

ಬೆಂಗಳೂರು: ಸೇನಾ ಕಾರ್ಯದಲ್ಲಿ ಯಶಸ್ಸು ಪಡೆದ ಬಳಿಕ ಡ್ರೋನ್‌ಗಳು ವಿವಿಧ ಕ್ಷೇತ್ರದಲ್ಲಿ ಬಳಕೆಯಾಗುತ್ತಿದ್ದು, ಭವಿಷ್ಯದಲ್ಲಿ ಡ್ರೋನ್ ಪೈಲಟ್‌ಗಳಿಗೆ ಬೇಡಿಕೆ ಹೆಚ್ಚಾಗಲಿದೆ ಎಂದು ಎಸ್‌ಎಸ್‌ಆರ್‌ಡಿಪಿ ಟ್ರಸ್ಟ್‌ನ ಏರ್ ಕಮಾಂಡ್ ಆರ್.ಎನ್.ಮಿರಾನಿ ತಿಳಿಸಿದರು.
ಭಾರತದ ಡ್ರೋನ್ ಆರ್ಥಿಕತೆಯನ್ನು ಸಬಲೀಕರಣಗೊಳಿಸುವ ಸಲುವಾಗಿ ಶ್ರೀ ಶ್ರೀ ಗ್ರಾಮೀಣ ಅಭಿವೃದ್ಧಿ ಟ್ರಸ್ಟ್ ‘ಡಿಇಎ್ವೈ ಅಂತರಿಕ್ಷಯಾನ’ ಸಹಭಾಗಿತ್ವದಲ್ಲಿ ಎಸ್‌ಎಸ್‌ಆರ್‌ಡಿಪಿ ಕುಶಲ ತರಬೇತಿ ಕೇಂದ್ರದಲ್ಲಿ ಪ್ರಥಮ ಡ್ರೋನ್ ಪೈಲಟ್ ತರಬೇತಿ ಕಾರ್ಯಕ್ರಮದ ಸಮಾರೋಪದಲ್ಲಿ ಅವರು ಮಾತನಾಡಿದರು.
ಪ್ರಸ್ತುತ ಡ್ರೋನ್‌ಗಳು ದಿನನಿತ್ಯದ ಜೀವನದಲ್ಲಿ ಭಾಗವಾಗತೊಡಗಲಿವೆ. ತುರ್ತು ಔಷಧಿ ಹಾಗೂ ರಕ್ತದ ಸರಬರಾಜಿನ ಕಾರ್ಯ, ಭೂಮಾಪನ, ಭೂ ಸಮೀಕ್ಷೆ , ಕೃಷಿ ಸಮೀಕ್ಷೆಯಲ್ಲಿ ಬಳಕೆ ಮಾಡಲಾಗುತ್ತಿದೆ. ಇದರಿಂದಾಗಿ ಭವಿಷ್ಯದಲ್ಲಿ ಡ್ರೋನ್ ಪೈಲಟ್‌ಗಳಿಗೆ ಬೇಡಿಕೆ ಬರಲಿದೆ ಎಂದರು.
