

ಧಾರವಾಡ: ಕೂಲಿ ಕಾರ್ಮಿಕರಿಗೆ ಉದ್ಯೋಗ ಖಾತ್ರಿ ಅಡಿ ಕೆಲಸ ನೀಡಬೇಕು ಎಂದು ಆಗ್ರಹಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆಯ ಯಾದವಾಡ ಗ್ರಾಮ ಘಟಕದಿಂದ ಬುಧವಾರ ಮನವಿ ಸಲ್ಲಿಸಲಾಯಿತು.
ಗ್ರಾಮೀಣ ಭಾಗದ ಜನರು ಬರಗಾಲದಿಂದ ತತ್ತರಿಸಿ ಹೋಗಿದ್ದಾರೆ. ರೈತ ಕೂಲಿ ಕಾರ್ಮಿಕರು ಬೆಳೆ ಇಲ್ಲದೆ, ಜೀವನ ನೆಡೆಸುವುದು ದುಸ್ತರವಾಗಿದೆ. ಬಿತ್ತನಗೆ ಖರ್ಚು ಮಾಡಿದ ಹಣ ವಾಪಸ್ ಬರದೆ ಪರದಾಡುತ್ತಿದ್ದಾರೆ. ಗ್ರಾಮೀಣ ಭಾಗದ ಜನರಿಗೆ ನೆರವಿಗಾಗಿಯೇ ಜಾರಿ ಮಾಡಿರುವ ನರೇಗಾ ಯೋಜನೆ ಅಡಿ ಎಲ್ಲ ಕೂಲಿ ಕಾರ್ಮಿಕರಿಗೆ ಕೆಲಸ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದರು.
ಜಿಲ್ಲಾ ಕಾರ್ಯದರ್ಶಿ ಶರಣು ಗೋನವಾರ, ಗ್ರಾಮ ಘಟಕದ ಅಧ್ಯಕ್ಷ ಶಿವಪ್ಪ ಕುಂಬಾರ, ಕಾರ್ಯದರ್ಶಿ ಬಸು ಗಳಗಿ, ಉಪಾಧ್ಯಕ್ಷ ಚಂದ್ರು ತಳವಾರ, ರತ್ನವ್ವ ತೋಟಗೇರ, ಸಬಿನಾ ಗಾಟಿನಾ, ಶಾಂತವ್ವ ತೇಲಕರ, ಇತರಿದ್ದರು.