ರಾಜ್ಯದಲ್ಲಿ 68 ಸಾವಿರ ಡೆಂಘೆ ಪ್ರಕರಣ: ಆರೋಗ್ಯ ಸಚಿವ

gundurao
Published on

ಬೆಂಗಳೂರು:
ಕಳೆದ ವರ್ಷ ರಾಜ್ಯದಲ್ಲಿ ಈ ಅವಧಿಯಲ್ಲಿ 25 ಸಾವಿರ ಡೆಂಘೆ ಪ್ರಕರಣಗಳಿದ್ದವು. ಈ ಬಾರಿ 68 ಸಾವಿರ ಪ್ರಕರಣ ವರದಿಯಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಬಿಜೆಪಿ ಧನಂಜಯ ಸರ್ಜಿ ಪರವಾಗಿ ಅರುಣ್ ಕುಮಾರ್ ಕೇಳಿದ ಪ್ರಶ್ನೆಗೆ ಉತ್ತರಿಸಿ, ಡೆಂಗ್ಯೂ ಪ್ರಕರಣವನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ಎಲ್ಲ ಇಲಾಖೆಯು ಇದರಲ್ಲಿ ಪಾಲ್ಗೊಂಡು ಜಾಗೃತಿ ಮೂಡಿಸಿ ನಿಯಂತ್ರಣಕ್ಕೆ ಕ್ರಮ ಕೈಗೊಂಡಿದ್ದೇವೆ. ಅಧಿಕೃತ ಮಾಹಿತಿ ನಿಡ್ತಿದ್ದೇವೆ, ಮಾಹಿತಿ ಮುಚ್ಚಿಹಾಕುವ ಕೆಲಸ ಮಾಡಿಲ್ಲ ಎಂದರು.
ಡೆಂಘೆ ತಗುಲಿದ ನಿವಾಸಕ್ಕೆ ಹೋಗಿ ಬೇರೆಯವರಿಗೂ ಬಂದಿದ್ಯಾ ಎಂದು ತಪಾಸಣೆ ಮಾಡ್ತೀದ್ದೇವೆ.
2 ಪ್ರಕರಣ ಬಂದ್ರೆ ಹಾಟ್ ಸ್ಪಾಟ್ ಎಂದು ಪರಿಗಣಿಸಿ ಕೋವಿಡ್ ಮಾದರಿಯಲ್ಲಿ ಸುತ್ತಮುತ್ತಲಿನ ಪ್ರದೇಶದ ಜನರನ್ನು ತಪಾಸಣೆ ಮಾಡಿಸುತ್ತಿದ್ದೇವೆ. ಡೆಂಘೆ ಜ್ವರ ಬಂದವರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಎಲ್ಲರಿಗೂ ಉಚಿತ ಚಿಕಿತ್ಸೆ ನೀಡ್ತಿದ್ದೇವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net