ಡಿಇಎ್ವೈ ಏರೋಸ್ಪೇಸ್‌ನ ಸಮೃದ್ಧಿ ಪಾಂಡೆ ಮಾತನಾಡಿ, ಡಿಇಎ್ವೈ ಏರೋಸ್ಪೇಸ್ ಹಾಗೂ ವ್ಯಕ್ತಿ ವಿಕಾಸ ಕೇಂದ್ರದ ಸಹಯೋಗದಲ್ಲಿ ಹೆಚ್ಚಿನ ಸಾಧನೆಯನ್ನು ಮಾಡಲಾಗಿದೆ. ಭಾರತವು ಈಗ ‘ಜಾಗತಿಕ ಡ್ರೋನ್ ಸಮಾವೇಶ’ ನಡೆಸಲು ಯತ್ನಿಸುತ್ತಿರುವಾಗಲೇ ಈ ತರಬೇತಿ ಸರಿಯಾದ ಸಮಯಕ್ಕೆ ಒದಗಿ ಬಂದಿದೆ. ತಂತ್ರಜ್ಞಾನದ ಮುಂದುವರಿದ ಬಳಕೆಯಿಂದ ಹಾಗೂ ಹೆಚ್ಚಿನ ಉತ್ಪಾದನಾ ಸಾಮರ್ಥ್ಯದಿಂದ, ಸುರಕ್ಷಿತವಾಗಿ ಡ್ರೋನ್‌ಗಳನ್ನು ಚಲಾಯಿಸಬಲ್ಲ ಡ್ರೋನ್ ಪೈಲಟ್‌ಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಗ್ರಾಮೀಣ ಭಾಗದಲ್ಲಿ ಬಹುತೇಕ ಯುವಕರಿಗೆ ಡ್ರೋನ್ ತರಬೇತಿಯನ್ನು ಪಡೆದುಕೊಳ್ಳುವ ಅವಕಾಶವೇ ಸಿಕ್ಕಿಲ್ಲ. ಎಸ್‌ಎಸ್‌ಆರ್‌ಡಿಪಿ ಸಹಯೋಗದಿಂದಾಗಿ ಡಿಇಎ್ವೈನ ಶೈಕ್ಷಣಿಕ ಪ್ರಯತ್ನ ಭಾರತದ ಮೂಲೆ ಮೂಲೆಗೂ ತಲುಪಬಹುದಾಗಿದೆ ಎಂದು ತಿಳಿಸಿದರು.
ವಾರ ಕಾಲ ನಡೆದ ಕಾರ್ಯಕ್ರಮದಲ್ಲಿ ಡಿಜಿಸಿಎ ಅನುಮೋದಿತ ತರಬೇತುದಾರ, ಮುಖ್ಯ ಡ್ರೋನ್ ಪೈಲಟ್ ತರಬೇತುದಾರ ಕೃಷ್ಣಮೂರ್ತಿ ಬದರಿನಾರಾಯನ್ ಅವರು ಶಿಕ್ಷಾರ್ಥಿಗಳಿಗೆ ತರಬೇತಿಯನ್ನು ನೀಡಿದರು.
ಸೆ.4ರಿಂದು ಮತ್ತೊಂದು ಸುತ್ತಿನ ತರಬೇತಿ:
ಇತ್ತೀಚಿಗೆ ಆರ್ಟ್ ಆ್ ಲಿವಿಂಗ್‌ನ ಎಸ್‌ಎಸ್‌ಆರ್‌ಡಿಪಿಯ ಕುಶಲ ತರಬೇತಿ ಕೇಂದ್ರವು ಡಿಇಎ್ವೈ ಅಂತರಿಕ್ಷಯಾನದ ಸಹಯೋಗದೊಂದಿಗೆ, ರಿಮೋಟ್ ಪೈಲಟ್ ತರಬೇತಿ ಪಡೆಯುವ ಪರವಾನಗಿಯನ್ನು ಡಿಜಿಸಿಎಯಿಂದ ಪಡೆದುಕೊಂಡಿದೆ. ಇದರಿಂದಾಗಿ ಈ ಕೇಂದ್ರದಿಂದ ಯುವಕರು, ಗ್ರಾಮೀಣರು, ಅಂಗವಿಕರನ್ನು ಸೇರಿ ವಿವಿಧ ವರ್ಗ ಜನರಿಗೆ ಡ್ರೋನ್ ಕ್ಷೇತ್ರದಲ್ಲಿ ಪರಿಣಿತರನ್ನಾಗಿ ಮಾಡುವ ಗುರಿಯನ್ನು ಹೊಂದಿದೆ. ಮುಂಬರುವ ಸೆ.4ರಿಂದ ಮತ್ತೊಂದು ಸುತ್ತಿನ ತರಬೇತಿ ಕಾರ್ಯಾಗಾರ ಆರಂಭವಾಗಲಿದೆ.