

ಬೆಂಗಳೂರು: ಸಬ್ ಇನ್‌ಸ್ಪೆಕ್ಟರ್‌ಗಳ ನೇರ ನೇಮಕಾತಿ ವಿಳಂಬ ಕಾರಣ ಖಾಲಿ ಇರುವ 577 ಎಸ್‌ಐ ಹುದ್ದೆಗಳಿಗೆ ಸ್ವತಂತ್ರ ಪ್ರಭಾರ ವ್ಯವಸ್ಥೆಯಡಿ ಎಎಸ್‌ಐಗಳಿಗೆ ತಾತ್ಕಾಲಿಕ ಬಡ್ತಿ ನೀಡಲು ಸರ್ಕಾರವು ಅನುಮತಿ ನೀಡಿದೆ.
2020-21ನೇ ಸಾಲಿನ 545 ಹುದ್ದೆಗಳು ಮತ್ತು 2021-22ನೇ ಸಾಲಿನ 402 ಸಬ್ ಇನ್‌ಸ್ಪೆಕ್ಟರ್ ಹುದ್ದೆಗಳ ನೇಮಕಾತಿ ಸಂಬಂಧ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಈ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳಲು ಸಾಕಷ್ಟು ಸಮಯ ಬೇಕಾಗಿದೆ. ಈ ಹಿನ್ನಲೆಯಲ್ಲಿ ಖಾಲಿ ಹುದ್ದೆಗೆ 577 ಎಸ್‌ಐ ಹುದ್ದೆಗಳಿಗೆ ಸೇವಾ ಹಿರಿತನ ಆಧಾರದ ಮೇರೆಗೆ ಸಹಾಯಕ ಸಬ್‌ಇನ್‌ಸ್ಪೆಕ್ಟರ್‌ಗಳಿಗೆ ತಾತ್ಕಾಲಿಕ ಬಡ್ತಿ ನೀಡಲು ಪೊಲೀಸ್ ಇಲಾಖೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿ ಆದೇಶಿಸಿದೆ.
ಬೆಂಗಳೂರು ನಗರ-153, ಹುಬ್ಬಳ್ಳಿ-ಧಾರವಾಡ-9, ಮಂಗಳೂರು-16, ಬೆಳಗಾವಿ ನಗರ-4, ಕಲಬುರಗಿ ನಗರ-15, ಕೇಂದ್ರ ವಲಯ-125, ಪೂರ್ವ ವಲಯ-47, ಪಶ್ಚಿಮ ವಲಯ-4, ಉತ್ತರ ವಲಯ-21, ದಕ್ಷಿಣ ವಲಯ-93, ಈಶಾನ್ಯ ವಲಯ-13, ಬಳ್ಳಾರಿ ವಲಯ-61 ಹಾಗೂ ರೈಲ್ವೆ ವಿಭಾಗ 16 ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳಿಗೆ ಪ್ರಭಾರವಾಗಿ ಪರಿಗಣಿಸಿ ಎಎಸ್‌ಐಗಳಿಗೆ ತಾತ್ಕಾಲಿಕ ಬಡ್ತಿ ನೀಡಬಹುದು.
ಆದರೆ ಇದು ಬಡ್ತಿ ಅಲ್ಲ.ನಿಯಮ-32ರಡಿ ಸ್ವತಂತ್ರ ಪ್ರಭಾರ ವ್ಯವಸ್ಥೆಯ ಕ್ರಮ ಬದ್ಧ ಬಡ್ತಿಗೆ ಬದಲಿ ಮಾಡುವ ತಾತ್ಕಾಲಿಕ ವ್ಯವಸ್ಥೆ. ಯಾವುದೇ ಸಂದರ್ಭದಲ್ಲಿ ಹಿಂದಕ್ಕೆ ಪಡೆಯಲು ಅವಕಾಶವಿರುತ್ತದೆ. ಪಿಎಸ್‌ಐ ಹುದ್ದೆಗಳಿಗೆ ನೇರ ನೇಮಕಾತಿ ನಡೆದ ಕೂಡಲೇ ಸ್ವತಂತ್ರ ಪ್ರಭಾರ ರದ್ದಾಗಲಿದೆ. ಪ್ರಭಾರದಲ್ಲಿ ಇದ್ದವರಿಗೆ ಜೇಷ್ಠತೆ ಆಧಾರದಡಿ ಬಡ್ತಿ ನೀಡಲಾಗುತ್ತದೆ ಎಂದು ಸ್ಪಷ್ಟಡಿಸಲಾಗಿದೆ