯ್ತು ಯೋಧನ ಮೃತದೇಹ..

ಈ ವೇಳೆ ಕುಲುಮೆಗೆ ಅಳವಡಿಸಿದ್ದ ಅಲ್ಯೂಮಿನಿಯಂ ಡ್ರಮ್​​ನಲ್ಲಿ ಬಿಸಿ ದೇಸಿ ತುಪ್ಪ ತಯಾರಿಸುತ್ತಿರುವುದು ಪತ್ತೆಯಾಗಿದೆ. ಈ ನಕಲಿ ದೇಸಿ ತುಪ್ಪವನ್ನು ಡಬ್ಬಗಳಲ್ಲಿ ತುಂಬಿಸಲಾಗುತ್ತಿತ್ತು. ರಿಫೈನ್ಡ್ ಎಣ್ಣೆ, ವನಸ್ಪತಿ ತುಪ್ಪ, ದೇಸಿ ತುಪ್ಪದಲ್ಲಿ ಮಿಶ್ರಣ ಮಾಡಲು ಟಿಸಿಎ ಪದಾರ್ಥವನ್ನು ಪೊಲೀಸರು ಸ್ಥಳದಿಂದ ವಶಪಡಿಸಿಕೊಂಡಿದ್ದರು. ಇದೇ ವೇಳೆ ಸ್ಥಳದಿಂದ ಸುಮಾರು 26 ಕ್ವಿಂಟಾಲ್ ನಕಲಿ ದೇಸಿ ತುಪ್ಪವನ್ನು ಪೊಲೀಸರು ವಶಪಡಿಸಿಕೊಂಡಿದ್ದರು.

ಈ ಪ್ರಕರಣದಲ್ಲಿ ನ್ಯಾಯಾಲಯದಲ್ಲಿ ವಿಚಾರಣೆ ಮುಂದುವರೆದಿದ್ದು, ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಕರಣಕ್ಕೆ ಸಂಬಂಧಿಸಿದಂತ ಎಂಟು ಸಾಕ್ಷಿಗಳನ್ನು ಹಾಜರುಪಡಿಸಿದ್ದರು. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಅರವಿಂದ್ ಕುಮಾರ್ ಯಾದವ್ ವಾದ-ಪ್ರತಿವಾದವನ್ನು ಆಲಿಸಿ ಅವರ ನ್ಯಾಯಾಲಯವು ಮಹೇಶ್, ಯೋಗೇಂದ್ರ, ಲೋಕಮಾನ್, ಬುಲಂದ್‌ಶಹರ್‌ನ ಸತ್ಯ ಪ್ರಕಾಶ್ ಮತ್ತು ಬರೇಲಿಯ ಸುಬೋಧ್ ಅವರನ್ನು ಅಪರಾಧಿಗಳೆಂದು ಘೋಷಿಸಿ ಜೀವಾವಧಿ ಶಿಕ್ಷೆ ವಿಧಿಸಿ, ಐವರು ಅಪರಾಧಿಗಳಿಗೆ ತಲಾ 50,000 ರೂಪಾಯಿ ದಂಡವನ್ನೂ ನ್ಯಾಯಾಲಯ ವಿಧಿಸಿದೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net