ಫೆಬ್ರವರಿ 8ಕ್ಕೆ ದೆಹಲಿ ವಿಧಾನಸಭಾ ಚುನಾವಣೆ, 11ಕ್ಕೆ ಮತ ಎಣಿಕೆ ; ಮುಖ್ಯ ಚುನಾವಣಾಧಿಕಾರಿ ಸುನಿಲ್​ ಆರೋರಾ

SUNIL ARORA
Published on

ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆ ಫೆಬ್ರವರಿ 8ರಂದು ನಡೆಯಲಿದ್ದು, ಫೆ.11ಕ್ಕೆ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ಮುಖ್ಯ ಚುನಾವಣಾಧಿಕಾರಿ ಸುನಿಲ್​ ಆರೋರಾ ತಿಳಿಸಿದ್ದಾರೆ.

ಜನವರಿ 14ರಂದು ಚುನಾವಣೆ ಅಧಿಸೂಚನೆ ಹೊರಬೀಳಲಿದೆ. ನಾಮಪತ್ರ ಸಲ್ಲಿಸಲು ಜನವರಿ 21 ಕೊನೇ ದಿನ. ನಾಮಪತ್ರ ಹಿಂಪಡೆಯಲು 22 ಕೊನೇ ದಿನವಾಗಿದ್ದು, ಫೆಬ್ರವರಿ 24 ಉಮೇದುವಾರಿಕೆ ಹಿಂಪಡೆಯಲು ಕೊನೇ ದಿನವಾಗಿದೆ ಎಂದು ಆರೋರಾ ಮಾಹಿತಿ ನೀಡಿದರು.

70 ಸದಸ್ಯರ ಬಲವುಳ್ಳ ವಿಧಾನಸಭೆಯ ಫೆಬ್ರವರಿ 22ರಂದು ಕೊನೆಗೊಳ್ಳಲಿದೆ. ಫೆ.22ರೊಳಗೆ ಹೊಸ ಸರ್ಕಾರ ಅಧಿಕಾರಕ್ಕೆ ಬರಬೇಕಿದೆ.

2105ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಆಮ್​ ಆದ್ಮಿ (ಆಪ್​) ಪಕ್ಷ ಅಧಿಕಾರಕ್ಕೆ ಬಂದಿತ್ತು. ಅರವಿಂದ ಕ್ರೇಜಿವಾಲ್​ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಆಗ ಆಪ್​ 67 ಸ್ಥಾನ ಪಡೆದಿದ್ದರೆ, ಉಳಿದ 3 ಸ್ಥಾನಗಳು ಬಿಜೆಪಿ ಪಾಲಾಗಿದ್ದವು. ಕಾಂಗ್ರೆಸ್​ ಶೂನ್ಯ ಸ್ಥಾನಕ್ಕೆ ಇಳಿದಿತ್ತು.

ಮುಖ್ಯಾಂಶಗಳು

  • ಒಟ್ಟು 1,46,92,136 ಮಂದಿ ಮತ ಚಲಾಯಿಸಲು ಅರ್ಹರಾಗಿದ್ದಾರೆ. ಈ ಬಾರಿ ಮನೆ ಮನೆಗೆ ತೆರಳಿ ಮತದಾರರ ಪರಿಶಿಲನೆ ನಡೆಯಲಿದೆ.
  • ನ್ಯಾಯಯುತ ಹಾಗು ಮುಕ್ತ ಮತದಾನಕ್ಕಾಗಿ 90 ಸಾವಿರ ಅಧಿಕಾರಿಗಳ ನಿಯೋಜನೆ. 13,750 ಮತ ಕೇಂದ್ರಗಳ ಸ್ಥಾಪನೆ.
  • ಅಧಿಕೃತ ಸೂಚನೆ ಹೊರ ಬಿದ್ದ ಬಳಿಕ ಪ್ರತಿದಿನ ಮಾಧ್ಯಮಗಳಿಗೆ ಮಾಹಿತಿ ನೀಡಲಾಗುವುದು.
  • ವ್ಹೀಲ್​ಚೇರ್​ ಮತ್ತು ಮತದಾನಕ್ಕೆ ಬರಲು ಮತ್ತು ವಾಪಸ್​ ತೆರಳಲು ಅಂಗವಿಕಲರಿಗೆ ಹಾಗೂ ವೃದ್ಧರಿಗೆ ವಾಹನ ವ್ಯವಸ್ಥೆ ಮಾಡಲಾಗುವುದು. (ಏಜೆನ್ಸೀಸ್​) 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net