

ನವ ದೆಹಲಿ: ಪೂರ್ವ ದೆಹಲಿಯ ಚಂದರ್ ವಿಹಾರ್ ಪ್ರದೇಶದಲ್ಲಿ ಶನಿವಾರ ಬೆಳಗ್ಗೆ 16 ವರ್ಷದ ಬಾಲಕ ತನ್ನ ಮನೆಯ ಸ್ನಾನಗೃಹದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆ ಮಾಡಿಕೊಂಡ ಬಾಲಕ ಅಂಕಿತ್ ಬಡೋಲಾ ನ್ಯಾಷನಲ್ ವಿಕ್ಟರ್ ಶಾಲೆಯಲ್ಲಿ 11 ನೇ ತರಗತಿ ವಿದ್ಯಾರ್ಥಿಯಾಗಿದ್ದನು.
ಮಧು ವಿಹಾರ್ ಬಳಿಯ ಚಂದರ್ ವಿಹಾರ್ ಪ್ರದೇಶದಲ್ಲಿ ಬಾಲಕ ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ಬೆಳಗ್ಗೆ 7.06ಕ್ಕೆ ಪಿಸಿಆರ್ಗೆ ಕರೆ ಬಂದಿದ್ದು, ಬಾತ್ ರೂಂನಲ್ಲಿ ಕಿಟಕಿಯ ರಾಡ್ಗೆ ಹಗ್ಗ ಕಟ್ಟಿ ನೇಣು ಬಿಗಿದ ಸ್ಥಿತಿಯಲ್ಲಿ ಬಾಲಕ ಪತ್ತೆಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಡೆತ್ ನೋಟ್ನಲ್ಲಿ ಏನಿತ್ತು?
ಡೆತ್ ನೋಟ್ ಲೆಟರ್ನಲ್ಲಿ ಅಧ್ಯಯನದ ಒತ್ತಡದ ಬಗ್ಗೆ ಸ್ಪಷ್ಟವಾಗಿ ತಿಳಿಯುತ್ತದೆ. ಇದರಲ್ಲಿ ಅವನು ಓದುವ ವಿಚಾರದಲ್ಲಿ ಹೆತ್ತವರ ನಿರೀಕ್ಷೆಗಳನ್ನು ಪುರೈಸದಿರುವುದಕ್ಕಾಗಿ ಹತಾಶೆಯನ್ನು ವ್ಯಕ್ತಪಡಿಸಿದ್ದಾನೆ. ಅಂಕಿತ್‌ನ ತಂದೆ ಆರ್ಕಿಟೆಕ್ಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಅವನ ಅಕ್ಕ ದೆಹಲಿ ವಿಶ್ವವಿದ್ಯಾಲಯದ (ಡಿಯು) ವಿದ್ಯಾರ್ಥಿನಿ. ಹೆಚ್ಚಿನ ತನಿಖೆಗಳು ನಡೆಯುತ್ತಿವೆ.