Delhi| ಬಾಡಿಗೆ ಮನೆಯಲ್ಲಿ ಸ್ಪ್ಯೆಕ್ಯಾಮರಾ ಅಳವಡಿಕೆ; ತಗ್ಲಾಕೊಂಡ ಬಳಿಕ ಅಸಲಿ ಕಥೆ ಬಿಚ್ಚಿಟ್ಟ ಆರೋಪಿ

Untitled-design-2024-09-24T181536.311
Published on

ನವದೆಹಲಿ: ಬಾಡಿಗೆ ಮನೆಯಲ್ಲಿ ವಾಸವಿದ್ದ ಮಹಿಳೆಯ ಬಾತ್​ರೂಮ್​ ಮತ್ತು ಬೆಡ್​ರೂಮ್​ನಲ್ಲಿರುವ ಬಲ್ಬ್​ಗಳಲ್ಲಿ ಸ್ಪ್ಯೆಕ್ಯಾಮರಾಗಳನ್ನು ಅಳವಡಿಸಿದ್ದ ಆರೋಪದ ಮೇಲೆ 30 ವರ್ಷ ವ್ಯಕ್ತಿಯನ್ನು ಶಕರ್​ಪುರದಲ್ಲಿ ಬಂಧಿಸಲಾಗಿದೆ ಎಂದು ದೆಹಲಿ (Delhi) ಪೊಲೀಸರು ಮಂಗಳವಾರ (ಸೆಪ್ಟೆಂಬರ್​​ 24) ತಿಳಿಸಿದ್ದಾರೆ.

ಅಸಲಿಗೆ ಸಿವಿಲ್ ಸರ್ವೀಸ್ ಪ್ರವೇಶ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಮಹಿಳೆ ಒಂಟಿಯಾಗಿ ಶಕರ್‌ಪುರದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಅದೇ ಕಟ್ಟಡ ಇನ್ನೊಂದು ಮಹಡಿಯಲ್ಲಿ ಮಾಲಿಕನ ಮಗ ಕರಣ್ ವಾಸವಾಗಿದ್ದಾನೆ. ಮಹಿಳೆ ತನ್ನ ಹುಟ್ಟೂರು ಉತ್ತರ ಪ್ರದೇಶಕ್ಕೆ ಹೋಗುವಾಗ ಕರಣ್​​ಗೆ ಮನೆ ಕೀಗಳನ್ನು ಕೊಟ್ಟು ಹೋಗಿದ್ದಾಳೆ. ಆ ಮಹಿಳೆಗೆ ಇತ್ತೀಚೆಗೆ ತನ್ನ ವಾಟ್ಸಾಪ್ ಖಾತೆಗೆ ಬಂದಿರುವ ಕೆಲವು ಲಿಂಕ್​ಗಳನ್ನು ನೋಡಿದ್ದಾಳೆ. ಅದರಲ್ಲಿ ಅಪರಿಚಿತರ ಲ್ಯಾಪ್​ಟಾಪ್​​ ಅನ್ನು ನೋಡಿದ್ದಾಗಿ ಬಳಿಕ ತಕ್ಷಣವೇ ಅಲ್ಲಿಂದ ಲಾಗ್​​ಔಟ್​ ಆಗಿದ್ದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಸ್ಪ್ಯೆಕ್ಯಾಮೆರಾ ಅಳವಡಿಕೆ ಬಗ್ಗೆ ತಿಳಿದಿದ್ದು ಹೇಗೆ:

ವಾಟ್ಸಾಪ್​ನಲ್ಲಿನ ಲ್ಯಾಪ್​​ಟಾಪ್​ ನೋಡಿದ ಬಳಿಕ ಮಹಿಳೆಗೆ ತನ್ನನ್ನು ಯಾರೋ ಸ್ನೂಪ್ ಮಾಡುತ್ತಿದ್ದಾರೆ ಎಂಬ ಸಂಶಯ ಉಂಟಾಗಿದೆ. ಬಳಿಕ ತನ್ನ ಮನೆಯನ್ನು ತಲಾಶ್​​ ಮಾಡಿದ್ದಾರೆ. ಹೀಗೆ ಹುಡುಕಾಟ ನಡೆಸುವಾಗ ತನ್ನ ಬಾತ್​ರೂಮ್​ನ ಬಲ್ಟ್​​ ಹೋಲ್ಡರ್​ನಲ್ಲಿ ಸ್ಪೈಕ್ಯಾಮರಾ ಅಳವಡಿಸಿರುವುದು ಕಂಡು ಬಂದಿದೆ. ತಕ್ಷಣವೇ ಆಕೆ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾಳೆ. ಮಾಹಿತಿ ಬಂದ ತಕ್ಷಣವೇ ಮಹಿಳೆಯ ಸ್ಥಳಕ್ಕೆ ಆಗಮಿಸಿದ ಸಬ್​​ ಇನ್ಸ್​ಪೆಕ್ಟರ್​​ ಮನೆಯಲ್ಲಿ ಮತ್ತೊಮ್ಮೆ ತಪಾಸಣೆ ನಡೆಸಿದ್ದಾರೆ. ಆಗ ಆಕೆಯ ಬೆಡ್​ರೂಮ್​​ನಲ್ಲಿರುವ ಬಲ್ಬ್​ ಹೋಲ್ಡರ್​ನಲ್ಲಿ ಮತ್ತೊಂದು ಕ್ಯಾಮರಾ ಅಳವಡಿಸಿರುವುದು ಪತ್ತೆಯಾಗಿದೆ.

