More

    ತಿಂಗಳಾಂತ್ಯಕ್ಕೆ ಆಲೂಗಡ್ಡೆ ಹೊಸ ತಳಿ ಬಿಡುಗಡೆ; ಕುರ್ಫಿ ಉದಯ್​ ಎಂದು ನಾಮಕರಣ

    ಚಂಡೀಗಢ: ಉನ್ನತ ತಂತ್ರಜ್ಞಾನ ಬಳಸಿ ತಯಾರಿಸಿದ ಆಲೂಗಡ್ಡೆಯ ಹೊಸ ತಳಿಯ ಮಿನಿ-ಟ್ಯೂಬರ್​ಗಳನ್ನು ಹರಿಯಾಣದ ಆಲೂಗಡ್ಡೆ ತಂತ್ರಜ್ಞಾನ ಕೇಂದ್ರ (ಪಿಟಿಸಿ) ಈ ತಿಂಗಳ ಕೊನೆಯೊಳಗೆ ಬಿಡುಗಡೆ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.

    ಏಳು ವರ್ಷದ ಹಿಂದೆ ಸ್ಥಾಪಿಸಲಾದ ಪಿಟಿಸಿ, ದೊಡ್ಡ ಪ್ರಮಾಣದಲ್ಲಿ ರೋಗಮುಕ್ತ ನೆಡುವಿಕೆ ಸಾಮಗ್ರಿ ಪೂರೈಕೆ ಹಾಗೂ ಹೊಸ ತಳಿಗಳನ್ನು ಪರಿಚಯಿಸುವ ಬೇಡಿಕೆಯನ್ನು ಈಡೇರಿಸುತ್ತಿದೆ. ಈ ಮಾಸಾಂತ್ಯ ಹೊರ ಬರಲಿರುವ ನೂತನ ತಳಿಯು ಸತು ಮತ್ತು ಕಬ್ಬಿಣ ಅಂಶದಿಂದ ಸಮೃದ್ಧವಾಗಿರಲಿದೆ. ಉನ್ನತ ಗುಣಮಟ್ಟದ ಆಲೂಗಡ್ಡೆಗಳನ್ನು ಉತ್ಪಾದಿಸಲು ಬಳಸುವ ಈ ಮಿನಿ-ಟ್ಯೂಬರ್​ಗಳು ಸಾಮಾನ್ಯವಾಗಿ ಕಿರುರೂಪದ ಬೀಜದ ಬಟಾಟೆಗಳಾಗಿವೆ ಹಾಗೂ ಅವನ್ನು ಏರೋಪೋನಿಕ್ಸ್​ ತಂತ್ರಜ್ಞಾನ ಬಳಸಿ ನಿಯಂತ್ರಿತ, ರೋಗಮುಕ್ತ ಪರಿಸ್ಥಿತಿಗಳಲ್ಲಿ ಉತ್ಪಾದಿಸಲಾಗುತ್ತದೆ.

    ಮಣ್ಣಿಲ್ಲದೆ ಕೃಷಿ ನಡೆಸುವ ವಿಧಾನವನ್ನು ಏರೋಪೋನಿಕ್ಸ್​ ಕೃಷಿ ಎನ್ನುತ್ತಾರೆ. ಈ ವಿಧಾನದಲ್ಲಿ ಸೀಮಿತ ನೀರು ಮತ್ತು ಇತರ ಸಂಪನ್ಮೂಲಗಳಿಂದ ಹೆಚ್ಚು ಬೆಳೆಗಳನ್ನು ತ್ವರಿತವಾಗಿ ಬೆಳೆಸಲಾಗುತ್ತದೆ. ಸರ್ಕಾರಿ ಸಂಸ್ಥೆಯಾದ ಪಿಟಿಸಿಯಲ್ಲಿರುವ ಏರೋಪೋನಿಕ್ಸ್​ ಸೌಲಭ್ಯವು ದೇಶದಲ್ಲೇ ದೊಡ್ಡ ಕೇಂದ್ರಗಳಲ್ಲಿ ಒಂದಾಗಿದೆ.

    ಕುರ್ಫಿ ಉದಯ್​

    ಬಟಾಟೆಯ ಹೊಸ ತಳಿಯ ಮಿನಿ-ಟ್ಯೂಬರ್​ಗಳಿಗೆ ಕುರ್ಫಿ ಉದಯ್​ ಎಂದು ನಾಮಕರಣ ಮಾಡಲಾಗಿದೆ. ಈ ತಳಿ ವಿಶೇಷವಾಗಿ ಉತ್ತರ ಭಾರತದ ಬಯಲು ಪ್ರದೇಶಗಳಲ್ಲಿ ಬೆಳೆಸಲು ಸೂಕ್ತವಾಗಿದೆ. ಇದು ರೈತರಿಗೆ ವರದಾನವಾಗಲಿದೆ ಎಂದು ಪಿಟಿಸಿ ವಿಷಯ ತಜ್ಞ ಜಿತೇಂದ್ರ ಸಿಂಗ್​ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts