ಕಿಡ್ನಿ ವೈಫಲ್ಯದಿಂದ ದೆಹಲಿ ಝೂನಲ್ಲಿ ಮೃತಪಟ್ಟ ಬಿಳಿಹುಲಿಗೂ ಕರೊನಾ ಸೋಂಕಿತ್ತಾ? ಪರೀಕ್ಷಾ ವರದಿಯಲ್ಲಿ ಏನಿದೆ?

Tiger
Published on

ನವದೆಹಲಿ: ಕಿಡ್ನಿ ವೈಫಲ್ಯದಿಂದ ದೆಹಲಿ ಮೃಗಾಲಯದಲ್ಲಿ ಮೃತಪಟ್ಟಿದ್ದ ಕಲ್ಪನಾ ಹೆಸರಿನ ಬಿಳಿಹುಲಿಯಲ್ಲಿ ಕರೊನಾ ನಗೆಟಿವ್​ ಪತ್ತೆಯಾಗಿದೆ ಎಂದು ಮೃಗಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಕಲ್ಪನ ಕಿಡ್ನಿ ವೈಫಲ್ಯವಲ್ಲದೇ, ಇತರೆ ವಯೋಸಹಜ ಕಾಯಿಲೆಗಳಿಂದ ಸಾವಿಗೀಡಾಗಿದೆ. ಕರೊನಾದಿಂದಲೇ ಸಾವಿಗೀಡಾಗಿದೆ ಎನ್ನವುದಕ್ಕೆ ಯಾವುದೇ ರೋಗ ಲಕ್ಷಣಗಳು ಕಂಡುಬಂದಿಲ್ಲ. ಆದಾಗ್ಯೂ ಮೃಗಾಲಯ ಆಡಳಿತ ಮಂಡಳಿಯ ಸಲಹೆಯಂತೆ ಜೈವಿಕ ಭದ್ರತೆಗಾಗಿ ಹುಲಿಯ ಸ್ಯಾಂಪಲ್​ ಸಂಗ್ರಹಿಸಿ ಬರೇಲಿಯಲ್ಲಿರುವ ಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆ (ಐವಿಆರ್​ಐ)ಗೆ ಕಳುಹಿಸಲಾಯಿತು. ಇದೀಗ ಹುಲಿಯಲ್ಲಿ ಕೋವಿಡ್​-19 ನಗೆಟಿವ್​ ಪತ್ತೆಯಾಗಿದೆ ಎಂದು ಐವಿಆರ್​ಐ ಖಚಿತ ಪಡಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಕಲ್ಪನಾ ಬುಧವಾರ ಸಂಜೆ 6.30ಕ್ಕೆ ಸಾವಿಗೀಡಾಯಿತು. ಗುರುವಾರ ಅದರ ಅಂತ್ಯಕ್ರಿಯೆಯನ್ನು ನೆರವೇರಿಸಲಾಗಿದೆ. ಸರ್ಕಾರದ ಸೂಚನೆಗಳನ್ನು ಗಮನದಲ್ಲಿಟ್ಟುಕೊಂಡ ಕೆಲವೇ ಮಂದಿ ಸೇರಿ ಅಂತ್ಯಕ್ತಿಯೆಯನ್ನು ನೆರವೇರಿಸಲಾಗಿದೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net