ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಶೇ.62.59; ಮತಪತ್ರಗಳ ಪರಿಶೀಲನೆಯಿಂದಾಗಿ ವಿವರ ಪ್ರಕಟಿಸುವಲ್ಲಿ ವಿಳಂಬ

DEHLI
Published on

ನವದೆಹಲಿ: ಮತಪತ್ರಗಳ ಪರಿಶೀಲನೆಗೆ ತುಂಬ ಸಮಯ ಹಿಡಿದಿದ್ದರಿಂದ ಒಟ್ಟು ಶೇಕಡವಾರು ಮತ ಚಲಾವಣೆ ಸಂಖ್ಯೆ ಪ್ರಕಟಿಸುವುದರಲ್ಲಿ ವಿಳಂಬವಾಗಿದೆ ಎಂದು ಮುಖ್ಯ ಚುನಾವಣಾ ಅಧಿಕಾರಿ ರಣಬೀರ್ ಸಿಂಗ್ ಹೇಳಿದ್ದಾರೆ.

ದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೆಹಲಿಯ ಎಲ್ಲ ಕ್ಷೇತ್ರಗಳ ಬ್ಯಾಲೆಟ್​ಗಳನ್ನು ಪರಿಶೀಲನೆ ನಡೆಸಲಾಗಿದೆ. ಅಂತಿಮವಾಗಿ ದೆಹಲಿಯಲ್ಲಿ ಶೇ.62.59 ಮತದಾನವಾಗಿದೆ ಎಂದು ಅವರು ಮಾಹಿತಿ ನೀಡಿದರು.

ಒಟ್ಟು ಮತದಾನದ ಸಂಖ್ಯೆ ಪ್ರಕಟಣೆಯಲ್ಲಿ ವಿಳಂಬವನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಪ್ರಶ್ನಿಸಿದ್ದರು. ಸಾಮಾನ್ಯವಾಗಿ ಮತದಾನ ನಡೆದ ದಿನ ಪ್ರಕಟಿಸುವುದು ವಾಡಿಕೆ. ಆದರೆ ಈ ಗ ಏಕೆ ವಿಳಂಬ ಎಂದು ಅವರು ಆಯೋಗವನ್ನು ಪ್ರಶ್ನಿಸಿದ್ದರು.

ರಾತ್ರಿಯಿಡೀ ಕಾರ್ಯನಿರತವಾಗಿದ್ದ ಅಧಿಕಾರಿಗಳು ಮತದಾನದ ಡೇಟಾವನ್ನು ಸಲ್ಲಿಸುತ್ತಾರೆ. ಇದು ಸ್ವಲ್ಪ ಸಮಯ ತೆಗೆದುಕೊಂಡಿದೆ ಆದರೆ, ಡೇಟಾ ನಮೂದಿನಲ್ಲಿ, ನಿಖರತೆಯನ್ನು ಖಚಿತಪಡಿಸಿಕೊಳ್ಳುವುದು ಬಹಳ ಮುಖ್ಯ, ನಂತರವೇ ಪ್ರಕಟಿಸಲಾಗುತ್ತದೆ ಎಂದು ಮುಖ್ಯ ಚುನಾವಣಾ ಅಧಿಕಾರಿ ರಣಬೀರ್ ಸಿಂಗ್ ಮಾಹಿತಿ ನೀಡಿದ್ದಾರೆ.

ಈ ಬಾರಿ ಶೇ.62.59 ಮತದಾನವಾಗಿದೆ, ಇದು ಕಳೆದ ಬಾರಿಯ ಲೋಕ ಸಭಾ ಚುನಾವಣೆಯಲ್ಲಿ ನಡೆದಿದ್ದ ಮತದಾನಕ್ಕಿಂತ ಶೇ.2 ಹೆಚ್ಚು ಎಂದು ಅವರು ಮಾಹಿತಿ ನೀಡಿದರು. (ಏಜೆನ್ಸೀಸ್​) 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net