ಪದವಿ ಕಾಲೇಜು ಪ್ರಾಂಶುಪಾಲ ಹುದ್ದೆ: ಶೈಕ್ಷಣಿಕ ಅರ್ಹರ ಪಟ್ಟಿ ಪ್ರಕಟ

kea
Published on

ಬೆಂಗಳೂರು: ಕಾಲೇಜು ಶಿಕ್ಷಣ ಇಲಾಖೆಯು ಸರ್ಕಾರಿ ಪದವಿ ಕಾಲೇಜುಗಳ 310 ಪ್ರಾಂಶುಪಾಲರ ಹುದ್ದೆಗಳನ್ನು ನೇಮಕ ಮಾಡುವ ಸಂಬಂಧ ಶೈಕ್ಷಣಿಕವಾಗಿ ಅರ್ಹತೆ ಹೊಂದಿರುವ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ.

ಇದು ಕೇವಲ ಶೈಕ್ಷಣಿಕವಾಗಿ ಅರ್ಹತೆ ಹೊಂದಿರುವ ಪಟ್ಟಿಯಾಗಿದೆಯೇ ವಿನಾ ತಾತ್ಕಾಲಿಕ ಆಯ್ಕೆಪಟ್ಟಿಯಾಗಿರುವುದಿಲ್ಲ.ಅರ್ಹ ಮತ್ತು ಅನರ್ಹ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗಿದೆ. ಈ ಪಟ್ಟಿಗೆ ಅಭ್ಯರ್ಥಿಗಳ ಆಕ್ಷೇಪಣೆಗಳಿದ್ದಲ್ಲಿ ಮುಂದಿನ 15 ದಿನದೊಳಗೆ ಅಗತ್ಯ ದಾಖಲೆಗಳನ್ನು ಇ- ಮೇಲ್ ಛ್ಚಛಿಟ್ಟಜ್ಞ್ಚಿಜಿಚ್ಝಃಜಞಜ್ಝಿ.್ಚಜಿಞ ಕಳುಹಿಸುವಂತೆ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರು ಜ್ಞಾಪನ ಪತ್ರ ಹೊರಡಿಸಿದ್ದಾರೆ.

ಕೆಇಎ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆ ಅನ್ವಯ 141 (ಹೈಕ) ಹಾಗೂ 813 (ಇತರೆ ಜಿಲ್ಲೆ) ಅಭ್ಯರ್ಥಿಗಳ ಅಂತಿಮ ಮೆರಿಟ್ ಪಟ್ಟಿಯನ್ನು 2024ರ ಮಾ.3ರಂದು ಪ್ರಕಟಿಸಲಾಗಿತ್ತು. ಈ ಅಭ್ಯರ್ಥಿಗಳು ಅರ್ಜಿಯಲ್ಲಿ ದಾಖಲಿಸಿದ ಮಾಹಿತಿಗೆ ಅನುಗುಣವಾಗಿ ವಿದ್ಯಾರ್ಹತೆ, ಮೀಸಲಾತಿ ಸೇರಿ ದೃಢೀಕೃತ ಪ್ರತಿಗಳನ್ನು ಸಲ್ಲಿಸವಂತೆ ಸೂಚಿಸಲಾಗಿತ್ತು. ಒಟ್ಟು 954 ಅಭ್ಯರ್ಥಿಗಳಲ್ಲಿ 779 ಜನರ ದಾಖಲೆಗಳನ್ನು ಸ್ವೀಕರಿಸಲಾಗಿದೆ. ಉಳಿದ 175 ಅಭ್ಯರ್ಥಿಗಳ ದಾಖಲೆಗಳು ಸ್ವೀಕೃತವಾಗಿಲ್ಲ. ಅರ್ಹತೆ ಪಡೆದಿರುವ ಪಟ್ಟಿಯಲ್ಲಿ 14 ಮಂದಿ ನಿವೃತ್ತಿ ಹೊಂದಿದ್ದಾರೆ ಎಂದು ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net