ಮೂರು ತಿಂಗಳ ಬಳಿಕ ಸಾವಿರಕ್ಕಿಂತಲೂ ಕೆಳಕ್ಕಿಳಿದ ಕರೊನಾ ಕೇಸ್​; ಅಚ್ಚರಿಯ ಸುಧಾರಣೆ ಎಲ್ಲಿ?

delhi_covid_centre
Published on

ನವದೆಹಲಿ: ಹೊಸ ಕರೊನಾ ಪ್ರಕರಣಗಳನ್ನು ನಿಯಂತ್ರಿಸುವಲ್ಲಿ ರಾಷ್ಟ್ರ ರಾಜಧಾನಿ ಮಹತ್ವದ ಯಶಸ್ಸು ಪಡೆದಿದೆ.

ಕಳೆದ ಮೂರು ತಿಂಗಳಿಂದ ದೆಹಲಿಯಲ್ಲಿ ಪ್ರತಿದಿನ ಸಾವಿರಕ್ಕೂ ಅಧೀಕ ಪ್ರಕರಣಗಳು ವರದಿಯಾಗುತ್ತಿದ್ದವು. 3 ಸಾವಿರ- 4 ಸಾವಿರ ತಲುಪುವುದು ಸಾಮಾನ್ಯ ಸಂಗತಿಯಾಗಿತ್ತು. ಈ ಕಾರಣಕ್ಕಾಗಿ ಮುಂಬೈಯನ್ನು ದೆಹಲಿ ಮೀರಿಸುತ್ತಾ ಎಂಬ ಆತಂಕವೂ ಎದುರಾಗಿತ್ತು.

ಕಳೆದ 24 ಗಂಟೆಗಳಲ್ಲಿ ದೆಹಲಿಯಲ್ಲಿ ಹೊಸದಾಗಿ ವರದಿಯಾಗಿರುವ ಪ್ರಕರಣಗಳ ಸಂಖ್ಯೆ 954ಕ್ಕೆ ಇಳಿದಿದೆ. ಮೇ 27ರ ಬಳಿಕ ಇಷ್ಟೊಂದು ಕಡಿಮೆ ಪ್ರಮಾಣದಲ್ಲಿ ಸೋಂಕಿತರು ಪತ್ತೆಯಾಗಿರುವುದು ಇದೇ ಮೊದಲಾಗಿದೆ. 35 ಜನರು ಮೃತಪಟ್ಟಿದ್ದಾರೆ.

ಸದ್ಯ ದೆಹಲಿಯಲ್ಲಿ 1,23,747 ಸೋಂಕಿತರಿದ್ದು, ಒಟ್ಟಾರೆ 1,784 ಜನರು ಕೋವಿಡ್​ನಿಂದ ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹತ್ತು ಸಾವಿರ ಬೆಡ್​ಗಳ ಬೃಹತ್​ ಆಸ್ಪತ್ರೆ ಸ್ಥಾಪಿಸಿ ಸೋಂಕಿತರನ್ನು ಚಿಕಿತ್ಸೆ ಹಾಗೂ ಐಸೋಲೇಷನ್​ಗೆ ಒಳಪಡಿಸುತ್ತಿರುವ ಕಾರಣ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡು ಬಂದಿದೆ ಎಂದು ಹೇಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net