

ಶಿವಮೊಗ್ಗ: ಚರ್ಮಕಾರ ಹಾಗೂ ಉಪಜಾತಿಯವರಿಗೆ ಒಳ ಮೀಸಲಾತಿ ಜಾರಿ ಮಾಡಬೇಕು. ಈ ಸಮುದಾಯಗಳ ಅಭಿವೃದ್ಧಿಗೆ ಪ್ರತ್ಯೇಕವಾಗಿ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಎಂದು ಆಗ್ರಹಿಸಿ ಅಖಿಲ ಕರ್ನಾಟಕ ಚರ್ಮಕಾರ ಮಹಾಸಭಾ ಜಿಲ್ಲಾ ಶಾಖೆಯಿಂದ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಕ್ರಿಸ್ತಪೂರ್ವದ ಅವಧಿಯಿಂದಲೂ ಚರ್ಮದ ಉದ್ಯೋಗ ಚಾಲ್ತಿಯಲ್ಲಿದೆ. ಚರ್ಮಕಾರ ಜಾತಿಯಲ್ಲಿ ಸಮಗಾರ, ಮಾಚಿಗಾರ, ಮೋಚಿ, ಡೋರ ಮುಂತಾದ ಜಾತಿಗಳಿವೆ. ಈ ಎಲ್ಲ ಸಮಾಜದವರು ಅಸ್ಪಶ್ಯರಾಗಿದ್ದಾರೆ. ಶೇ.15ರ ಅಡಿಯಲ್ಲಿ ಇವರಿಗೆ ಮೀಸಲಾತಿ ಸವಲತ್ತುಗಳು ಸಿಗುತ್ತಿಲ್ಲ. ಬಹುಪಾಲು ಚರ್ಮಕಾರರು ಇಂದಿಗೂ ಕೈಯಿಂದಲೇ ಚರ್ಮದ ಪಾದರಕ್ಷೆ ಮಾಡುತ್ತಿದ್ದಾರೆ. ಈ ಸಮುದಾಯಕ್ಕೆ ಪ್ರತ್ಯೇಕವಾಗಿ ಶೇ.3ರಷ್ಟು ಮೀಸಲಾತಿ ನೀಡಬೇಕು. ಪ್ರತ್ಯೇಕ ಅಭಿವೃದ್ಧಿ ನಿಗಮ ರಚಿಸಬೇಕೆಂದು ಆಗ್ರಹಿಸಿದರು.
ಚನ್ನವೀರಪ್ಪ ಗಾಮನಗಟ್ಟಿ, ಬಾಬಣ್ಣ, ವೆಂಕಟರಮಣ, ಗೋವಿಂದ ನಾಯಕ, ನಾಗೇಂದ್ರ, ಶಿವಾನಂದ್, ವಿನಯ್ ಕಾನಡೆ, ಪ್ರಶಾಂತ್, ಸುಮಂತ್ ಇತರರಿದ್ದರು