ಪ್ರಭಾವಿಗಳ ಒತ್ತುವರಿ ಭೂಮಿ ತೆರವಿಗೆ ಪಟ್ಟು

snp raitha manvi
ಮಾಜಿ ಶಾಸಕ ಕೆ.ಆರ್.ರಮೇಶ್ ಕುಮಾರ್ ಅವರು ಒತ್ತುವರಿ ಮಾಡಿಕೊಂಡಿರುವ ಅರಣ್ಯ ಭೂಮಿ ವಶಪಡಿಸಿಕೊಳ್ಳುವಂತೆ ಒತ್ತಾಯಿಸಿ ರೈತಸಂಘದ ಮುಖಂಡರು ಹಾಗೂ ಕಾರ್ಯಕರ್ತರು ಅರಣ್ಯಾಧಿಕಾರಿ ಮಂಜುನಾಥ್ ಅವರಿಗೆ ಮನವಿ ಸಲ್ಲಿಸಿದರು.
Published on

ಶ್ರೀನಿವಾಸಪುರ: ಮಾಜಿ ಶಾಸಕ ಕೆ.ಆರ್.ರಮೇಶ್‌ಕುಮಾರ್ ಅವರ ಜಿಗಲಕುಂಟೆ ಅರಣ್ಯ ಸರ್ವೇ ನಂ.1 ಮತ್ತು 2 ರಲ್ಲಿ 61 ಎಕರೆ ಸರ್ವೇ ಮಾಡಿ ಒತ್ತುವರಿ ತೆರವುಗೊಳಿಸಿ ಕಾನೂನಿನಲ್ಲಿ ಜನಸಾಮಾನ್ಯರಿಗೂ ರಾಜಕಾರಣಿಗಳಿಗೂ ಒಂದೇ ಕಾನೂನು ಎಂಬುದನ್ನು ಸಾಬೀತುಪಡಿಸಬೇಕು ಎಂದು ರೈತ ಸಂಘದ ಸಂಚಾಲಕ ಬಂಗವಾದಿ ನಾಗರಾಜ್‌ಗೌಡ ಒತ್ತಾಯಿಸಿದರು.

ಪಟ್ಟಣದ ವಲಯ ಅರಣ್ಯ ಇಲಾಖೆ ಕಚೇರಿ ಮುಂಭಾಗ ಸೋಮವಾರ ವಲಯ ಅರಣ್ಯ ಅಧಿಕಾರಿ ರವಿಕೀರ್ತಿ ಅವರಿಗೆ ಕೆ.ಆರ್.ರಮೇಶ್‌ಕುಮಾರ್ ಅವರ ಜಿಗಲಕುಂಟೆ ಅರಣ್ಯ ಸರ್ವೆ ಮಾಡುವಂತೆ ಒತ್ತಾಯಿಸಿ ಮನವಿ ಸಲ್ಲಿಸಿ ಮಾತನಾಡಿದರು.

ಹಣಬಲ, ಅಧಿಕಾರ ಬಲ ಇಲ್ಲದ ಸಾವಿರಾರು ರೈತರ ಭೂಮಿಯನ್ನು ಅಧಿಕಾರಿಗಳು ಕಿತ್ತುಕೊಂಡಿದ್ದಾರೆ. ಜವಾಬ್ದಾರಿ ಸ್ಥಾನದಲ್ಲಿ ಅಧೀಕಾರ ಅನುಭವಿಸಿರುವ ರಮೇಶ್‌ಕುಮಾರ್ ಅವರ 61 ಎಕರೆ ಜತೆಗೆ ಹಿಂದಿನ ಜಿಲ್ಲಾಧಿಕಾರಿ, ಎಸಿ, ಸರ್ವೇ ಇಲಾಖೆಯ ಉಪ ನಿರ್ದೇಶಕರು 65 ಎಕರೆ ಅರಣ್ಯ ಭೂಮಿಗೆ ಮಿಸ್ಸಿಂಗ್ ದಾಖಲೆ ಸೃಷ್ಟಿ ಮಾಡಿರುವ ಕುರಿತಂತೆ ಕ್ರಮ ಇಲ್ಲವೇ ಎಂದು ಪ್ರಶ್ನಿಸಿದರು.

