

ಗಂಗಾವತಿ: ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳಿಗೆ ಪೂರಕವಾದ ರಸಗೊಬ್ಬರಗಳ ದಾಸ್ತಾನು ಕುರಿತು ನಗರದ ಕೃಷಿ ಇಲಾಖೆ ಕಚೇರಿಯಲ್ಲಿ ಮಾರಾಟಗಾರರೊಂದಿಗೆ ವಿಶೇಷ ಸಭೆ ಶನಿವಾರ ಹಮ್ಮಿಕೊಳ್ಳಲಾಗಿತ್ತು.
ಸಹಾಯಕ ಕೃಷಿ ನಿರ್ದೇಶಕ ಸಂತೋಷ ಪಟ್ಟದಕಲ್ ನೇತೃತ್ವದಲ್ಲಿ ಜರುಗಿದ ಸಭೆಯಲ್ಲಿ ಗಂಗಾವತಿ, ಕನಕಗಿರಿ, ಕಾರಟಗಿ ಭಾಗದ ಪಿಎಸ್ಸೆಸ್ಸೆನ್ ಕಾರ್ಯದರ್ಶಿಗಳು ಭಾಗವಹಿಸಿದ್ದರು.
ಮೂರು ತಾಲೂಕಿನ 11 ಪಿಎಸ್ಸೆಸ್ಸೆನ್ ಮತ್ತು 3 ರೈತ ಉತ್ಪಾದಕ ಸಂಘಗಳಲ್ಲಿ ಯೂರಿಯಾ 260 ಟನ್, ಡಿಎಪಿ 38ಟನ್, 10:26:26 60 ಟನ್, 20:20:0:13 75 ಟನ್ ಬೇಡಿಕೆಯಿದ್ದು, ಪ್ರಸ್ತುತ ಯೂರಿಯಾ 376ಟನ್, ಡಿಎಪಿ 114ಟನ್, 10:26:26 191 ಟನ್ ಮತ್ತು 20:20:0:13 324.5ಟನ್ ದಾಸ್ತಾನಿದ್ದು, ಯಾವುದೇ ಕೊರತೆಯಿಲ್ಲ ಎಂದು ಸಹಾಯಕ ಕೃಷಿ ನಿರ್ದೇಶಕ ಸಂತೋಷ ಪಟ್ಟದಕಲ್ ಹೇಳಿದರು.
ರೈತರಿಗೆ ಸಮಸ್ಯೆಯಾಗದಂತೆ ಸಕಾಲಕ್ಕೆ ವಿತರಿಸಬೇಕಿದ್ದು, ದೂರುಗಳು ಬಾರದಂತೆ ಎಚ್ಚರಿಕೆ ವಹಿಸಲು ಸೂಚನೆ ನೀಡಿದರು. ಮಾರಾಟಗಾರರ ಫೆಡರೇಶನ್ ವ್ಯವಸ್ಥಾಪಕ ಅಭಿಷೇಕ ಇದ್ದರು.