ಕಾಂಪೌಂಡ್ ದುರಸ್ತಿಗೆ ಒತ್ತಾಯ

27BTP01
Published on

ಬೆಟ್ಟದಪುರ: ಬೆಟ್ಟದಪುರದ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರದ ಕಾಂಪೌಂಡ್ ದುರಸ್ತಿ ಮಾಡದ ಬಗ್ಗೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ವಾಹನವೊಂದು ರೈತ ಸಂಪರ್ಕ ಕೇಂದ್ರದ ಕಾಂಪೌಂಡ್‌ಗೆ ಆರು ತಿಂಗಳ ಡಿಕ್ಕಿ ಹೊಡೆದಿದ್ದರಿಂದ ಬಿರುಕು ಬಿಟ್ಟಿತ್ತು. ಆಗಲೋ ಈಗಲೋ ಬಿದ್ದು ಹೋಗುವಂತಿದೆ. ಆದರೆ, ಈವರೆಗೆ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಳ್ಳದಿರುವುದು ಬೇಸರದ ಸಂಗತಿ. ಕೂಡಲೇ ಕಾಂಪೌಂಡ್ ದುರಸ್ತಿ ಮಾಡಬೇಕು. ಸಾರ್ವಜನಿಕ ಆಸ್ತಿಗಳಿಗೆ ಹಾನಿ ಉಂಟು ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.


ಬೆಟ್ಟದಪುರ ರೈತ ಸಂರ್ಪಕ ಕೇಂದ್ರದಲ್ಲಿ ಬಾಕಿ ಇರುವ ಇನ್ನೊಂದು ಭಾಗದ ಕಾಂಪೌಂಡ್ ನಿರ್ಮಾಣಕ್ಕೆ ಈಗಾಗಲೇ ಜಿಲ್ಲಾ ಪಂಚಾಯಿತಿಯಿಂದ ಕಾಮಗಾರಿಗೆ ಮಂಜೂರಾಗಿದೆ. ಈ ವೇಳೆ ಶಿಥಿಲಗೊಂಡಿರುವ ಕಾಂಪೌಂಡ್ ಕೂಡ ದುರಸ್ತಿ ಮಾಡಲಾಗುವುದು ಎಂದು ಕೇಂದ್ರದ ಕೃಷಿ ಅಧಿಕಾರಿ ಪ್ರವೀಣ್ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net