ದೆಹಲಿಯಲ್ಲಿ ಮತ್ತಷ್ಟು ಬಿಗಡಾಯಿಸಿದ ವಾಯುಮಾಲಿನ್ಯ ಪರಿಸ್ಥಿತಿ; ಅನಿವಾರ್ಯವಲ್ಲದ ನಿರ್ಮಾಣ ಕಾಮಗಾರಿಗಳಿಗೆ ನಿಷೇಧ

airpolution
Published on

ನವದೆಹಲಿ: ಮಂಜಿನ ಜತೆಗೆ ಹೆಚ್ಚುತ್ತಿರುವ ವಾಯುಮಾಲಿನ್ಯದ ಕಾರಣ ದೆಹಲಿ ಎನ್​ಸಿಆರ್​ನಲ್ಲಿ ಗ್ರೇಡೆಡ್​ ರೆಸ್ಪಾನ್ಸ್​ ಆ್ಯನ್​ ಪ್ಲ್ಯಾನ್​ ಸ್ಟೇಜ್​ (ಜಿಆರ್​ಎಪಿ)-3 ಜಾರಿಗೆ ತರಲಾಗಿದೆ. ಇದರನ್ವಯ ಬಿಎಸ್​-3 ಪೆಟ್ರೋಲ್​ ಮತ್ತು ಬಿಎಸ್​-4 ಡೀಸೆಲ್​ ನಾಲ್ಕು ಚಕ್ರಗಳ ವಾಹನಗಳನ್ನು ನಿಷೇಧಿಸಲಾಗಿದೆ.

ಅಲ್ಲದೆ ಅನಿವಾರ್ಯವಲ್ಲದ ನಿರ್ಮಾಣ ಕೆಲಸ, ಕಲ್ಲು ಒಡೆಯುವಿಕೆ ಮತ್ತು ಗಣಿಗಾರಿಕೆಯ ಮೇಲೆ ಕೂಡ ನಿಷೇಧ ಹೇರಿದೆ. ಇವುಗಳನ್ನು ಒಳಗೊಂಡಂತೆ ಒಟ್ಟು 8 ಅಂಶಗಳ ಯೋಜನೆ ಜಾರಿಗೊಳಿಸಲಾಗುವುದು ಎಂದು ವಾಯು ಗುಣಮಟ್ಟ ನಿರ್ವಹಣಾ ಆಯೋಗ (ಸಿಎಕ್ಯೂಎಂ) ನಿರ್ಬಂಧಗಳನ್ನು ಪ್ರಕಟಿಸಿದೆ.

ಶನಿವಾರ ಸಂಜೆಯಿಂದ ದೆಹಲಿ ಎನ್​ಸಿಆರ್​ನ ಗಾಳಿಯ ಗುಣಮಟ್ಟ ಹದಗೆಟ್ಟ ಹಿನ್ನೆಲೆ ಸಿಎಕ್ಯೂಎಂ ಉಪಸಮಿತಿ ತುರ್ತು ಸಭೆ ನಡೆಸಿ ಈ ನಿರ್ಧಾರ ಕೈಗೊಂಡಿದೆ. ರಾಷ್ಟ್ರೀಯ ಭದ್ರತೆ ಅಥವಾ ರಣೆ, ರಾಷ್ಟ್ರೀಯ ಪ್ರಾಮುಖ್ಯತೆಯ ಯೋಜನೆಗಳು, ಆರೋಗ್ಯ ರಣೆ, ರೈಲ್ವೆ, ಮೆಟ್ರೋ ರೈಲು, ವಿಮಾನ ನಿಲ್ದಾಣಗಳು, ಅಂತಾರಾಜ್ಯ ಬಸ್​ ರ್ಟಮಿನಲ್​ಗಳು, ಹೆದ್ದಾರಿಗಳು, ರಸ್ತೆಗಳು, ಮೇಲ್ಸೇತುವೆಗಳು, ವಿದ್ಯುತ್​ ಪ್ರಸರಣ, ಪೈಪ್​ಲೈನ್​ಗಳು, ನೈರ್ಮಲ್ಯ ಮತ್ತು ನೀರು ಪೂರೈಕೆಗೆ ಸಂಬಂಧಿಸಿದ ನಿರ್ಮಾಣ ಕಾರ್ಯಗಳಿಗೆ ವಿನಾಯಿತಿ ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net