ರುದ್ರಾಕ್ಷಿಗೆ ಸ್ವಿಜರ್ಲೆಂಡ್​ನಲ್ಲಿ ಬೇಡಿಕೆ

rudrakshi
Published on

ನವದೆಹಲಿ: ಒಮ್ಮೆ ಭಾರತೀಯರ ಆಧ್ಯಾತ್ಮಿಕ ಬಳಕೆಗೆ ಸೀಮಿತವಾಗಿದ್ದ ರುದ್ರಾಕ್ಷಿ ಬೀಜಗಳು ಈಗ ಸ್ವಿಜರ್ಲೆಂಡ್​ನಲ್ಲಿ ಜನಪ್ರಿಯವಾಗುತ್ತಿವೆ. ಭಾರತೀಯ ವಲಸಿಗರು ಮತ್ತು ಸ್ಥಳೀಯ ಸ್ವಿಸ್ ಜನರಿಂದ ರುದಾಕ್ಷಿಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಇದು ಈಗ ಒಂದು ಸೀಮಿತ ಮಾರುಕಟ್ಟೆಯಾಗಿದ್ದು, ಅ. 1ರಿಂದ ಜಾರಿಗೆ ಬರುವ ಭಾರತ-ಐರೋಪ್ಯ ಒಕ್ಕೂಟದ ವ್ಯಾಪಾರ ಒಪ್ಪಂದದಿಂದ ಹೆಚ್ಚಿನ ವಿಸ್ತಾರ ಪಡೆದುಕೊಳ್ಳಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸ್ವಿಜರ್ಲೆಂಡ್​ನ 27,000ಕ್ಕೂ ಹೆಚ್ಚಿನ ಭಾರತೀಯ ವಲಸಿಗರು ಈಗಾಗಲೇ ರುದ್ರಾಕ್ಷಿಗಳನ್ನು ಸಾಮಾನ್ಯವಾಗಿ ಖರೀದಿಸುತ್ತಿದ್ದಾರೆ.

ಇದೀಗ ಸ್ಥಳೀಯ ಸ್ವಿಸ್ ಜನರು ಆರೋಗ್ಯ ಕಾಳಜಿಗಾಗಿ ಮತ್ತು ಧ್ಯಾನದ ವೇಳೆ ಬಳಸಲು ಇವುಗಳನ್ನು ಖರೀದಿಸಲು ಆರಂಭಿಸಿದ್ದಾರೆ. ರುದ್ರಾಕ್ಷಿಗಳು ದೇಹವನ್ನು ತಂಪಾಗಿಸುವ ಶಕ್ತಿ ಹೊಂದಿವೆ ಎಂದು ಹೇಳುವ ಜ್ಯೂರಿಚ್​ನ ಆನ್​ಲೈನ್ ಯೋಗ ಅಂಗಡಿಯೊಂದು ಸರಳ ರುದ್ರಾಕ್ಷಿ ಮಾಲೆಯನ್ನು 50 ಸ್ವಿಸ್ ಫ್ರಾಂಕ್​ಗೆ (ಸುಮಾರು 4,650 ರೂ.) ಮಾರಾಟ ಮಾಡುತ್ತಿದೆ. ಸ್ವಿಸ್ ಆನ್​ಲೈನ್ ಚಿಲ್ಲರೆ ವ್ಯಾಪಾರಿಗಳು ಮತ್ತು ಯೋಗ ಅಂಗಡಿಗಳಲ್ಲೂ ರುದ್ರಾಕ್ಷಿ ಮಾಲೆಗಳಿಗೆ ಬೇಡಿಕೆ ಕುದುರಿದೆ. ಹರಿದ್ವಾರ, ದೆಹಲಿ ಮತ್ತು ಜೈಪುರದಂತಹ ನಗರಗಳಿಂದ ಇಲ್ಲಿಗೆ ರುದ್ರಾಕ್ಷಿಗಳು ಬರುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net