ಇದಾದ ಬಳಿಕ ಮಹಿಳೆಯನ್ನು ಪೊಲೀಸರು ಬೇರೆಯಾದರೂ ಮನೆಗೆ ಬರುತ್ತಾರೆಯೇ ಎಂದು ಕೇಳಿದ್ದಾರೆ. ಆಗ ಆಕೆ ಇಲ್ಲ ಯಾರು ಬರುವುದಿಲ್ಲ, ಆದರೆ ತಾನು ಊರಿಗೆ ಹೋಗುವಾಗ ಮನೆಯ ಕೀಯನ್ನು ಮನೆ ಮಾಲೀಕರ ಮಗ ಕರಣ್​ ಬಳಿ ನೀಡುವುದಾಗಿ ಹೇಳಿದ್ದಾಳೆ. ಆರೋಪಿ ಕರಣ್​​​ನನ್ನು ಬಂಧಿಸಿ ವಿಚಾರಣೆ ನಡೆಸಿದ ಬಳಿಕ ಸತ್ಯಾಂಶ ಹೊರಬಂದಿದೆ. 3 ತಿಂಗಳ ಹಿಂದೆ ಆಕೆ ಹುಟ್ಟೂರಿಗೆ ಹೋಗಿದ್ದಾಗ ತನ್ನ ಬಳಿ ಮನೆಯ ಕೀಯನ್ನು ಕೊಟ್ಟು ಹೋಗಿದ್ದಳು. ಆ ಅವಕಾಶವನ್ನು ಬಳಸಿಕೊಂಡು ಎಲೆಕ್ಟ್ರಾನಿಕ್ಸ್ ಮಾರುಕಟ್ಟೆಯಲ್ಲಿ ಸಾಮಾನ್ಯವಾಗಿ ಲಭ್ಯವಿರುವ ಮೂರು ಸ್ಪೈಕ್ಯಾಮರಾಗಳನ್ನು ಖರೀದಿಸಿ, ಅವಳ ಮಲಗುವ ಕೋಣೆಯಲ್ಲಿ ಒಂದನ್ನು ಮತ್ತು ಅವಳ ಸ್ನಾನಗೃಹದಲ್ಲಿ ಒಂದನ್ನು ಅಳವಡಿಸಿದ್ದಾಗಿ ಕರಣ್​ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್​​ ಅಧಿಕಾರಿಯೊಬ್ಬರು ತಿಳಿಸಿದರು.

ಆನ್​ಲೈನ್​ನಲ್ಲಿ ಈ ಕ್ಯಾಮರಾಗಳ ಕಾರ್ಯನಿರ್ವಹಿಸಲಾಗುವುದಿಲ್ಲ. ರೆಕಾರ್ಡ್​ ಆಗುವ ದೃಶ್ಯಗಳು ಮೆಮೊರಿ ಕಾರ್ಡ್​ಗಳಲ್ಲಿ ಸಂಗ್ರಹವಾಗುತ್ತದೆ. ಹೀಗಾಗಿಯೇ ಕರಣ್​ ಮಹಿಳೆಯ ಬಳಿ ವಿದ್ಯುತ್​ ರಿಪೇರಿ ನೆಪದಲ್ಲಿ ಪದೇಪದೆ ಕೀಯನ್ನು ಕೇಳುತ್ತಿದ್ದನ್ನು. ಬಳಿಕ ರೆಕಾರ್ಡ್​​ ಮಾಡಿದ ವಿಡಿಯೋಗಳನ್ನು ತನ್ನ ಲ್ಯಾಪ್‌ಟಾಪ್‌ಗೆ ಕಳುಹಿಸಿಕೊಳ್ಳುತ್ತಿದ್ದ ಎಂದು ತಿಳಿಸಿದ್ದಾರೆ.

ಕರಣ್‌ನಿಂದ ರೆಕಾರ್ಡ್ ಮಾಡಿದ ವಿಡಿಯೋಗಳನ್ನು ಸಂಗ್ರಹಿಸಿದ್ದ ಒಂದು ಸ್ಪೈ ಕ್ಯಾಮರಾ ಮತ್ತು ಎರಡು ಲ್ಯಾಪ್‌ಟಾಪ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ವಿಕಲಾಂಗ ವ್ಯಕ್ತಿಯಾಗಿರುವ 30 ವರ್ಷದ ಆರೋಪಿ ಕರಣ್​​ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net