ದೆಹಲಿ ವಿಧಾನಸಭಾ ಚುನಾವಣೆ ಫಲಿತಾಂಶ: ನಾನೇನೂ ನರ್ವಸ್ ಆಗಿಲ್ಲ, 55 ಸ್ಥಾನಗಳಲ್ಲಿ ಗೆದ್ದರೂ ಅಚ್ಚರಿ ಇಲ್ಲ ಎಂದ ಬಿಜೆಪಿ ನಾಯಕ ಮನೋಜ್ ತಿವಾರಿ

Manoj tiwari 11 FEB 20
Published on

ನವದೆಹಲಿ: ದೆಹಲಿ ವಿಧಾನಸಭೆಯ ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದ್ದು, ಆಮ್​ ಆದ್ಮಿ ಪಾರ್ಟಿ ಮುನ್ನಡೆಯಲ್ಲಿದೆ. ಆದಾಗ್ಯೂ, ನಾನು ನರ್ವಸ್ ಆಗಿಲ್ಲ. ನಾವು ಪರೀಕ್ಷೆ ಎದುರಿಸಿದ್ದೇವೆ. ಫಲಿತಾಂಶ ಈಗ ಬರುತ್ತಿದೆ. ಪಕ್ಷದ ಕಚೇರಿಯಲ್ಲಿ ಸಂಭ್ರಮಾಚರಣೆಗೆ ತಯಾರಿ ನಡೆದಿದೆ. ಪಕ್ಷದ ಕಾರ್ಯಕರ್ತರ ಪರಿಶ್ರಮಕ್ಕೆ ಸರಿಯಾದ ಫಲ ಸಿಕ್ಕೇ ಸಿಗುತ್ತದೆ. ನನಗೆ ಆ ವಿಶ್ವಾಸ ಇದೆ ಎಂದು ಬಿಜೆಪಿ ದೆಹಲಿ ಘಟಕದ ಮುಖ್ಯಸ್ಥ ಮನೋಜ್ ತಿವಾರಿ ಮಂಗಳವಾರ ಬೆಳಗ್ಗೆ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಈಗ ಮಾತುಕತೆಗಳೆಲ್ಲ ಮುಗಿದು ಹೋಗಿವೆ. ಈಗೇನಿದ್ದರೂ ಜನರ ಆಶೀರ್ವಾದಕ್ಕಾಗಿ ನಾವು ಎದುರು ನೋಡುತ್ತಿದ್ದೇವೆ. ಬಿಜೆಪಿಗೂ ಒಳ್ಳೆಯ ದಿನಗಳು ಬರಲಿವೆ. ದೆಹಲಿಯಲ್ಲಿ ನಾವು ಅಧಿಕಾರ ಚುಕ್ಕಾಣಿ ಹಿಡಿದರೆ ಅಚ್ಚರಿ ಪಡಬೇಡಿ. ಅದೇ ರೀತಿ 55 ಸ್ಥಾನಗಳಲ್ಲಿ ಗೆಲುವು ನಮ್ಮದಾದರೂ ಹುಬ್ಬೇರಿಸಬೇಡಿ ಎಂದು ತಿವಾರಿ ಹೇಳಿದ್ದಾರೆ.

ಅವರು ಈ ಹೇಳಿಕೆ ನೀಡಿದ ಸಂದರ್ಭದಲ್ಲಿ ಆಮ್ ಆದ್ಮಿ 41 ಸ್ಥಾನದಲ್ಲೂ ಬಿಜೆಪಿ 19ರಲ್ಲೂ ಮುನ್ನಡೆಯಲ್ಲಿದ್ದವು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net