Salary Hike ಮಾಡಲ್ಲವೆಂದ ಮಾಲೀಕನ ವಿರುದ್ಧ ಸೇಡು ತೀರಿಸಿಕೊಂಡ ಉದ್ಯೋಗಿ; ಕದ್ದ ಹಣ, ವಸ್ತುಗಳ ಮೌಲ್ಯ ಎಷ್ಟು ಗೊತ್ತಾ?

Money Theft
Published on

ನವದೆಹಲಿ: ಮಾಲೀಕರು ಸಂಬಳ ಹೆಚ್ಚು (Salary Hike) ಮಾಡಲು ನಿರಾಕರಿಸಿದರು ಎಂಬ ಕಾರಣಕ್ಕೆ ವ್ಯಕ್ರಿಯೋರ್ವ ತಾನು ಕೆಲಸ ಮಾಡುತ್ತಿದ್ದ ಶೋರೂಮಿಗೆ ಕನ್ನ ಹಾಕಿ 6 ಲಕ್ಷ ರೂಪಾಯಿ ಹಣವನ್ನು ಕದ್ದು ಪೊಲೀಸರಿಗೆ ಅತಿಥಿಯಾಗಿರುವ ಘಟನೆ ರಾಷ್ಟ್ರರಾಜಧಾನಿ ನವದೆಹಲಿಯಲ್ಲಿ ನಡೆದಿದೆ.

ಬಂಧಿತನನ್ನು ಲುಧಿಯಾನ ಮೂಲದ ಹಸನ್​ ಖಾನ್​ (20) ಎಂದು ಗುರುತಿಸಲಾಗಿದ್ದು, ಈತನನ್ನು ಹುಡುಕಲು ಪೊಲೀಸರು 100ಕ್ಕೂ ಅಧಿಕ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸಿದ್ದು, ಈ ವಿಚಾರ ಎಲ್ಲರ ಹುಬ್ಬೇರುವಂತೆ ಮಾಡಿದೆ.

ಪ್ರಕರಣದ ಕುರಿತು ಮಾಹಿತಿ ನೀಡಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ಆರೋಪಿ ಹಸನ್​ ನರೈನಾದಲ್ಲಿರುವ ಬೈಕ್ ಶೋರೂಮ್​ ಒಂದರಲ್ಲಿ ಕೆಲಸ ಮಾಡುತ್ತಿದ್ದನ್ನು. ಮೂಲತಃ ಲುಧಿಯಾನ ನಿವಾಸಿಯಾಗಿರುವ ಹಸನ್​ ಒಂದು ವರ್ಷಕ್ಕೂ ಹೆಚ್ಚಿನ ಸಮಯದಿಂದ ಬೈಕ್​ ಶೋರೂಮಿನಲ್ಲಿ ಕೆಲಸ ಮಾಡುತ್ತಿದ್ದನ್ನು. ತನ್ನ ಮಾಲೀಕರ ಬಳಿ ಸಂಬಳ ಹೆಚ್ಚಿಸುವಂತೆ (Salary Hike) ಹಸನ್​ ಮನವಿ ಮಾಡಿದ್ದನ್ನು. ಆದರೆ, ಶೋರೂಮಿನ ಮಾಲೀಕರು ಆತನ ಮನವಿಯನ್ನು ಪುರಸ್ಕರಿಸಿರಲಿಲ್ಲ. 

ಮಾಲೀಕರ ನಡೆಯಿಂದ ಸಿಟ್ಟಿಗೆದ್ದಿದ ಹಸನ್​ ಶೋರೂಮಿನಲ್ಲಿ ಕಳ್ಳತನ ಮಾಡಲು ನಿರ್ಧರಿಸಿದ್ದು, ಅದರಂತೆ ಡಿಸೆಂಬರ್ 31ರ ರಾತ್ರಿ ಹೆಲ್ಮೆಟ್​ ಧರಿಸಿ ಆಫೀಸಿನಲ್ಲಿರುವ ಲೈಟ್​ಗಳನ್ನು ಆಫ್​ ಮಾಡಿ 6 ಲಕ್ಷ ರೂಪಾಯಿ ಹಣ ಹಾಗೂ ಕೆಲವು ಬೆಲೆ ಬಾಳುವ ವಸ್ತುಗಳನ್ನು ಕದ್ದು ಪರಾರಿಯಾಗಿದ್ದಾನೆ. ತನ್ನ ಗುರುತು ಸಿಗಬಾರದೆಂದು ಆರೋಪಿ ಹೆಲ್ಮೆಟ್ ಧರಿಸಿದ್ದು, ನಮ್ಮ ಅಧಿಕಾರಿಗಳು 100ಕ್ಕೂ ಅಧಿಕ ಸಿಸಿಟಿವಿ ಕ್ಯಾಮರಾಗಳನ್ನು ಬಳಸಿ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯಿಂದ 5 ಲಕ್ಷ ರೂಪಾಯಿ ನಗದು ಹಾಗೂ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ಪ್ರಕರಣದ ಕುರಿತು ತಿಳಿಸಿದ್ಧಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net