ಲೋಕಸಭೆ ಚುನಾವಣೆ: ಪ್ರತಿ ಪಕ್ಷಗಳ ಮೈತ್ರಿಗೆ I.N.D.I.A ಹೆಸರಿಟ್ಟಿದ್ದಕ್ಕೆ ಪಿಐಎಲ್ ಸಲ್ಲಿಕೆ, ಕೋರ್ಟ್​ನಿಂದ ನೋಟಿಸ್

delhi HIghcourt
Published on

ದೆಹಲಿ: ಬಿಜೆಪಿ ನೇತೃತ್ವದ ಆಡಳಿತಾರೂಢ ಎನ್​ಡಿಎ ಒಕ್ಕೂಟದ ವಿರುದ್ಧ ತೊಡೆ ತಟ್ಟಿರುವ 26 ವಿಪಕ್ಷಗಳು ತಮ್ಮ ಮಹಾಮೈತ್ರಿಯ ಹೆಸರನ್ನು I.N.D.I.A.ಎಂದು ಮರುನಾಮಕರಣ ಮಾಡಿದ್ದವು. ಇದೀಗ ಈ ಹೆಸರನ್ನು ಬಳಸಿದ್ದಕ್ಕಾಗಿ ದೆಹಲಿ ಹೈಕೋರ್ಟ್​ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.

ಇದನ್ನೂ ಓದಿ: ಮೋದಿ ಉಪನಾಮ ಪ್ರಕರಣದಲ್ಲಿ ರಾಹುಲ್​ ಗಾಂಧಿಗೆ ಬಿಗ್ ರಿಲೀಫ್; ಶಿಕ್ಷೆಗೆ ‘ಸುಪ್ರೀಂ’ ತಡೆ

ವಿರೋಧ ಪಕ್ಷಗಳು ತಮ್ಮ ಮೈತ್ರಿಗಾಗಿ I.N.D.I.A. ಎಂಬ ಸಂಕ್ಷಿಪ್ತ ರೂಪವನ್ನು ಬಳಸದಂತೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿರುವ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮಾಡಿದ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಅಮಿತ್ ಮಹಾಜನ್ ನೇತೃತ್ವದ ವಿಭಾಗೀಯ ಪೀಠವು ಕೇಂದ್ರ ಸರ್ಕಾರ, ಭಾರತೀಯ ಚುನಾವಣಾ ಆಯೋಗ (ಇಸಿಐ) ಮತ್ತು 26 ರಾಜಕೀಯ ಪಕ್ಷಗಳಿಂದ ನೋಟಿಸ್ ಜಾರಿ ಮಾಡಿದೆ.

2024ರ ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ "ರಾಜಕೀಯ ಪಕ್ಷಗಳು" ಅಥವಾ "ಮೈತ್ರಿಕೂಟಗಳು ಮತ್ತು ನಮ್ಮ ದೇಶ" ನಡುವೆ ಹೋರಾಡಲಾಗುವುದು ಎಂದು ಸಾಮಾನ್ಯ ಜನರ ಮನಸ್ಸಿನಲ್ಲಿ ಗೊಂದಲ ಮೂಡಿಸುವ ಪ್ರಯತ್ನ ಇದಾಗಿದೆ. ಮುಂದಿನ ಲೋಕಸಭೆ ಚುನಾವಣೆಗೆ ನಮ್ಮ ದೇಶದ ಹೆಸರಿನಿಂದ ಅನಗತ್ಯ ಲಾಭ ಪಡೆಯಲು ಬಯಸುತ್ತವೆ ಎಂದು ಪಿಐಎಲ್​ನಲ್ಲಿ ಹೇಳಲಾಗಿದೆ. ಇದರ ಬಗ್ಗೆ ವಿಚಾರಣೆಯ ಅಗತ್ಯವಿದೆ ಎಂದು ಪೀಠವು ಹೇಳಿದೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net