

ನವದೆಹಲಿ: ಅಂತಿಮ ವರ್ಷದ ಪದವಿ ಪರೀಕ್ಷೆಯನ್ನು ರದ್ದು ಮಾಡುವುದಕ್ಕೆ ಯುಜಿಸಿ (ವಿಶ್ವವಿದ್ಯಾಲಯಗಳ ಅನುದಾನ ಆಯೋಗ) ಸರ್ಕಾರಕ್ಕೆ ಸಲಹೆ ನೀಡಿದೆ. ಕರೊನಾ ಸೋಂಕಿನ ಪ್ರಮಾಣ ಗಣನೀಯವಾಗಿ ಏರಿಕೆಯಾಗುತ್ತಿರುವ ಈ ಸಮಯದಲ್ಲಿ ಪರೀಕ್ಷೆ ನಡೆಸದೆಯೇ ಹಿಂದಿನ ಸೆಮಿಸ್ಟರ್ಗಳ ಫಲಿತಾಂಶದ ಆಧಾರದ ಮೇಲೆ ತೇರ್ಗಡೆಗೊಳಿಸಲು ಯುಜಿಸಿಯ ಸಮಿತಿಯೊಂದು ಶಿಫಾರಸು ಮಾಡಿದೆ.
ಹಿಂದಿನ ಸೆಮಿಸ್ಟರ್ಗಳ ಫಲಿತಾಂಶದ ಆಧಾರದ ಮೇಲೆ ನೀಡುವ ಫಲಿತಾಂಶವು ವಿದ್ಯಾರ್ಥಿಗಳಿಗೆ ತೃಪ್ತಿದಾಯಕವಾಗಿಲ್ಲದಿದ್ದರೆ ಅಂತಹ ವಿದ್ಯಾರ್ಥಿಗಳಿಗೆ ಕರೊನಾ ಸಮಸ್ಯೆ ಮುಗಿದ ನಂತರ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಬೇಕು ಎಂದು ಸಲಹೆಯಲ್ಲಿ ತಿಳಿಸಲಾಗಿದೆ. ಹರಿಯಾಣ ವಿವಿ ಉಪಪ್ರಾಂಶುಪಾಲರಾದ ಆರ್.ಸಿ. ಕುಹಾದ್ ನೇತೃತ್ವದ ಸಲಹಾ ಸಮಿತಿ ಈ ಸಲಹೆ ನೀಡಿದೆ. ಐಐಟಿಯಂತಹ ಪ್ರತಿಷ್ಠಿತ ವಿದ್ಯಾಲಯಗಳು ಆನ್ಲೈನ್ನಲ್ಲೇ ತರಗತಿಯನ್ನು ಮುಂದುವರಿಸುವುದಾಗಿ ತಿಳಿಸಿವೆ.