Delhi Election Result| ಆರಂಭಿಕ ಮುನ್ನಡೆ ಕಾಯ್ದುಕೊಂಡ BJP; ಕೇಜ್ರಿವಾಲ್ ಸೇರಿದಂತೆ ಪ್ರಮುಖರಿಗೆ ಭಾರೀ ಹಿನ್ನಡೆ

BJP AAP Congress
Published on

ನವದೆಹಲಿ: ತೀವ್ರ ಕುತೂಹಲ ಕೆರಳಿಸಿರುವ ರಾಷ್ಟ್ರ ರಾಜಧಾನಿ ನವದೆಹಲಿ ವಿಧಾನಸಭೆ ಚುನಾವಣೆಯ ಮತ ಎಣಿಕೆ ಕಾರ್ಯ ಆರಂಭವಾಗಿದ್ದು, ಬಿಜೆಪಿ (BJP) ಆರಂಭಿಕ ಮುನ್ನಡೆ ಕಾಯ್ದುಕೊಂಡಿದೆ. ಎಎಪಿ (AAP) ಎರಡನೇ ಸ್ಥಾನದಲ್ಲಿದ್ದು, ಕಾಂಗ್ರೆಸ್​ ಒಂದು ಸ್ಥಾನದಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

ಸದ್ಯ ಲಭ್ಯವಾಗಿರುವ ವರದಿ ಪ್ರಕಾರ ಬಿಜೆಪಿ  37, ಎಎಪಿ (AAP) 26 ಹಾಗೂ ಕಾಂಗ್ರೆಸ್ (Congress) 1 ಸ್ಥಾನದಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಮಾಜಿ ಸಿಎಂ ಅರವಿಂದ್​ ಕೇಜ್ರಿವಾಲ್‌, ಸಿಎಂ ಅತಿಶಿ, ಮನೀಶ್‌ ಸಿಸೋಡಿಯಾಗೆ ಹಿನ್ನಡೆಯಾಗಿದ್ದು, ಸತ್ಯೇಂದ್ರ ಜೈನ್, ಪರ್ವೇಶ್ ಶರ್ಮಾ, ಕಪಿಲ್ ಮಿಶ್ರಾ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಬೆಳಗ್ಗೆ ಎಂಟು ಗಂಟೆಗೆ ಮತ ಎಣಿಕೆ ಆರಂಭವಾಗಿದ್ದು, 11 ಗಂಟೆಯ ಹೊತ್ತಿಗೆ ಯಾವ ಪಕ್ಷ ಗದ್ದುಗೆ ಏರುತ್ತದೆ ಎಂಬ ಸ್ಪಷ್ಟ ಚಿತ್ರಣ ಹೊರಬೀಳಲಿದೆ. ಫೆಬ್ರವರಿ 05ರಂದು ನಡೆದ ಮತದಾನದಲ್ಲಿ ಶೇ. 60.54ರಷ್ಟು ವೋಟಿಂಗ್​ ನಡೆದಿತ್ತು. 13,766 ಮತಗಟ್ಟೆಗಳಲ್ಲಿ ನಡೆದ ಮತದಾನದಲ್ಲಿ 699 ಅಭ್ಯರ್ಥಿಗಳ ಭವಿಷ್ಯವನ್ನು ಇವಿಎಂ ಯಂತ್ರಗಳಲ್ಲಿ ಸೀಲ್ ಮಾಡಲಾಗಿದೆ.  70 ಸದಸ್ಯಬಲದ ದೆಹಲಿ ವಿಧಾನಸಭೆಗೆ ಫೆಬ್ರವರಿ 05ರಂದು ಮತದಾನ ನಡೆದಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net