ನಕಾರಾತ್ಮಕ ನಿರಾಕರಿಸುವುದೇ ನಿಜವಾದ ವ್ಯಕ್ತಿತ್ವ

16
Published on

ನಾವು ಸೃಷ್ಟಿಯ ಸಂಗಮ ಪೂಜಿಸುವುದರಿಂದ ವ್ಯಕ್ತಿತ್ವ ಬೆಳೆಯುವುದಿಲ್ಲ. ವ್ಯಕ್ತಿತ್ವ ಎನ್ನುವುದು ಒಂದು ಮುಖವಾಡ. ನಕಾರಾತ್ಮಕವಾಗಿರುವುದನ್ನು ಕಳೆದುಕೊಳ್ಳುವುದೇ ನಿಜವಾದ ವ್ಯಕ್ತಿತ್ವವೇ ಹೊರತು ನಕಾರಾತ್ಮಕ ಅಂಶಗಳನ್ನು ತುಂಬಿಸಿಕೊಳ್ಳುವುದಲ್ಲ ಎಂದು ಖ್ಯಾತ ವಿಮರ್ಶಕ ಪ್ರೊ.ಓ.ಎಲ್.ನಾಗಭೂಷಣಸ್ವಾಮಿ ಹೇಳಿದರು.
ಶರಣ ಸಾಹಿತ್ಯ ಪರಿಷತ್ತು ಮೈಸೂರು ನಗರ ಘಟಕ, ಶೇಷಾದ್ರಿಪುರಂ ಪದವಿ ಕಾಲೇಜು ಬಸವ ಅಧ್ಯಯನ ಕೇಂದ್ರದಿಂದ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ದತ್ತಿ ಕಾರ್ಯಕ್ರಮದಲ್ಲಿ ‘ಬಸವ ವಚನ ಮತ್ತು ವ್ಯಕ್ತಿತ್ವದ ಬೆಳವಣಿಗೆ’ ಕುರಿತು ಅವರು ಮಾತನಾಡಿದರು.
ಭಕ್ತಿ ಮತ್ತು ಪ್ರೀತಿ ಆಚರಣೆ ಅಲ್ಲ. ಇವು ಸುಲಭವಾಗಿ ದೊರಕುವುದಿಲ್ಲ. ಇದಕ್ಕೆ ತುಂಬಾ ಕಷ್ಟ ಪಡಬೇಕು. ಕಳೆದುಕೊಳ್ಳುವುದೇ ನಿಜವಾದ ಭಕ್ತಿ ಮತ್ತು ಪ್ರೀತಿ. ಇದೊಂದು ಸ್ಪರ್ಶ ಅನುಭವ. ನಕಾರಾತ್ಮಕವನ್ನು ನಿರಾಕರಿಸುವುದೇ ನಿಜವಾದ ವ್ಯಕ್ತಿತ್ವ ಎಂದರು.
ಹೊಲಸು ಮಾಡುವುದು ನಮ್ಮ ಹಕ್ಕು. ಶುದ್ಧಗೊಳಿಸುವುದು ನನ್ನ ಕರ್ತವ್ಯ ಅಲ್ಲ ಎಂದು ಇದ್ದೇವೆ. ಕತ್ತಲು ಮತ್ತು ಬೆಳಕು ಬೇರೆಯಲ್ಲ. ನಾವು ಈ ದ್ವಂಧ್ವ್ವವನ್ನು ಮೀರಬೇಕು. ನಾವೆಲ್ಲ ಬೇರೆ ಬೇರೆ ರೂಪದ ದ್ವೀಪಗಳಾಗಿದ್ದೇವೆ. ಎಲ್ಲ ದ್ವೀಪಗಳು ಒಂದೇ ಎಂಬುದನ್ನು ಮರೆತಿದ್ದೇವೆ. ಬಸವಣ್ಣ ಮತ್ತು ಶರಣರು ಜಗತ್ತಿಗೆ ಬೆಳಕು ತೋರಿದ್ದು, ಆ ದಾರಿಯಲ್ಲಿ ನಡೆಯಬೇಕು ಎಂದರು.
ಕನ್ನಡ ವಿಷಯದಲ್ಲಿ 100 ಅಂಕ ಗಳಿಸಿದ್ದ ರಚಿತಾ ಅವರನ್ನು ಅಭಿನಂದಿಸಲಾಯಿತು. ಶರಣ ಸಾಹಿತ್ಯ ಪರಿಷತ್ತಿನ ನಗರ ಘಟಕದ ಅಧ್ಯಕ್ಷ ಮ.ಗು.ಸದಾನಂದಯ್ಯ, ಕಾಲೇಜು ಆಡಳಿತಾಧಿಕರಾರಿ ಬಿ.ಎ.ಅನಂತರಾಮ್, ಪ್ರಾಂಶುಪಾಲರಾದ ಡಾ.ಕೆ.ಸೌಮ್ಯಾ ಈರಪ್ಪ, ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಸಿ.ಪಿ.ಲಾವಣ್ಯಾ, ದತ್ತಿ ದಾನಿಗಳಾದ ಆರ್.ಎಸ್.ಪೂರ್ಣಾನಂದ, ಕೆ.ಎಸ್.ಮೋಹನ್‌ಕುಮಾರ್, ಕಾರ್ಯದರ್ಶಿ ಟಿ.ಎಸ್.ಕುಮಾರಸ್ವಾಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net