More

    ಕೋವಿಡ್ ನೆಪದಲ್ಲಿ ಸೈಬರ್ ದಾಳಿ; ಸಾರ್ವಜನಿಕರಿಗೆ ಕೇಂದ್ರ ಸರ್ಕಾರ ಎಚ್ಚರಿಕೆ, ಉಚಿತ ಪರೀಕ್ಷೆ ನೆಪದಲ್ಲಿ ಮೋಸ

    ನವದೆಹಲಿ: ಕೋವಿಡ್-19 ಮಹಾಮಾರಿಗೆ ಸಂಬಂಧಿಸಿದ ಸರ್ಕಾರಿ ಸಂದೇಶದ ಸೋಗಿನಲ್ಲಿ ದುಷ್ಕರ್ವಿುಗಳು ವೈಯಕ್ತಿಕ ದತ್ತಾಂಶ ಹಾಗೂ ಹಣಕಾಸಿನ ವಿವರಗಳನ್ನು ಕದಿಯುವ ಸಾಧ್ಯತೆಯಿದೆ ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ. nಟಡ2019ಜಟಡ.ಜ್ಞಿ ಹೆಸರಿನಲ್ಲಿ ದುರುದ್ದೇಶಪೂರಿತ ಇ ಮೇಲ್ ಬರುವ ಸಾಧ್ಯತೆಯಿದೆ ಎಂದು ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಂ (ಸಿಇಆರ್​ಟಿ-ಇನ್) ಟ್ವೀಟ್ ಮಾಡಿದೆ.

    ವಂಚಕರು ಸರ್ಕಾರಿ ಪ್ರಾಯೋಜಿತ ಕೋವಿಡ್-19 ಸ್ಥಳೀಯ ನಿರ್ವಹಣಾ ಅಧಿಕಾರಿಗಳ ಹೆಸರಿನಲ್ಲಿ ದುರುದ್ದೇಶಪೂರಿತ ಇ ಮೇಲ್​ಗಳನ್ನು ಕಳಿಸುವ ಸಾಧ್ಯತೆಯಿದೆ. ಇ ಮೇಲ್ ಪಡೆದವರು ಹುಸಿ ವೆಬ್​ಸೈಟ್​ಗಳಿಗೆ ಭೇಟಿ ನೀಡುವ ರೀತಿಯಲ್ಲಿ ಅದನ್ನು ರೂಪಿಸಲಾಗಿರುತ್ತದೆ. ಜಾಲತಾಣಗಳಿಗೆ ಭೇಟಿ ಕೊಟ್ಟವರು ಫೈಲ್​ಗಳನ್ನು ಡೌನ್​ಲೋಡ್ ಮಾಡಿಕೊಳ್ಳುವಂತೆ ಅಥವಾ ವೈಯಕ್ತಿಕ ಮತ್ತು ಹಣಕಾಸಿನ ಮಾಹಿತಿಗಳನ್ನು ನಮೂದಿಸುವಂತೆ ಅವುಗಳ ವಿನ್ಯಾಸವಿರುತ್ತದೆ ಎಂದು ಸಿಇಆರ್​ಟಿ-ಇನ್ ಹೇಳಿದೆ.

    ಇದನ್ನೂ ಓದಿ: ಮಕ್ಕಳಿಗೆ ಸ್ಮಾರ್ಟ್​ ಫೋನ್​ ಕೊಡಿಸಿದ್ದರೆ ಅವರ ಮೇಲೊಂದು ಕಣ್ಣಿಟ್ಟಿರಿ; ಏಕೆಂದರೆ, ಇಲ್ಲಿ ನಡೆದದ್ದು ಮಕ್ಕಳಾಟವಲ್ಲ…!

    ವಿಶ್ವಾಸಾರ್ಹ ಸಂಸ್ಥೆಗಳ ಸೋಗಿನಲ್ಲಿ ಸೈಬರ್ ದಾಳಿಗಳು ನಡೆಯುತ್ತವೆ. ಇ ಮೇಲ್ ಅಥವಾ ಟೆಕ್ಸ್ಟ್ ಸಂದೇಶಗಳನ್ನು ತೆರೆಯುವಂತೆ ಜನರನ್ನು ವಂಚಿಸುತ್ತವೆ. ಅದನ್ನು ತೆರೆದಾಗ ಮಾಲ್​ವೇರ್, ಸಿಸ್ಟಂ ಫ್ರೀಜ್ ಇನ್ಸಾ್ಟಲ್ ಮಾಡುವ ಅಥವಾ ಸೂಕ್ಷ್ಮ ಮಾಹಿತಿ ಹೊರಗೆಡಹುವಂಥ ಲಿಂಕ್​ಗಳಿಗೆ ಒಯ್ಯುತ್ತದೆ ಎಂದು ವಿವರಿಸಿದೆ. ಸಿಇಆರ್​ಟಿ-ಇನ್ ಸೈಬರ್ ದಾಳಿ ಅಪಾಯಗಳಿಂದ ರಕ್ಷಿಸುವ ಸಂಸ್ಥೆಯಾಗಿದ್ದು, ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯದಡಿ ಕಾರ್ಯ ನಿರ್ವಹಿಸುತ್ತದೆ.

    20 ಲಕ್ಷ ವಿಳಾಸ!: ಫಿಶಿಂಗ್ ವಂಚಕರ ಬಳಿ 20 ಲಕ್ಷಕ್ಕೂ ಹೆಚ್ಚು ವೈಯಕ್ತಿಕ/ನಾಗರಿಕ ಇ ಮೇಲ್ ಐಡಿಗಳಿವೆ ಎಂದು ಹೇಳಲಾಗಿದೆ. ಉಚಿತವಾಗಿ ಕೋವಿಡ್-19 ಪರೀಕ್ಷೆ ನಡೆಸಲಾಗುವುದೆಂದು ದೆಹಲಿ, ಮುಂಬೈ, ಹೈದರಾಬಾದ್, ಚೆನ್ನೈ ಮತ್ತು ಅಹಮದಾಬಾದ್​ನ ನಿವಾಸಿಗಳಿಗೆ ಇ ಮೇಲ್ ಕಳಿಸಲು ಅವರು ಯೋಜಿಸಿದ್ದಾರೆ ಎಂದು ತಿಳಿದು ಬಂದಿದೆ. ಮೇಲ್ ಸ್ವೀಕರಿಸಿದ ಜನರು ಮಾಹಿತಿ ಒದಗಿಸುವ ಪ್ರೇರಣೆಗೆ ಒಳಗಾಗುವಂತೆ ಸಂದೇಶವಿರುತ್ತದೆ ಎಂದು ಸಿಇಆರ್​ಟಿ-ಇನ್ ವಿವರಿಸಿದೆ. ಅಸಹಜ ಚಟುವಟಿಕೆ ಅಥವಾ ಸೈಬರ್ ದಾಳಿಯ ಯಾವುದೇ ವಿಚಾರವನ್ನು ತಕ್ಷಣವೇ ಇನ್ಸಿಡೆಂಟ್​ಸಿಇಆರ್​ಟಿ-ಇನ್​ಗೆ ವರದಿ ಮಾಡುವಂತೆ ಕೋರಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts