ದೆಹಲಿ ಅತಿ ಕಲುಷಿತ ನಗರ; ವಿಶ್ವ ವಾಯು ಗುಣಮಟ್ಟ ವರದಿ

Delhi
Published on

ಭಾರತದ ರಾಜಧಾನಿ ದೆಹಲಿ 2021ರಲ್ಲಿ ಜಗತ್ತಿನ ರಾಜಧಾನಿಗಳಲ್ಲೇ ಅತಿ ಹೆಚ್ಚಿನ ವಾಯುಮಾಲಿನ್ಯದ ನಗರ ಎಂದು ವಿಶ್ವ ವಾಯು ಗುಣಮಟ್ಟ ವರದಿ (ಡಬ್ಲ್ಯುಎಕ್ಯೂಆರ್) ತಿಳಿಸಿದೆ. ಸತತ ನಾಲ್ಕನೇ ವರ್ಷವೂ ದೆಹಲಿ ಅತಿ ಮಾಲಿನ್ಯ ನಗರವೆಂಬ ಹಣೆಪಟ್ಟಿ ಹೊತ್ತಿದೆ. ಟಾಪ್ ಐದು ಮಲಿನ ದೇಶಗಳಲ್ಲಿ ಭಾರತವೂ ಒಂದು ಎಂದು ವರದಿ ಪಟ್ಟಿ ಮಾಡಿದೆ. ಬಾಂಗ್ಲಾದೇಶ ಜಗತ್ತಿನ ಅತಿ ಕಲುಷಿತ ದೇಶಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದು ಛಾಡ್ ಎರಡನೇ ಸ್ಥಾನದಲ್ಲಿದೆ.

  • 117 ದೇಶಗಳ 6,475 ನಗರಗಳಿಂದ ಸಂಗ್ರಹಿಸಿದ ಪಿಎಂ2.5 ಡೇಟಾ ಆಧಾರದಲ್ಲಿ ವರದಿ ಸಿದ್ಧಪಡಿಸಲಾಗಿದೆ.
  • ಮಧ್ಯ ಮತ್ತು ದಕ್ಷಿಣ ಏಷ್ಯಾದ 15ಕ್ಕೂ ಅಧಿಕ ಮಲಿನ ನಗರಗಳಲ್ಲಿ 11 ನಗರಗಳು ಭಾರತದಲ್ಲೇ ಇವೆ.
  • 2021ರಲ್ಲಿ ಪಿಎಂ2.5 ಸಾಂದ್ರಕಗಳಲ್ಲಿ (ಕಾನ್ಸನ್​ಟ್ರೇಶನ್) ದೆಹಲಿಯಲ್ಲಿ ಶೇಕಡ 14.6 ಏರಿಕೆಯಗಿದೆ.
  • ಜಗತ್ತಿನ 100 ಪ್ರದೂಷಣೆಯ ನಗರಗಳ ಪೈಕಿ 63 ಭಾರತದಲ್ಲಿವೆ.
  • ಭಾರತದ ಯಾವೊಂದು ನಗರವೂ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್​ಒ) ನಿಗದಿಪಡಿಸಿರುವ 5ಯುಜಿ/ಎಂ3 ವಾಯು ಗುಣಮಟ್ಟ ಮಾರ್ಗಸೂಚಿಯನ್ನು ಪಾಲಿಸಿಲ್ಲ.
  • ಭಾರತದ 48ರಷ್ಟು ನಗರಗಳು 50ಯುಜಿ/ಎಂ3ಕ್ಕಿಂತ ಹೆಚ್ಚಿನ ಮಟ್ಟವನ್ನು ದಾಟಿವೆ. ಇದು ಡಬ್ಲ್ಯುಎಚ್​ಒ ಮಾರ್ಗಸೂಚಿಯ ಹತ್ತು ಪಟ್ಟಿಗಿಂತ ಅಧಿಕವಾಗಿದೆ.
  • ಜಗತ್ತಿನ ಒಂದೇ ಒಂದು ದೇಶ ಕೂಡ ಡಬ್ಲ್ಯುಎಚ್​ಒದ ಮಾರ್ಗಸೂಚಿ ಪಾಲಿಸುವಲ್ಲಿ ಸಫಲವಾಗಿಲ್ಲ.
  • ರಾಜಸ್ಥಾನದ ಆಳ್ವಾರ್​ನ ಭಿವಂಡಿ ಅತಿ ಹೆಚ್ಚು ಕಲುಷಿತ ಪ್ರಾದೇಶಿಕ ನಗರವಾಗಿದೆ.
  • ದೆಹಲಿ (ಭಾರತ), ಢಾಕಾ (ಬಾಂಗ್ಲಾದೇಶ), ಎನ್​ಡಿಜಮೇನಾ (ಛಾಡ್), ದುಷಾಂಬೆ (ತಜಿಕಿಸ್ತಾನ್) ಮತ್ತು ಮಸ್ಕತ್ (ಒಮನ್). ಅತಿ ಮಲಿನ ಐದು ರಾಜಧಾನಿಗಳು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net