ಮದುವೆ ಸಂಭ್ರಮದಲ್ಲಿದ್ದ ಮಗನನ್ನು 15 ಬಾರಿ ಇರಿದು ಕೊಂದ ಪಾಪಿ ತಂದೆ

delhi
Published on

ನವದೆಹಲಿ: ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಆ ಮನೆಯಲ್ಲಿ ಮದುವೆ ಸಂಭ್ರಮ ಕಳೆಗಟ್ಟುತ್ತಿತ್ತು. ಆದರೆ, ಒಳ್ಳೆ ಕೆಲಸಕ್ಕೆ ನೂರಾರು ಅಡ್ಡಿ ಎಂಬಂತೆ ಆ ಕುಟುಂಬ ನೋವಿನಿಂದ ತತ್ತರಿಸಿದೆ.

ಹಸೆಮಣೆ ಏರುವ ಕೆಲವೇ ಗಂಟೆಗಳ ಮುನ್ನ ದಕ್ಷಿಣ ದಿಲ್ಲಿಯ 29 ವರ್ಷದ ಜಿಮ್ ತರಬೇತುದಾರ ಗೌರವ್ ಸಿಂಘಾಲ್ ಅವರ ಮನೆಯಲ್ಲಿ ಬುಧವಾರ ಅವರ ಮುಖ ಮತ್ತು ಎದೆಗೆ 15 ಬಾರಿ ಇರಿದು ಹತ್ಯೆ ಮಾಡಲಾಗಿದೆ. ಮೃತ ದುರ್ದೈವಿ ಗೌರವ್ ಸಿಂಘಾಲ್ ಕೊಂದಿದ್ದು ಸ್ವತಃ ಆತನ ತಂದೆ ರಂಗ್ಲಾಲ್. ಆತನನ್ನು ಕೊಂದ ಆರೋಪದಲ್ಲಿ ರಂಗಲಾಲ್‌ನನ್ನು ಪೊಲೀಸರು ಗುರುವಾರ ಸಂಜೆ ಬಂಧಿಸಿದ್ದಾರೆ.

ಮಗ ಗೌರವ್ ಪ್ರತಿ ದಿನವೂ ತನಗೆ ಅವಮಾನ ಮಾಡುತ್ತಿದ್ದ ಎಂಬ ಕೋಪದಿಂದ ರಂಗಲಾಲ್ ಈ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ದೇವ್ಲಿ ಎಕ್ಸ್‌ಟೆನ್ಷನ್‌ನಲ್ಲಿ ಮನೆಯಲ್ಲಿ ವಾಸವಿದ್ದ ಗೌರವ್​ಆತನ ಮುಖ ಹಾಗೂ ಎದೆಯ ಮೇಲೆ 15 ಬಾರಿ ಚಾಕುವಿನಿಂದ ಇರಿಯಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆ ದಾಖಲು ಮಾಡಲಾಗಿತ್ತು, ಅಷ್ಟರಲ್ಲೇ ಗೌರವ್​ ಸಾವನ್ನಪ್ಪಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಬಲವಂತದ ಮದುವೆಯೇ?: ಜಿಮ್​ ತರಬೇತುಗಾರ ಗೌರವ್ ವಿವಾಹ ಸಮಾರಂಭ ಗುರುವಾರ ನಿಗದಿಯಾಗಿತ್ತು. ಇದು ನಿಯೋಜಿತ ಮದುವೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಗೌರವ್ ಬೇರೆ ಹುಡುಗಿಯನ್ನು ಮದುವೆಯಾಗಲು ಬಯಸಿದ್ದ, ಆದರೆ ಕುಟುಂಬದ ಒತ್ತಡಕ್ಕೆ ಮಣಿದು ಮದುವೆಗೆ ಒಪ್ಪಿಕೊಂಡಿದ್ದಾನೆ. ಈ ವಿಚಾರವಾಗಿ ಗೌರವ್ ತನ್ನ ತಂದೆಯೊಂದಿಗೆ ಪದೇ ಪದೇ ಜಗಳವಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಹಿರಿಯ ಪೊಲೀಸ್ ಅಧಿಕಾರಿ ಅಂಕಿತ್ ಚೌಹಾಣ್ ಮಾತನಾಡಿ, ಗೌರವ್ ತಂದೆ ರಂಗ್ಲಾಲ್ ಅವರು 50 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು 15 ಲಕ್ಷ ರೂಪಾಯಿಗಳೊಂದಿಗೆ ಮನೆಯಿಂದ ಪರಾರಿಯಾಗಿದ್ದ. ಈ ಬಗ್ಗೆ ಗೌರವ್ ಜೊತೆ ತನ್ನ ತಂದೆ ರಂಗ್ಲಾಲ್ ಜೊತೆ ಜಗಳವಾಡಿದ್ದಾನೆ.

ಈ ವೇಳೆ ಗೌರವ್ ತನ್ನ ತಂದೆ ಕೆನ್ನಗೆ ಹೊಡಿದ್ದಾನೆ ಇದರಿಂದ ಆಕ್ರೋಶಗೊಂಡ ರಂಗಲಾಲ್ ತನ್ನ ಮೂವರು ಸಹಚರರೊಂದಿಗೆ ಸೇರಿ ಗೌರವ್ ನನ್ನು ಕೊಂದು ನಗದು ಹಾಗೂ ಚಿನ್ನಾಭರಣಗಳೊಂದಿಗೆ ಮನೆಯಿಂದ ಪರಾರಿಯಾಗಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net