ಗೌತಮ್ ಅದಾನಿ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಒತ್ತಾಯ

kalluru megharaj manavi
ಉದ್ಯಮಿ ಗೌತಮ್ ಅದಾನಿ ಮತ್ತು ಸಹಚರರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ ಪದಾಧಿಕಾರಿಗಳು ಎಡಿಸಿ ಸಿದ್ದಲಿಂಗ ರೆಡ್ಡಿ ಅವರಿಗೆ ಮನವಿ ಸಲ್ಲಿಸಿದರು. ಕಲ್ಲೂರು ಮೇಘರಾಜ್, ಪ್ರೊ.ಕಲ್ಲನ, ಶಂಕರನಾಯಕ ಇತರರಿದ್ದರು.
Published on

ಶಿವಮೊಗ್ಗ: ಉದ್ಯಮಿ ಗೌತಮ್ ಅದಾನಿ ಮತ್ತು ಸಹಚರರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರಕ್ಕೆ ಸೂಚಿಸುವಂತೆ ಒತ್ತಾಯಿಸಿ ಶನಿವಾರ ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ ಪದಾಧಿಕಾರಿಗಳು ಅಪರ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.

ಗೌತಮ್ ಅದಾನಿ ಮತ್ತು ಸಹಚರರ ಮೇಲೆ ಅಮೇರಿಕಾದ ನ್ಯಾಯಾಂಗ ಇಲಾಖೆ 2,029 ಕೋಟಿ ರೂ. ಲಂಚ ಆರೋಪ ಹೊರಿಸಿದೆ. ಅದಾನಿ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಅಮೇರಿಕಾ ಸರ್ಕಾರಕ್ಕೆ ಮುಂದಿನ ತನಿಖೆಗೆ ಒಪ್ಪಿಸಲು ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿದರು.

ಅದಾನಿ ಮತ್ತು ಸಹಚರರ ಮೇಲೆ ಗುರುತರವಾದ ಆರ್ಥಿಕ ಅಪರಾಧವನ್ನು ಅಮೇರಿಕ ವಿನಿಮಯ ನಿಯಂತ್ರಣ ಸಂಸ್ಥೆ ಹೊರಿಸಿದೆ. ಕೇಂದ್ರ ಸರ್ಕಾರ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಟ್ರಸ್ಟ್‌ನ ವ್ಯವಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ್, ಪ್ರಮುಖರಾದ ಪ್ರೊ. ಕಲ್ಲನ, ಶಂಕರನಾಯಕ, ಜಿ.ವಿ.ಮಂಜುಳಾ, ಕೋಡ್ಲು ಶ್ರೀಧರ, ಕೆ.ಆರ್.ಶಿವಣ್ಣ, ಎಚ್.ಪಿ.ಬಾಬು, ಡಾ. ಷಣ್ಮುಖಪ್ಪ, ಟಿ.ಬಿ.ಸೋಮಶೇಖರಯ್ಯ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net