ಆಪ್​ ಗೆಲುವಿಗಾಗಿ ಶ್ರಮಿಸಿದ್ದ ಚುನಾವಣಾ ವಿಶ್ಲೇಷಕ ಪ್ರಶಾಂತ್​ ಕಿಶೋರ್​; ದೆಹಲಿ ಪಕ್ಷದ ಕಚೇರಿಯಲ್ಲಿ ಕೇಜ್ರಿವಾಲ್​ಗೆ ಅಭಿನಂದನೆ ​ಸಲ್ಲಿಕೆ

kejriwal feb 11 2020
Published on

ನವದೆಹಲಿ: ಹ್ಯಾಟ್ರಿಕ್​ ಸಾಧನೆಗಾಗಿ ಆಮ್​​ ಆದ್ಮಿ ಪಕ್ಷದ ಮುಖ್ಯಸ್ಥ, ದೆಹಲಿ ಮುಖ್ಯಮಂತ್ರಿಗೆ ಅಭಿನಂದನೆಗಳ ಮಹಾಫೂರವೇ ಹರಿದು ಬರುತ್ತಿದೆ.

ಇಂತಹ ಸಂದೇಶ ಕಳುಹಿಸಿದವರಲ್ಲಿ ಮುಖ್ಯ ಎಂದರೆ ಚುನಾವಣಾ ವಿಶ್ಲೇಷಕ ಪ್ರಶಾಂತ್​ ಕಿಶೋರ್​. ಇವರ ತಂಡ ಆಪ್​ ಗೆಲುವಿಗಾಗಿ ದೆಹಲಿಯಲ್ಲಿ ಕಾರ್ಯ ನಿರ್ವಹಿಸಿತ್ತು.

"ಭಾರತದ ಆತ್ಮ ದೆಹಲಿಯ ಜತೆ ನಿಂತಿದ್ದಕ್ಕೆ ದೆಹಲಿಗೆ ಧನ್ಯವಾದಗಳು" ಎಂದು ಪ್ರಶಾಂತ್​ ಕಿಶೋರ್​ ಟ್ವೀಟ್​ ಮಾಡಿದ್ದಾರೆ.

ಕಿಶೋರ್ ಅವರು ಇತ್ತೀಚಿನವರೆಗೂ ಜೆಡಿಯುನ ನಿತೀಶ್ ಕುಮಾರ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು. ಬಿಜೆಪಿಯ ಬಗೆಗಿನ ನಿಲುವಿನ ಬಗ್ಗೆ ಪಕ್ಷದ ಮುಖ್ಯಸ್ಥರೊಂದಿಗೆ ಸಾರ್ವಜನಿಕ ಭಿನ್ನಾಭಿಪ್ರಾಯಗಳ ನಂತರ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿತ್ತು.

ವಿಶೇಷವಾಗಿ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ನಾಗರಿಕರ ರಾಷ್ಟ್ರೀಯ ನೋಂದಣಿ ವಿಷಯವಾಗಿ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳಿದ್ದವು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net