ಉಜ್ವಲ ಯೋಜನೆಯ ಗ್ರಾಹಕರಿಗೆ ಮನೆ ಬಾಗಿಲಿಗೆ ಸಿಲಿಂಡರ್​ ವಿತರಣೆ

gas cylindar
Published on

ಬೆಂಗಳೂರು: ಉಜ್ವಲ ಯೋಜನೆಯ ಗ್ರಾಹಕರಿಗೆ ಮುಂದಿನ 3 ತಿಂಗಳು ನೀಡುವ ಉಚಿತ ಎಲ್ಪಿಜಿ ಸಿಲಿಂಡರ್​ಅನ್ನು ಮನೆ ಬಾಗಿಲಿಗೆ ವಿತರಣೆ ಸಿಬ್ಬಂದಿ ತಲುಪಿಸಲಿದ್ದಾರೆ ಎಂದು ಇಂಡಿಯನ್ ಆಯಿಲ್ ಕಾಪೋರೇಷನ್ ಲಿಮಿಟೆಡ್ ತಿಳಿಸಿದೆ.

ರಾಜ್ಯದಲ್ಲಿ 30 ಲಕ್ಷ ಉಜ್ವಲ ಫಲಾನುಭವಿಗಳು ಇದ್ದಾರೆ. ಇವರು ಯಾವುದೇ ದೂರವಾಣಿ ಸಂಖ್ಯೆಯಿಂದ ಐವಿಆರ್​ಎಸ್, ವಾಟ್ಸ್ ಆಪ್, ಪೇಟಿಎಂ ಹಾಗೂ ಆನ್​ಲೈನ್ ಮೂಲಕ ಸಿಲಿಂಡರ್ ಬುಕ್ ಮಾಡಿದರೆ ಮನೆ ಬಾಗಿಲಿಗೇ ಪೂರೈಕೆಯಾಗಲಿದೆ. ವಿತರಕರು ಜೆರಾಕ್ಸ್ ಪ್ರತಿಗಳನ್ನು ಕೇಳಬಾರದು.

ಎಲ್​ಪಿಜಿ ಸಬ್ಸಿಡಿ ಗ್ರಾಹಕರ ಖಾತೆಗೆ ನೇರವಾಗಿ ಜಮೆಯಾಗಲಿದೆ. ಯಾರೂ ಗ್ಯಾಸ್ ಏಜೆನ್ಸಿಗಳಿಗೆ ತೆರಳಬಾರದು ಎಂದು ಐಒಸಿಎಲ್ ತಿಳಿಸಿದೆ. ಖಾತೆ ಬದಲಾವಣೆಯಾಗಿದ್ದಲ್ಲಿ ವಿತರಕರನ್ನು ಸಂರ್ಪಸಿ. ನಕಲು ಪ್ರತಿ ಯಂತ್ರಗಳ ಸಮಸ್ಯೆ ಇದ್ದಲ್ಲಿ ವಿತರಕರು ಡಿಜಿಟಲ್ ಮೂಲಕ ಕಾಪಿ ಪಡೆಯಬೇಕು. ಜೆರಾಕ್ಸ್ ಪ್ರತಿ ತರುವಂತೆ ಒತ್ತಾಯಿಸದಂತೆ ಐಒಸಿಎಲ್ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net