ಗೋವುಗಳ ಮೇಲೆ ಮತ್ತೆ ರಾಕ್ಷಸಿ ಕೃತ್ಯ: ವಿಜಯೇಂದ್ರ ಆಕ್ರೋಶ | Stringent action must

B.Y.Vijayendra
Published on

ಬೆಂಗಳೂರು: ಗೋ ರಕ್ಷಣೆ, ಈ ನೆಲದ ಮಾನವ ಧರ್ಮದ ರಕ್ಷಣೆ, ಈ ನೆಲದ ಸಂಸ್ಕೃತಿಯ ರಕ್ಷಣೆ, ಕೋಟ್ಯಂತರ ಜನರ ಭಾವನೆಯ ರಕ್ಷಣೆ ಎಂದು ಪೂಜಿಸುವ ನಮ್ಮ ಕನ್ನಡ ನಾಡಿನಲ್ಲಿ ಗೋವುಗಳ ಮೇಲೆ ರಾಕ್ಷಸಿ ಕೃತ್ಯಗಳು ನಡೆಯುತ್ರಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಣ ಬಿ.ವೈ.ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ‌.

ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ಈ ಕುರಿತು ಸಂದೇಶ ಹಂಚಿಕೊಂಡಿದ್ದಾರೆ. ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಇತ್ತೀಚೆಗೆ ಪಾಶವಿ  ಮನಸ್ಥಿತಿಯ ಪಾಪಿಗಳು ನಿರ್ದಯವಾಗಿ ಹಸುಗಳ ಕೆಚ್ಚಲನ್ನು ಭೀಕರವಾಗಿ ಕತ್ತರಿಸಿದ್ದ ಅಮಾನುಷ ಕೃತ್ಯ, ಬಳಿಕ ನಂಜನಗೂಡಿನಲ್ಲಿ ಆಕಳ ಬಾಲ ಕತ್ತರಿಸಿ ವಿಕೃತಿ ಮೆರೆದಿದ್ದರು, ಇದೀಗ ಹೊನ್ನಾವರದಲ್ಲಿ ಹಸುವಿನ ರುಂಡ, ಕಾಲು ಕತ್ತರಿಸಿರುವ ಘಟನೆ ಅತ್ಯಂತ ಹೇಯ ದುರ್ಘಟನೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಗೋ ಸುರಕ್ಷತೆಯ ತಾತ್ಸಾರ ಧೋರಣೆ, ಓಲೈಕೆ ರಾಜಕಾರಣದ ನಿಲುವಿನಿಂದಾಗಿ ಗೋ ಭಕ್ಷಕರಿಗೆ ಕಾನೂನಿನ ಭಯವಿಲ್ಲದಂತಾಗಿದೆ. ಪದೇ ಪದೇ ನಮ್ಮ ಸಂಸ್ಕೃತಿ ಪರಂಪರೆಯ ಮೇಲೆ ನಡೆಯುತ್ತಿರುವ ದಾಳಿಯನ್ನು ನಾಡಿನ ಜನ ಸಹಿಸಿಕೊಂಡು ಕೂರುವುದಿಲ್ಲ ಎಂದು ಬಿ.ವೈವಿಜಯೇಂದ್ರ ಗುಡುಗಿದ್ದಾರೆ.

ಕ್ರಮವಹಿಸದಿದ್ದರೆ ಹೋರಾಟ

ಸರ್ಕಾರ ಈ ರೀತಿಯ ಸರಣೀ ರಾಕ್ಷಾಸಿ ಕೃತ್ಯ ಎಸಗುತ್ತಿರುವವರನ್ನು ಹಾಗೂ ಇದರ ಹಿಂದಿರುವ ದುಷ್ಟಶಕ್ತಿಗಳನ್ನು ಶಿಕ್ಷಿಸಲು ಜರೂರು ಕ್ರಮ ಕೈಗೊಳ್ಳದಿದ್ದರೆ ರಾಜ್ಯ ಬಿಜೆಪಿ ಹೋರಾಟಕ್ಕಿಳಿಯಲಿದೆ ಎಂದು ಎಚ್ಚರಿಸಿದ್ದಾರೆ.

ಪುಣ್ಯಕೋಟಿಯ ನಿಷ್ಠೆ, ನ್ಯಾಯ, ಧರ್ಮದ ನಡೆಗೆ ತಲೆಬಾಗಿದ ಹುಲಿರಾಯನೇ ಆತ್ಮಾರ್ಪಣೆ ಮಾಡಿಕೊಂಡ ಕಥೆ ಹೇಳುವ ನಾಡು ನಮ್ಮದು. ಕಾಂಗ್ರೆಸ್ ಸರ್ಕಾರ ಹುಲಿರಾಯನ ಕಥೆಯನ್ನು ಕೇಳಿಯಾದರೂ ಮೃಗೀಯ ವರ್ತನೆ ತೋರುತ್ತಿರುವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಿ ಎಂದು ಬಿ.ವೈ.ವಿಜಯೇಂದ್ರ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net