More

    ಬಾಲಿವುಡ್​​ನ ಈ ನಟನಿಗೆ ಕಪಾಳಮೋಕ್ಷ ಮಾಡಿದರೆ ₹ 10 ಲಕ್ಷ ಬಹುಮಾನ ಎಂದ ಸಂಘಟನೆ: ಕಾರಣ ಹೀಗಿದೆ..

    ದೆಹಲಿ: ಬಾಲಿವುಡ್​ ನಟ ಅಕ್ಷಯ್ ಕುಮಾರ್ ಅಭಿನಯದ​ OMG 2 ಈಗಾಗಲೇ ಬಿಡುಗಡೆಯಾಗಿದ್ದು, ಚಿತ್ರದಲ್ಲಿ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿಲಾಗಿದೆ. ಚಿತ್ರದಲ್ಲಿನ ನಟನ ಅಭಿನಯದ ಮೂಲಕ ಶಿವನ ಪ್ರತಿಷ್ಠೆಗೆ ಧಕ್ಕೆ ತರುವಂತಿದ್ದು, ಇದರಲ್ಲಿನ ಕೆಲ ದೃಶ್ಯಗಳು ಅಸಮಾಧಾನವನ್ನುಂಟು ಮಾಡುತ್ತದೆ ಎಂದು ಹಿಂದೂ ಸಂಘಟನೆಯೊಂದು ಆರೋಪಿಸಿದೆ.

    ಇದನ್ನೂ ಓದಿ: ಮಗ-ಸೊಸೆ ನಡುವೆ ಮನಸ್ತಾಪ: ಮೊಮ್ಮಗನ ಪ್ರಾಣ ತೆಗೆದ ಅಜ್ಜ..

    ಅಲ್ಲದೇ, ಓ ಮೈ ಗಾಡ್ 2 (OMG 2) ನಲ್ಲಿ ಭಗವಾನ್ ಶಿವನ ಸಂದೇಶವಾಹಕನ ಪಾತ್ರದ ಮೂಲಕ ಜನರ ಭಾವನೆಗಳನ್ನು ಘಾಸಿಗೊಳಿಸಿದ್ದಕ್ಕಾಗಿ ಬಾಲಿವುಡ್ ನಟ ಅಕ್ಷಯ್ ಕುಮಾರ್​ಗೆ ಕಪಾಳಮೋಕ್ಷ ಮಾಡಿದರೆ ಆತನಿಗೆ ₹ 10 ಲಕ್ಷ ಬಹುಮಾನವನ್ನು ನೀಡಲಾಗುವುದು ಎಂದು ಸಂಘಟನೆಯ ಅಧ್ಯಕ್ಷ ಗೋವಿಂದ ಪರಾಶರ ಹೇಳಿದ್ದಾರೆ.

    ಈ ನಡುವೆ ಕೆಲವೆಡೆ ಥಿಯೇಟರ್‌ಗಳ ಹೊರಗಡೆ ಚಿತ್ರ ಪ್ರದರ್ಶನದ ನಡುವೆ ಆಗ್ರಾದಲ್ಲಿ ಅಕ್ಷಯ್ ಕುಮಾರ್ ಪ್ರತಿಕೃತಿ ಮತ್ತು OMG 2 ಪೋಸ್ಟರ್‌ಗಳನ್ನು ಸುಟ್ಟು ಹಾಕಲಾಗಿದ್ದು, ಸೆನ್ಸಾರ್ ಮಂಡಳಿ ಮತ್ತು ಕೇಂದ್ರ ಸರ್ಕಾರದಿಂದ ಚಿತ್ರವನ್ನು ನಿಷೇಧಿಸುವಂತೆ ಸಂಘಟನೆಯು ಒತ್ತಾಯಿಸಿದೆ. ಏತನ್ಮಧ್ಯೆ, OMG 2 ತನ್ನ ಆರಂಭಿಕ ದಿನದಂದು ಬಾಕ್ಸ್ ಆಫೀಸ್‌ನಲ್ಲಿ ರೂ 10.26 ಕೋಟಿ ಗಳಿಸಿದೆ. OMG 2 ನಲ್ಲಿ ಪಂಕಜ್ ತ್ರಿಪಾಠಿ ಮತ್ತು ಯಾಮಿ ಗೌತಮ್ ಕೂಡ ನಟಿಸಿದ್ದಾರೆ.(ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts