ದೆಹಲಿಯ ಸರ್ಕಾರಿ ಕ್ಯಾನ್ಸರ್​ ಆಸ್ಪತ್ರೆ ವೈದ್ಯೆಗೆ ಕರೊನಾ ವೈರಸ್​ ಸೋಂಕು; ಇಂದು ಆಸ್ಪತ್ರೆಯ ಬಾಗಿಲು ಕ್ಲೋಸ್​

Suspected Coronavirus 15 march 20
Published on

ನವದೆಹಲಿ: ಇಲ್ಲಿ ಸರ್ಕಾರಿ ಕ್ಯಾನ್ಸರ್​ ಆಸ್ಪತ್ರೆಯ ವೈದ್ಯೆಯೋರ್ವರಿಗೆ ಕರೊನಾ ಸೋಂಕು ತಗುಲಿದ್ದು, ಇಂದು ಇಡೀ ಆಸ್ಪತ್ರೆಯನ್ನೇ ಬಂದ್​ ಮಾಡಲಾಗಿದೆ.

ದೆಹಲಿ ರಾಜ್ಯ ಕ್ಯಾನ್ಸರ್​ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಈ ವೈದ್ಯೆಯ ಸಹೋದರ ಇತ್ತೀಚೆಗಷ್ಟೇ ಬ್ರಿಟನ್​ನಿಂದ ಆಗಮಿಸಿದ್ದರು. ತಮ್ಮ ಸಹೋದರನನ್ನು ಭೇಟಿಯಾಗಿದ್ದ ಕ್ಯಾನ್ಸರ್​ ತಜ್ಞವೈದ್ಯೆಯಲ್ಲಿ ಕರೊನಾ ಈಗ ದೃಢಪಟ್ಟಿದೆ ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್​ ತಿಳಿಸಿದ್ದಾರೆ.

ಇವತ್ತು ಆಸ್ಪತ್ರೆಯ ಬಾಗಿಲು ಮುಚ್ಚಲಾಗುವುದು ಮತ್ತು ಸೋಂಕು ನಿವಾರಕಗಳಿಂದ ಸ್ವಚ್ಛಗೊಳಿಸಲಾಗುವುದು. ಸಂಪೂರ್ಣ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.

ಇತ್ತೀಚೆಗಷ್ಟೇ ದೆಹಲಿಯ ಮೊಹಲ್ಲಾ ಕ್ಲಿನಿಕ್​​ವೊಂದರ ವೈದ್ಯ ದಂಪತಿ ಹಾಗೂ ಅವರ ಮಗಳಲ್ಲಿ ಕರೊನಾ ವೈರಸ್​ ದೃಢಪಟ್ಟಿದೆ.

ಸೌದಿ ಅರೆಬಿಯಾದಿಂದ ಆಗಮಿಸಿದ್ದ ಕರೊನಾ ಸೋಂಕಿತನೋರ್ವನಿಂದ ವೈದ್ಯನಿಗೆ ತಗುಲಿತ್ತು. ಅದಾದ ಬಳಿಕ ಅವರ ಪತ್ನಿ ಮತ್ತು ಮಗಳಲ್ಲಿ ಕರೊನಾ ಪಾಸಿಟಿವ್​ ಎಂದು ವರದಿ ಬಂದಿತ್ತು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net