

ನವದೆಹಲಿ: ನಿರ್ಭಯಾ ಪ್ರಕರಣದ ತೀರ್ಪು ಹೊರ ಬೀಳುತ್ತಿದ್ದಂತೆ ತಿಹಾರ್ ಜೈಲಿನ ಅಧಿಕಾರಿಗಳು ಉತ್ತರ ಪ್ರದೇಶ ಕಾರಾಗೃಹಕ್ಕೆ ಪತ್ರ ಬರೆದಿದ್ದಾರೆ.
ಉತ್ತರ ಪ್ರದೇಶದ ಕಾರಾಗೃಹದಲ್ಲಿ ನೇಣಿಗೇರಿಸುವ ಕುಣಿಕೆಯನ್ನು ತಯಾರಿಸಲಾಗುತ್ತದೆ. ಹಾಗಾಗಿ ನಿರ್ಭಯಾ ಅಪರಾಧಿಗಳ ಗಲ್ಲಿಗೇರಿಸಲು ಕುಣಿಕೆ ತಯಾರಿಸಲು ಈ ಹಿಂದೆಯೇ ಜೈಲು ನಿರ್ದೇಶನಾಲಯ ಇಲ್ಲಿಗೆ ಸೂಚಿಸಿತ್ತು.
ಇಂದು ಪಟಿಯಾಲ ಕೋರ್ಟ್ನಿಂದ ತೀರ್ಪು ಹೊರ ಬೀಳುತ್ತಿದ್ದಂತೆ, ಉತ್ತರ ಪ್ರದೇಶ ಕಾರಾಗೃಹ ಇಲಾಖೆಗೆ ತಿಹಾರ್ ಜೈಲಿನ ಅಧಿಕಾರಿಗಳು ಪತ್ರ ಬರೆದು ಗಲ್ಲಿಗೇರಿಸುವವನ ಸೇವೆ ಪಡೆಯುವ ಬಗ್ಗೆ ಮಾಹಿತಿ ಕೋರಿದ್ದಾರೆ.
ಪಟಿಯಾಲ ನ್ಯಾಯಾಲಯವು ಇಂದು ತೀರ್ಮಾನಿಸಿದಂತೆ ಎಲ್ಲಾ 4 ಅಪರಾಧಿಗಳನ್ನು ಮರಣದಂಡನೆ ಮಾಡಿದ ದಿನಾಂಕ ಮತ್ತು ಸಮಯದ ಬಗ್ಗೆ ತಿಳಿಸಿ ಆ ಸಮಯದ ಬಗ್ಗೆ ನೇಣಿಗೇರಿಸುವವರಿಗೆ ಮಾಹಿತಿ ನೀಡುವಂತೆ ಹೇಳಿದ್ದಾರೆ. (ಏಜೆನ್ಸೀಸ್)