

ನವದೆಹಲಿ: ಇದೇ ಫೆ.5ರಂದು70 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ದೆಹಲಿ ವಿಧಾನಸಭಾ ಚುನಾವಣೆ(Delhi Election) ನಡೆಯಲಿದ್ದು, 8ರಂದು ಫಲಿತಾಂಶ ಹೊರ ಬಿಳಲಿದೆ ಎಂದು ಭಾರತೀಯ ಚುನಾವಣಾ ಆಯೋಗ ಮಂಗಳವಾರ ಘೋಷಿಸಿತು.
ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ನೇತೃತ್ವದಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಯುಕ್ತ, ಯುವ ಮತದಾರ ಸಂಖ್ಯೆ ಅಧಿಕವಾಗಿದೆ. ಲೋಕಾಸಭಾ ಚುನಾವಣೆಯಲ್ಲಿ ದಾಖಲೆಯ ಮತದಾನ ನಡೆದಿದೆ. ಹಿಂಸಾಚಾರ ಮುಕ್ತ ಮತ್ತು ಪಾರದರ್ಶಕ ಚುನಾವಣೆ ನಡೆಸಲು ಸಿದ್ಧರಿದ್ದೇವೆ. ಪಾರದರ್ಶಕ ಚುನಾವಣೆ ನಡೆಸುವುದು ನಮ್ಮ ಮೊದಲ ಆದ್ಯತೆಯಾಗಿದೆ ಎಂದರು.
ಇವಿಎಂ ಹ್ಯಾಕ್ ಆಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ. ಎಲ್ಲ ಏಂಜೆಟ್ಗಳ ಸಮ್ಮುಖದಲ್ಲಿಯೇ ಇವಿಎಂ ಪೆಟ್ಟಿಗೆಗಳಲ್ಲಿ ಸಿಂಬಲ್ ಆಳವಡಿಸಲಾಗುತ್ತದೆ. 7-8 ದಿನಗಳ ಮೊದಲೇ ಇವಿಎಂ ಸಿದ್ಧತೆ ಮಾಡಲಾಗುತ್ತದೆ. . ಪೂರ್ಣ ಪಾರದರ್ಶಕತೆಯಿಂದ ಇವಿಎಂ ಪ್ರಕಿಕ್ರಿಯೆ ನಡೆಯುತ್ತಿದೆ. ಇವಿಎಂನಲ್ಲಿ ವೈರಸ್ ಹರಡಲು ಸಾಧ್ಯವಿಲ್ಲ. ಹ್ಯಾಕ್ ಮಾಡಿರುವುದಾಗಿ ಯಾವುದೇ ಸಾಕ್ಷಿಗಳಿಲ್ಲ. ಮತದಾನ ಅವಧಿ ಬಳಿಕ ಇವಿಎಂ ಲಾಕ್ ಮಾಡಲಾಗುತ್ತದೆ ಎಂದು ಆಯ್ತುಕರು ಸ್ಪಷ್ಟಪಡಿದರು.
ಅಧಿಕಾರದಲ್ಲಿರುವ ಎಎಪಿ, ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ತೀವ್ರ ಚುನಾವಣಾ ಹೋರಾಟಕ್ಕೆ ವೇದಿಕೆಯಾಗಿದೆ. ಕಳೆದ 2020ರ ಚುನಾವಣೆಯಲ್ಲಿ 70 ಸ್ಥಾನಗಳ ಪೈಕಿ ಎಎಪಿ 62, ಬಿಜೆಪಿ 8 ಮತ್ತು ಕಾಂಗ್ರೆಸ್ ಶೂನ್ಯ ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ ಸತತ ಮೂರನೇ ಅವಧಿಗೆ ಅಧಿಕಾರವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ, ಆದರೆ ಬಿಜೆಪಿ ರಾಷ್ಟ್ರ ರಾಜಧಾನಿಯಲ್ಲಿ ಅಧಿಕಾರವನ್ನು ಕಸಿದುಕೊಳ್ಳಲು ಕಣ್ಣಿಟ್ಟಿದೆ. ಅಚ್ಚರಿಯ ಗೆಲುವು ಸಾಧಿಸುವ ನಿರೀಕ್ಷೆಯಲ್ಲಿ ಕಾಂಗ್ರೆಸ್ ಕೂಡ ಪ್ರಬಲ ಹೋರಾಟಕ್ಕೆ ಸಿದ್ಧತೆ ನಡೆಸಿದೆ.(ಏಜೆನ್ಸೀಸ್)