ಅಕ್ರಮ ಕಟ್ಟಡಗಳಿಗೆ ವಿದ್ಯುತ್​ ಸಂಪರ್ಕ ನೀಡದಂತೆ ಆಗ್ರಹ

19-RNR-04
Published on

ರಾಣೆಬೆನ್ನೂರ: ನಗರದಲ್ಲಿ ಅಕ್ರಮವಾಗಿ ನಿಮಿರ್ಸಿದ ನಿವೇಶನಗಳಲ್ಲಿನ ಕಟ್ಟಡಗಳಿಗೆ ಹೆಸ್ಕಾಂ ಅಧಿಕಾರಿಗಳು ವಿದ್ಯುತ್​ ಸಂಪರ್ಕ ಕೊಡುತ್ತಿದ್ದು, ಕೂಡಲೇ ಇದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂ ಹಾಗೂ ಹಸಿರು ಸೇನೆ ಕಾರ್ಯಕರ್ತರು ಮತ್ತು ಅಲ್ತಾ್​ ನಗರದ ಸುತ್ತಲಿನ ನಿವಾಸಿಗಳು ಸೋಮವಾರ ಹೆಸ್ಕಾಂ ಎಇಇ ವಸಂತ ಹಿರೇಬಿದರಿ ಅವರಿಗೆ ಮನವಿ ಸಲ್ಲಿಸಿದರು.

ನೇತೃತ್ವ ವಹಿಸಿದ್ದ ರೈತ ಸಂದ ತಾಲೂಕು ಅಧ್ಯಕ್ಷ ಹನುಮಂತಪ್ಪ ಕಬ್ಬಾರ ಮಾತನಾಡಿ, ನಗರದಲ್ಲಿರುವ ಅಕ್ರಮ ಕಟ್ಟಡ ಮತ್ತು ಅನಧಿಕೃತ ಬಡಾವಣೆಗಳಲ್ಲಿ ನಿಮಿರ್ಸಿದ ಕಟ್ಟಡಗಳಿಗೆ ವಿದ್ಯುತ್​ ಸಂಪರ್ಕ ನೀಡಬಾರದು ಎಂದು ತಹಸೀಲ್ದಾರ್​ರು, ನಗರಸಭೆ ಆಯುಕ್ತರು ಆದೇಶಿಸಿದ್ದರು.

ಆದರೆ, ಹೆಸ್ಕಾಂ ಕೆಲ ಅಧಿಕಾರಿಗಳು ಒಂದು ಮನೆಗೆ 5ರಿಂದ 10 ಸಾವಿರ ರೂ. ಪಡೆದು ವಿದ್ಯುತ್​ ಸಂಪರ್ಕ ನೀಡಿದ್ದಾರೆ. ಇದರಿಂದಾಗಿ ಅಕ್ರಮವಾಗಿ ನಿಮಿರ್ಸಿದ ಬಡಾವಣೆಗಳ ಮಾಲೀಕರಿಗೆ ಯಾವುದೆ ಭಯವಿಲ್ಲದ ವಾತಾವರಣ ನಿರ್ಮಾಣಗೊಂಡಿದೆ. ಅಲ್ಲದೆ ಅಧಿಕಾರಿಗಳು ವಿದ್ಯುತ್​ ಸಂಪರ್ಕ ಕೊಡುವಲ್ಲಿ ಭ್ರಷ್ಟಾಚಾರ ಎಸಗಿದ್ದಾರೆ.

ಆದ್ದರಿಂದ ಸಂಬಂಧಪಟ್ಟ ಮೇಲಧಿಕಾರಿಗಳು ಕೂಡಲೇ ಈ ಕುರಿತು ಪರಿಶೀಲಿಸಿ ತನಿಖೆ ಕೈಗೊಳ್ಳಬೇಕು. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದರೆ ಹೆಸ್ಕಾಂ ಕಚೇರಿ ಎದುರು ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.

ಪ್ರಮುಖರಾದ ರಾಜೇಶ ಅಂಗಡಿ, ಮಂಜುನಾಥ ಸಂಬೋಜ, ಮಂಜುನಾ ಗುಡ್ಡಣ್ಣನವರ, ಯಲ್ಲವ್ವ ಚಿಕ್ಕಣ್ಣನವರ, ರಮೇಶ ಲಮಾಣಿ, ಬಾನು ಹಲಗೇರಿ, ಸಲ್ಮಾಬಾನು ಶಿಡೇನೂರ, ರೇಷ್ಮಾ ಹೊನ್ನಾಳಿ, ಶಬೀನಾ ಗಂದದ, ಹಮೀದಾ ಶಿಡೇನೂರ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net