ತಂಬಾಕು ಬೆಲೆ ಏರಿಕೆಗೆ ಆಗ್ರಹ

KATTEMALAVADI
ಹೊಸೂರು ಕುಮಾರ್
Published on

ಕಟ್ಟೆಮಳಲವಾಡಿ: ತಂಬಾಕು ಮಂಡಳಿ ಖರೀದಿದಾರರ ಮನವೊಲಿಸಿ ಬೆಲೆ ಏರಿಕೆ ಮಾಡಬೇಕು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಆಗ್ರಹಿಸಿದರು.

ಕಟ್ಟೆಮಳವಾಡಿ ತಂಬಾಕು ಹರಾಜು ಮಾರುಕಟ್ಟೆಗೆ ಭೇಟಿ ನೀಡಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಖರೀದಿದಾರರು ಆಂಧ್ರಪ್ರದೇಶದಲ್ಲಿ ಕೆ.ಜಿ.ತಂಬಾಕಿಗೆ 290 ರೂ. ನೀಡಿ ಖರೀದಿಸುತ್ತಿದ್ದರೆ, ಕರ್ನಾಟಕದಲ್ಲಿ ಮಾತ್ರ 231 ರೂ.ಗಳಿಗೆ ಖರೀದಿಸುತ್ತಿದ್ದಾರೆ. ಇದರಿಂದ ರೈತರಿಗೆ 60 ರೂ. ನಷ್ಟ ಉಂಟಾಗುತ್ತಿದೆ. ಆದ್ದರಿಂದ ಒಂದು ವಾರದಲ್ಲಿ ತಂಬಾಕು ಬೆಲೆ ಏರಿಕೆಯಾಗದಿದ್ದರೆ ತಂಬಾಕು ಮಂಡಳಿ ಹಾಗೂ ಖರೀದಿದಾರರ ವಿರುದ್ಧ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು. ಮೋದೂರು ಶಿವಣ್ಣ, ಚಂದ್ರೇಗೌಡ, ಧನಂಜಯ, ಮಹದೇವ, ರಾಮೇಗೌಡ ಮುಂತಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net