ಜೇಮ್ಸ್​ಗೆ ಎತ್ತಂಗಡಿ ಆತಂಕ!; ನಿರ್ಮಾಪಕರು ಏನೆಂದರು?

1254370
Published on

ಕೊಪ್ಪಳ: ಪವರ್​ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಜೇಮ್ಸ್​ ಚಿತ್ರವನ್ನು ಚಿತ್ರಮಂದಿರದಿಂದ ತೆಗೆಯಲಾಗುತ್ತಿದೆ ಎಂಬ ಕುರಿತು ನಿರ್ದೇಶಕ ಚೇತನ್​ಕುಮಾರ್ ಮನವಿ ಮಾಡಿಕೊಂಡ ಬೆನ್ನಿಗೆ ನಿರ್ಮಾಪಕರೂ ತಮ್ಮ ಸಿನಿಮಾ ಕುರಿತು ಮಾತನಾಡಿದ್ದಾರೆ.

ಜೇಮ್ಸ್​ ಚಿತ್ರದ ನಿರ್ಮಾಪಕ ಕಿಶೋರ್ ಪತ್ತಿಕೊಂಡ ಅವರು ಖಳನಟ ಶ್ರೀಕಾಂತ್ ಜತೆ ಗಂಗಾವತಿಯ ಚಿತ್ರಮಂದಿರವೊಂದಕ್ಕೆ ಭೇಟಿ ನೀಡಿದ ಸಂದರ್ಭ ಸುದ್ದಿಗಾರರ ಜತೆ ಮಾತನಾಡಿದರು. ಗಂಗಾವತಿಯಲ್ಲಿ ಜೇಮ್ಸ್​ ಚಿತ್ರಕ್ಕೆ ಭಾರಿ ಸ್ಪಂದನೆ ವ್ಯಕ್ತವಾಗಿದೆ ಎಂಬ ಸಂತೋಷವನ್ನೂ ಅವರು ಹಂಚಿಕೊಂಡರು.

ಜೇಮ್ಸ್ ಚಿತ್ರವನ್ನು ವೀಕ್ಷಿಸುವಂತೆ ಕೋರಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಆಗಿರುವ ಬಗ್ಗೆಯೂ ಅವರು ಮಾಹಿತಿ ತಿಳಿಸಿದರು. ಇನ್ನು ಕೆಲವು ಚಿತ್ರಮಂದಿರಗಳ ಮಾಲೀಕರು ದಿನದ ಪ್ರದರ್ಶನಗಳಲ್ಲಿ ಒಂದು ಶೋ ಬೇರೆ ಚಿತ್ರ ಹಾಕುವ ವಿಚಾರವನ್ನು ಪ್ರಸ್ತಾಪಿಸಿದ್ದು, ಅದಕ್ಕೆ ನಾನು ಸುತಾರಾಂ ಒಪ್ಪುವುದಿಲ್ಲ ಎಂದು ನಿರ್ಮಾಪಕರು ಸ್ಪಷ್ಟಪಡಿಸಿದ್ದಾರೆ.

ನಮ್ಮ ಸಿನಿಮಾ ಬಗ್ಗೆ ನಾನು ಎಲ್ಲ ಥೇಟರ್ ಮಾಲೀಕರಿಗೆ ಮನವಿ ಮಾಡಿದ್ದೇನೆ. ಅಪ್ಪು ಅಭಿಮಾನಿಗಳು ಪ್ರೀತಿಯಿಂದ ಚಿತ್ರ ನೋಡುತ್ತಿದ್ದಾರೆ. ಯಾವುದೇ ಶೋಗೆ ತೊಂದರೆ ಮಾಡಬಾರದು ಎಂದು ಮನವಿ ಮಾಡಿಕೊಳ್ಳುತ್ತೇನೆ ಎಂಬುದಾಗಿ ಕಿಶೋರ್ ಪತ್ತಿಕೊಂಡ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net