ರೈತರಿಗೆ ಮರು ಸಾಲ ವಿತರಣೆ ಮಾಡುವಂತೆ ಪಟ್ಟು

raitha protest
ರೈತರಿಗೆ ಹಾಗೂ ಸ್ತ್ರೀ ಶಕ್ತಿ ಸಂಘಗಳಿಗೆ ಮರು ಸಾಲ ವಿತರಣೆ ಮಾಡಬೇಕೆಂದು ಒತ್ತಾಯಿಸಿ, ರಾಜ್ಯ ರೈತ ಸಂ ಹಾಗೂ ಹಸಿರು ಸೇನೆ ಕಾರ್ಯಕರ್ತರು ಕೋಲಾರದ ಡಿಸಿಸಿ ಬ್ಯಾಂಕ್​ ಎದುರು ಪ್ರತಿಭಟಿಸಿದರು.
Published on

ಕೋಲಾರ: ಸಕಾಲಕ್ಕೆ ಸಾಲ ಮರುಪಾವತಿ ಮಾಡಿರುವ ರೈತರಿಗೆ ಹಾಗೂ ಸ್ತ್ರೀ ಶಕ್ತಿ ಸಂಘಗಳಿಗೆ ಮರು ಸಾಲ ವಿತರಣೆ ಮಾಡಬೇಕೆಂದು ಒತ್ತಾಯಿಸಿ, ರೈತ ಸಂ ಹಾಗೂ ಹಸಿರು ಸೇನೆ ಕಾರ್ಯಕರ್ತರು ನಗರದ ಡಿಸಿಸಿ ಬ್ಯಾಂಕ್​ ಎದುರು ಶುಕ್ರವಾರ ಪ್ರತಿಭಟಿಸಿದರು.

ರೈತ ಸಂಘದ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ಒಂದು ಕಾಲದಲ್ಲಿ ರೈತರ, ಮಹಿಳೆಯರ ಮನೆಮಾತಾಗಿದ್ದು, ಬ್ಯಾಂಕ್​ ಈಗ ಜನರಿಂದ ದೂರವಾಗುತ್ತಿದೆ. ಇದಕ್ಕೆಲ್ಲ ಸರ್ಕಾರ, ಅಧಿಕಾರಿಗಳೇ ಕಾರಣವಾಗಿದ್ದಾರೆ. ಸ್ವಾಭಿಮಾನದ ಬದುಕು ನೀಡಿರುವ ಬ್ಯಾಂಕ್​ನಿಂದ ಪಡೆದಿರುವ ಸಾಲವನ್ನು ಯಾವುದೇ ಅಡೆತಡೆ ಇಲ್ಲದೆ ಪ್ರಮಾಣಿಕವಾಗಿ ಮರು ಪಾವತಿ ಮಾಡಿದ್ದಾರೆ. ಆದರೆ ಮರು ಸಾಲ ವಿತರಣೆ ಮಾಡಲು ಅಧಿಕಾರಿಗಳು ಏಕೆ ವಿಳಂಬ ಮಾಡುತ್ತಿದ್ದೀರಾ..?, ರಾಜಕೀಯ ವ್ಯಕ್ತಿಗಳ ಒತ್ತಡವೇ ಇಲ್ಲವೇ ಖಾಸಗಿ ೈನಾನ್ಸ್​ ಮಾಲೀಕರ ಜತ ಆಡಳಿತದ ಅಧಿಕಾರಿಗಳು ಶಾಮೀಲಾಗಿದ್ದಾರೆಯೆ ಎಂದು ಪ್ರಶ್ನಿಸಿದರು.

ಮಹಿಳಾ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ ಮಾತನಾಡಿ, ಮುಂಗಾರು ಮಳೆ ಅವಾಂತರಗಳಿಂದ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಬೆಳೆದಿರುವ ಬೆಳೆ ನೀರು ಪಾಲಾಗಿದ್ದು, ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದ್ದರೂ ತೋಟದಲ್ಲಿಯೇ ಬೆಳೆ ನಾಶವಾಗಿ ಸಂಕಷ್ಟದಲ್ಲಿದ್ದಾರೆ. ಕೂಡಲೇ ಸಾಲ ವಿತರಣೆ ಮಾಡುವ ಮೂಲಕ ನೆರವಿಗೆ ದಾವಿಸಬೇಕು ಎಂದು ಒತ್ತಾಯಿಸಿದರು.

ಒಂದು ವಾರದೊಳಗೆ ಯಾವುದೇ ಷರತ್ತು ಇಲ್ಲದೆ ರೈತ ಕೂಲಿಕಾರ್ಮಿಕರಿಗೆ ಸ್ತ್ರೀಶಕ್ತಿ ಸಂಘಗಳಿಗೆ ಸಾಲ ವಿತರಣೆ ಮಾಡದಿದ್ದರೆ ರೈತರು ಮತ್ತು ರೈತ ಮಹಿಳೆಯರು ಕಾನೂನು ಕೈಗೆ ಎತ್ತಿಕೊಳ್ಳುವ ಮೂಲಕ ನ್ಯಾಯ ಪಡೆದುಕೊಳ್ಳಬೇಕಾಗುತ್ತದೆ ಎಂಬ ಎಚ್ಚರಿಕೆ ನೀಡಿದರು.

ಸಂದ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್​, ಮರಗಲ್​ ಶ್ರೀನಿವಾಸ್​, ಆಂಜಿನಪ್ಪ, ಗಿರೀಶ್​, ವೆಂಕಟೇಶಪ್ಪ, ನರಸಿಂಹಪ್ಪ, ಚಂದ್ರಪ್ಪ, ಸುಪ್ರೀಂಚಲ, ಅಪ್ಪೋಜಿರಾವ್​, ಶೈಲಜ, ರಾಧಮ್ಮ, ರತ್ಮಮ್ಮ, ಚೌಡಮ್ಮ, ಸುಗುಣ, ವೆಂಕಟಮ್ಮ, ಭಾರತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net