ಚುನಾವಣೆ ಅಂತ್ಯ, ಮುಂದುವರಿಯದ ನಿರೀಕ್ಷಣಾ ಜಾಮೀನು ಅವಧಿ; ಪಕ್ಷದ ಕಾರ್ಯಕರ್ತರಿಗೆ ದೆಹಲಿ ಸಿಎಂ ಹೇಳಿದ್ದಿಷ್ಟು

Untitled design (27)
Published on

ನವದೆಹಲಿ: ಲೋಕಸಭೆ ಚುನಾವಣೆ ಸಂಪೂರ್ಣವಾಗಿ ಅಂತ್ಯವಾಗಿದ್ದು, ಎಲೆಕ್ಷನ್ ಪ್ರಚಾರಕ್ಕಾಗಿ ಸುಪ್ರೀಂ ಕೋರ್ಟ್​ನಿಂದ ಮಧ್ಯಂತರ ಜಾಮೀನು ಪಡೆದು 21 ದಿನಗಳ ಕಾಲ ಹೊರಬಂದಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಇಂದು ಸಂಜೆ ತಿಹಾರ್ ಜೈಲಿಗೆ ಹಿಂತಿರುಗುವ ಮೂಲಕ ನ್ಯಾಯಾಲಯದ ಆದೇಶವನ್ನು ಪಾಲಿಸಿದ್ದಾರೆ.

ಇಂದು ಮಧ್ಯಾಹ್ನ 3 ಗಂಟೆಗೆ ಮನೆಯಿಂದ ಹೊರಟು ತಿಹಾರ್ ಜೈಲಿಗೆ ಶರಣಾಗುವೆ ಎಂದಿದ್ದ ಕೇಜ್ರಿವಾಲ್, ತಮ್ಮ ಮಾತಿಗೆ ತಕ್ಕಂತೆ ಮಧ್ಯಾಹ್ನ 3 ಗಂಟೆಯ ಸುಮಾರಿಗೆ ತಮ್ಮ ಪೋಷಕರ ಆರ್ಶಿವಾದ ಪಡೆದು ನಿವಾಸದಿಂದ ಹೊರಟರು. ಮೊದಲು ಮಹಾತ್ಮ ಗಾಂಧಿ ಅವರಿಗೆ ಗೌರವ ಸಲ್ಲಿಸಲು ರಾಜ್‌ಘಾಟ್‌ಗೆ ತೆರಳಿದರು. ಇದರ ಬೆನ್ನಲ್ಲೇ ಹನುಮಾನ್ ಮಂದಿರಕ್ಕೆ ಭೇಟಿ ಕೊಟ್ಟು, ಬಳಿಕ ಪಕ್ಷದ ಪ್ರಧಾನ ಕಚೇರಿಗೆ ತಲುಪಿದ ಸಿಎಂ, ತಮ್ಮ ಪಕ್ಷದ ಕಾರ್ಯಕರ್ತರು ಮತ್ತು ನಾಯಕರೊಂದಿಗೆ ಹಲವು ವಿಷಯಗಳನ್ನು ಮುಕ್ತವಾಗಿ ಹಂಚಿಕೊಂಡರು.

"ಚುನಾವಣೆಯ ಸಲುವಾಗಿ 21 ದಿನಗಳ ಮಧ್ಯಂತರ ಜಾಮೀನು ನೀಡಿದ ಸುಪ್ರೀಂ ಕೋರ್ಟ್​ಗೆ​ ನನ್ನ ಹೃತ್ಪೂರ್ವಕ ಧನ್ಯವಾದಗಳು. ಜೈಲಿನಿಂದ ಹೊರಬಂದ ಮೊದಲ ದಿನದಿಂದ ಇಂದಿನವರೆಗೂ ಒಂದು ನಿಮಿಷ ಕೂಡ ವ್ಯರ್ಥ ಮಾಡಿಲ್ಲ. ಪಕ್ಷದ ಎಲ್ಲಾ ಕೆಲಸಗಳು ಮತ್ತು ಪ್ರಚಾರ ಕಾರ್ಯಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದೆ. ಈ ಪ್ರಚಾರ ದೇಶ ಉಳಿಸಲು. ನನಗೆ ದೇಶ ಮೊದಲು, ಆನಂತರ ಆಮ್ ಆದ್ಮಿ ಪಕ್ಷ. ಇಷ್ಟು ದಿನ ನಿಮ್ಮೊಂದಿಗೆ ಇದ್ದಿದ್ದು ಮರೆಯಲಾಗದ ಸಂಗತಿ" ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net