ಅಂಗನವಾಡಿ ಹುದ್ದೆಗಳಿಗೆ ಉರ್ದು ಕಡ್ಡಾಯ ರದ್ದುಗೊಳಿಸುವಂತೆ ಆಗ್ರಹ

hindu janajagruti samiti protest
ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳಿಗೆ ಉರ್ದು ಭಾಷೆ ಕಡ್ಡಾಯ ರದ್ದುಗೊಳಿಸುವಂತೆ ಆಗ್ರಹಿಸಿ ಹಿಂದು ಜನಜಾಗೃತಿ ಸಮಿತಿ ಪದಾಧಿಕಾರಿಗಳು ಡಿಸಿ ಕಚೇರಿ ಎದುರು ಪ್ರತಿಭಟಿಸಿದರು. ವಿಜಯ ರೇವಣಕರ, ಪದಾಧಿಕಾರಿಗಳಾದ ದಿನೇಶ್ ಚೌಹಾಣ್, ಶ್ಯಾಮ್ ಸುಂದರ್, ಪರಿಸರ ರಮೇಶ್, ಕಾರ್ತಿಕ್, ವಾಗೀಶ್, ಕೃಷ್ಣ, ನವೀನ್‌ಕುಮಾರ್ ಆಯನೂರು, ಪ್ರಭಾಕರ್, ಶಿವಾಜಿ, ವಾಸಣ್ಣ ಇದ್ದರು.
Published on

ಶಿವಮೊಗ್ಗ: ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳಿಗೆ ಉರ್ದು ಭಾಷೆ ಕಡ್ಡಾಯ ರದ್ದುಗೊಳಿಸುವಂತೆ ಆಗ್ರಹಿಸಿ ಹಿಂದು ಜನಜಾಗೃತಿ ಸಮಿತಿ ಪದಾಧಿಕಾರಿಗಳು ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ರಾಜ್ಯದ ಅಂಗನವಾಡಿ ಕಾರ್ಯಕರ್ತೆ ಅಥವಾ ಸಹಾಯಕಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಾಗ ಉರ್ದು ಭಾಷೆಯನ್ನು ಆಯ್ಕೆ ಮಾಡದಿದ್ದೆ ಅರ್ಜಿಯ ಮುಂದಿನ ಪ್ರಕ್ರಿಯೆ ಸಾಧ್ಯವಿಲ್ಲ. ಈ ಮೂಲಕ ರಾಜ್ಯ ಸರ್ಕಾರ ಹಿಂದುಗಳಿಗೆ ಅನ್ಯಾಯ ಮಾಡುತ್ತಿದೆ. ಕರ್ನಾಟಕದಲ್ಲಿ ಕನ್ನಡವೇ ರಾಜ್ಯಭಾಷೆ. ಈ ರೀತಿ ಉರ್ದು ಭಾಷೆ ಕಡ್ಡಾಯ ಮಾಡಿ ಕನ್ನಡಿಗರಿಗೆ ಅವಮಾನ ಮಾಡುವುದು ಸರಿಯಲ್ಲ ಎಂದು ದೂರಿದರು.
ಕಾಂಗ್ರೆಸ್ ಆಡಳಿತದ ರಾಜ್ಯದಲ್ಲಿ ಪದೇ ಪದೇ ಹಿಂದುಗಳ ಮೇಲೆ ತುಷ್ಟಿಕರಣ ನೀತಿ ಅನುಸರಿಸಲಾಗುತ್ತಿದೆ. ಉಡುಪಿಯಲ್ಲಿ ಪ್ರಾಚಾರ್ಯ ಬಿ.ಜಿ.ರಾಮಕೃಷ್ಣ ಅವರು ಹಿಜಾಬ್‌ಗೆ ವಿರೋಧಿಸಿದ್ದರು ಎಂಬ ಕಾರಣಕ್ಕೆ ಅವರಿಗೆ ಸಲ್ಲಬೇಕಿದ್ದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ರದ್ದುಗೊಳಿಸಿದ್ದರು. ನಾಮಮಂಗಲದಲ್ಲಿ ಶಾಂತಿಯುತವಾಗಿ ನಡೆಯುತ್ತಿದ್ದ ಗಣೇಶೋತ್ಸವ ಮೇಲೆ ಮುಸ್ಲಿಮರು ಕಲ್ಲು ತೂರಾಟ ಮಾಡಿದ್ದರೂ ಪ್ರಕರಣದಲ್ಲಿ ಹಿಂದುಗಳ ಹೆಸರು ಸೇರಿಸಲಾಗಿತ್ತು. ಇತ್ತೀಚಿಗೆ ಇಂತಹ ಹಲವು ಘಟನೆಗಳು ಕಾಂಗ್ರೆಸ್‌ನ ಓಲೈಕೆ ರಾಜಕಾರಣಕ್ಕೆ ಸಾಕ್ಷಿಯಾಗಿವೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ಹಿಂದುಗಳ ಮೇಲೆ ನಡೆಸುತ್ತಿರುವ ಅನ್ಯಾಯಕ್ಕೆ ಕೊನೆಯೇ ಇಲ್ಲವಾಗಿದೆ. ಇದೀಗ ಅಂಗನವಾಡಿ ಹುದ್ದೆಗಳ ಬಗ್ಗೆ ಸರ್ಕಾರದ ಈ ನಿಲುವಿನಿಂದ ಜನತೆಯಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು ಸಮಸ್ತ ಹಿಂದುಗಳು ಈ ಬಗ್ಗೆ ಧ್ವನಿ ಎತ್ತುತ್ತಿದ್ದಾರೆ. ಹೀಗಾಗಿ ಇಲಾಖೆಯ ಈ ಆದೇಶವನ್ನು ಕೂಡಲೇ ಹಿಂಪಡೆದು ಜಾಲತಾಣದಲ್ಲಿ ಅವಶ್ಯಕ ಬದಲಾವಣೆ ಮಾಡಬೇಕೆಂದು ಮನವಿ ಮಾಡಿದರು.
ಸಮಿತಿ ಜಿಲ್ಲಾ ಸಮನ್ವಯಕ ವಿಜಯ ರೇವಣಕರ, ಪದಾಧಿಕಾರಿಗಳಾದ ದಿನೇಶ್ ಚೌಹಾಣ್, ಶ್ಯಾಮ್ ಸುಂದರ್, ಪರಿಸರ ರಮೇಶ್, ಕಾರ್ತಿಕ್, ವಾಗೀಶ್, ಕೃಷ್ಣ, ನವೀನ್‌ಕುಮಾರ್ ಆಯನೂರು, ಪ್ರಭಾಕರ್, ಶಿವಾಜಿ, ವಾಸಣ್ಣ ಮತ್ತಿತರರು ಪ್ರತಿಭಟನೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net