

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ 2022ರಲ್ಲಿ ಭಾರತದ ಅತಿ ಮಾಲಿನ್ಯ ನಗರವೆಂಬ ದಾಖಲೆಗೆ ಒಳಗಾಗಿದೆ. ಸುರಕ್ಷಿತ ಮಟ್ಟಕ್ಕಿಂತ ಅಧಿಕ ಮತ್ತು ಮೂರನೇ ಅತಿ ಹೆಚ್ಚು ಸರಾಸರಿಯೊಂದಿಗೆ ದೆಹಲಿಯಲ್ಲಿ ಮಾಲಿನ್ಯ ಮಿತಿ ಮೀರಿದೆ ಎಂದು ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಅಂಕಿ-ಅಂಶದ ವಿಶ್ಲೇಷಣೆಯಿಂದ ದೃಢಪಟ್ಟಿದೆ.
ಪಿಎಂ 2.5 ಎಂದರೇನು?: 2.5 ಮೈಕ್ರಾನ್ಗಿಂತ ಕಡಿಮೆ ಗಾತ್ರದ ಚಿಕ್ಕ ಕಣಗಳು. ಅದು ಶ್ವಾಸಕೋಶಗಳು ಹಾಗೂ ರಕ್ತವನ್ನು ಪ್ರವೇಶಿಸಿ ಹಾನಿ ಉಂಟು ಮಾಡುತ್ತವೆ.