ಹತ್ತಾರು ವರ್ಷಗಳ ಹಿಂದೆ ರಾಜಕೀಯ ಬಲದಿಂದ ಕಾನೂನು ಬಾಹಿರವಾಗಿ ಒಂದೊAದು ಕುಟುಂಬಕ್ಕೆ 5 ರಿಂದ 100 ಎಕರೆವರೆಗೂ ಅರಣ್ಯ ಭೂಮಿ ಮಂಜೂರು ಮಾಡುವ ಮೂಲಕÀ ಅರಣ್ಯ ಭೂಮಿಗೆ ನಕಲಿ ದಾಖಲೆ ಸೃಷ್ಟಿ ಮಾಡಿ ನೂರಾರು ಕೋಟಿ ರೂ. ಬ್ಯಾಂಕ್ ಸಾಲ ಪಡೆದಿರುವ ಭೂಗಳ್ಳರ ವಿರುದ್ಧ ಅರಣ್ಯ ಅಽಕಾರಿಗಳು ಸಿಂಹಸ್ವಪ್ನವಾಗಿ ಭೂಗಳ್ಳರ ನಿದ್ದೆಗೆಡಿಸಬೇಕು ಎಂದು ಒತ್ತಾಯಿಸಿದರು.

ತಾಲೂಕು ಅಧ್ಯಕ್ಷ ತರ‍್ನಹಳ್ಳಿ ಆಂಜಿನಪ್ಪ ಮಾತನಾಡಿ, ಬಡವರ ಬದುಕನ್ನು ಬೀದಿಗೆ ತಳ್ಳಿ ೧೦ ಸಾವಿರ ಕೋಟಿ ರೂ. ಅರಣ್ಯ ಆಸ್ತಿ ಉಳಿಸಿದ್ದೇವೆ ಎಂದು ಹೇಳುವುದು ಸಾಧನೆ ಅಲ್ಲ, ನೂರಾರು ಎಕರೆ ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡಿರುವ ಬಲಾಢ್ಯರ ಒತ್ತುವರಿ ತೆರೆವುಗೊಳಿಸಿದಾಗ ಮಾತ್ರ ಅರಣ್ಯಧಿಕಾರಿಗಳ ಸಾಧನೆ ಏನು ಎಂಬುದನ್ನು ಅರಿಯಬಹುದು ಎಂದರು.

ಸಾವಿರಾರು ಎಕರೆ ಅರಣ್ಯ ಭೂಮಿಯನ್ನು ತೆರವುಗೊಳಿಸಲು ಸರ್ವೇ ಮಾಡಿಸಬೇಕು. ಜತೆಗೆ ಒತ್ತುವರಿದಾರರಿಗೆ ಸಹಕರಿಸಿರುವ ಕಂದಾಯ, ಸರ್ವೆ ಇಲಾಖೆ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕೈಗೊಂಡು ಒತ್ತುವರಿದಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಇಲ್ಲದಿದ್ದರೆ ಬಡ ರೈತರ ಭೂಮಿ ವಾಪಸ್ ನೀಡುವಂತೆ ಒತ್ತಾಯಿಸಿ ಹೋರಾಟಕ್ಕೆ ಚಾಲನೆ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ರೈತ ಸಂಘದ ರಾಜ್ಯ ಸಂಚಾಲಕ ಬಂಗವಾದಿ ನಾಗರಾಜ್‌ಗೌಡ, ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಆಲವಾಟಿ ಶಿವ, ದ್ಯಾವಂಡಹಳ್ಳಿ ರಾಜೇಂದ್ರ ರೆಡ್ಡಿ, ಸಹದೇವಣ್ಣ, ಶಫಿ, ತಿಮ್ಮಣ್ಣ, ಗಿರೀಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net