ಈ ಭಾಷೆ ಮಾತಾಡು! ಇಲ್ಲ ಅಂದ್ರೆ... ಪಿಜ್ಜಾ ಪಡೆದು ಹಣ ಕೊಡದೆ ಡೆಲಿವರಿ ಬಾಯ್​ ಕಳಿಸಿದ ದಂಪತಿ; ವಿಡಿಯೋ ವೈರಲ್​ | Delivery Agent

ವಿಜಯವಾಣಿ - 2025-05-13T220850.656
Published on

Delivery Agent: ಡೊಮಿನೊಸ್​ ಪಿಜ್ಜಾ ಆರ್ಡರ್​ ಮಾಡಿದ್ದ ಮುಂಬೈ ದಂಪತಿ, ತಮ್ಮ ಆರ್ಡರ್​ ಡೆಲಿವರಿ ಮಾಡಲು ಬಂದ ಯುವಕನಿಗೆ ಮರಾಠಿ ಭಾಷೆಯಲ್ಲೇ ಮಾತನಾಡಬೇಕು ಎಂದು ಒತ್ತಾಯ ಹೇರಿದ್ದಲ್ಲದೇ ಆತನಿಗೆ ಹಣ ಕೊಡದೆ ವಾಪಾಸ್ ಕಳಿಸಿದ ಘಟನೆ ಮುಂಬೈನ ಭಂಡಪ್​ನಲ್ಲಿ ವರದಿಯಾಗಿದೆ.

ಹಿಂದಿ-ಮರಾಠಿ ಭಾಷೆ ವಿಚಾರಕ್ಕೆ ಡೆಲಿವರಿ ಬಾಯ್ ಮತ್ತು ದಂಪತಿ ನಡುವೆ ತೀವ್ರ ವಾಗ್ವಾದ ನಡೆದಿದೆ. ಫುಡ್ ಡೆಲಿವರಿ ಸಮಯದಲ್ಲಿ ಹಿಂದಿ ಭಾಷೆಯಲ್ಲೇ ನಿಮ್ಮ ಪಿಜ್ಜಾ ತೆಗೆದುಕೊಳ್ಳಿ ಎಂದ ಡೆಲಿವರಿ ಬಾಯ್ ರೋಹಿತ್​ಗೆ ದಂಪತಿಗಳು ಮರಾಠಿ ಭಾಷೆ ಮಾತನಾಡುವಂತೆ ಒತ್ತಾಯ ಹೇರಿದ್ದಾರೆ. ನೀನು ಇಲ್ಲಿ ಮರಾಠಿಯಲ್ಲೇ ಮಾತನಾಡಬೇಕು. ಹಾಗಿದ್ರೆ ಮಾತ್ರ, ನಾನು ಆರ್ಡರ್​ ಪಡೀತಿನಿ ಮತ್ತು ಅದಕ್ಕೆ ಹಣ ಕೊಡ್ತೀನಿ. ಇಲ್ಲದಿದ್ರೆ ಹಣ ಕೊಡಲ್ಲ ಎಂದು ಮಹಿಳೆ ಹೇಳಿದ್ದಾಳೆ.

ಇದಕ್ಕೆ ಪ್ರತಿಕ್ರಿಯಿಸಿದ ರೋಹಿತ್​, "ಮರಾಠಿಯಲ್ಲಿ ಮಾತನಾಡಬೇಕು ಎಂದಿದ್ದರೆ ಆರ್ಡರ್​ ಮಾಡುವ ಮುನ್ನವೇ ಸೂಚಿಸಬೇಕಿತ್ತು. ನಿಮಗೆ ಹಣ ಕೊಡಲು ಆಗಲ್ಲ ಎಂದರೆ ನನಗೇನು ತೊಂದರೆಯಿಲ್ಲ. ಆದರೆ, ಈ ರೀತಿ ಎಲ್ಲ ಮಾತನಾಡಬೇಡಿ. ಇದು ಯಾವ ರೀತಿಯ ಬಲವಂತ ಅನ್ನೋದೇ ನನಗೆ ಗೊತ್ತಾಗ್ತಿಲ್ಲ" ಎಂದು ಕೆಲ ಸಮಯ ಮಹಿಳೆ ಜೊತೆ ವಾಗ್ವಾದ ನಡೆಸಿದ ಡೆಲಿವರಿ ಏಜೆಂಟ್​, ಕಡೆಗೂ ಹಣ ಪಡೆಯದೆ ಅಲ್ಲಿಂದ ವಾಪಾಸ್ ಆಗಿದ್ದಾರೆ.

ಈ ಕುರಿತು ರೋಹಿತ್ ಸಂಸ್ಥೆಗೆ ದೂರು ಸಲ್ಲಿಸಿದ್ದೇ ಆದರೂ ಕಂಪನಿಯಿಂದ ಮಾತ್ರ ಇನ್ನೂ ಪ್ರತಿಕ್ರಿಯೆ ಬಂದಿಲ್ಲ ಎಂದು ವರದಿಯಾಗಿದೆ. ಸದ್ಯ ವಿಡಿಯೋ ಜಾಲತಾಣಗಳಲ್ಲಿ ಹರಿದಾಡಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net