

ನವದೆಹಲಿ: 2025ರ ಫೆಬ್ರವರಿ ತಿಂಗಳಲ್ಲಿ ನಡೆಯಲಿರುವ ದೆಹಲಿ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಆಡಳಿತರೂಢ ಆಮ್ ಆದ್ಮಿ ಪಕ್ಷವು (AAP) ಈಗಾಗಲೇ ತಯಾರಿಯನ್ನು ನಡೆಸಿದ್ದು, ಅದಕ್ಕೆ ಮುನ್ನುಡಿ ಎಂಬಂತೆ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಮೊದಲ ಪಟ್ಟಿಯಲ್ಲಿ 11 ಮಂದಿಗೆ ಟಿಕೆಟ್ ಘೋಷಿಸಲಾಗಿದ್ದು, ಕೆಲ ದಿನಗಳ ಬಿಜೆಪಿ-ಕಾಂಗ್ರೆಸ್ (BJP-Congress) ತೊರೆದು ಆಮ್ ಆದ್ಮಿ ಪಕ್ಷ (AAP) ಸೇರಿದ್ದ ಆರು ಮಂದಿಗೆ ಟಿಕೆಟ್ ನೀಡಲಾಗಿದ್ದು, ಉಳಿದಂತೆ ಪಕ್ಷದ ಐವರು ಹಿರಿಯ ನಾಯಕರಿಗೆ ಟಿಕೆಟ್ ಕೊಡಲಾಗಿದೆ.
ಬಿಜೆಪಿಯ ಮಾಜಿ ನಾಯಕರಾದ ಬ್ರಹ್ಮ್ ಸಿಂಗ್ ತನ್ವರ್, ಅನಿಲ್ ಝಾ ಮತ್ತು ಬಿಬಿ ತ್ಯಾಗಿ, ಮಾಜಿ ಕಾಂಗ್ರೆಸ್ ನಾಯಕರಾದ ಚೌಧರಿ ಜುಬೇರ್ ಅಹ್ಮದ್, ವೀರ್ ದಿಂಗನ್ ಮತ್ತು ಸುಮೇಶ್ ಶೋಕೀನ್ ಅವರಿಗೆ ಎಎಪಿ ಟಿಕೆಟ್ ನೀಡಲಾಗಿದ್ದು, ಉಳಿದಂತೆ ಪಕ್ಷದ ನಾಯಕರಾದ ರಾಮ್ ಸಿಂಗ್ ನೇತಾಜಿ, ಗೌರವ್ ಶರ್ಮಾ, ಮನೋಜ್ ತ್ಯಾಗಿ, ದೀಪಕ್ ಸಿಂಘಾಲ್ ಮತ್ತು ಸರಿತಾ ಸಿಂಗ್ ಅವರಿಗೆ ಪಕ್ಷ ಟಿಕೆಟ್ ನೀಡಿದೆ.
70 ಸದಸ್ಯ ಬಲದ ದೆಹಲಿ ವಿಧಾನಸಭೆಗೆ 2025ರ ಫೆಬ್ರುವರಿಯಲ್ಲಿ ಮತದಾನ ನಡೆಯಲಿದೆ. 2020ರಲ್ಲಿ ನಡೆದ ಚುನಾವಣೆಯಲ್ಲಿ 70 ಸ್ಥಾನಗಳ ಪೈಕಿ ಎಎಪಿ (AAP) 62 ಸ್ಥಾನಗಳಲ್ಲಿ ಗೆದ್ದಿತ್ತು. ಬಿಜೆಪಿ 8 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಉಳಿದಂತೆ ಕಾಂಗ್ರೆಸ್ ಶೂನ್ಯ ಸುತ್ತಿತ್ತು.