ಮೇನಲ್ಲೇ ಚೀನಾ ಅತಿಕ್ರಮಣ: ವೆಬ್ ಸೈಟ್ ನಿಂದ ವಿವರ ತೆಗೆದುಹಾಕಿದ ಭಾರತ

China
Published on

ಚೀನಾ ಸೈನಿಕರು ಪೂರ್ವ ಲಡಾಖ್​​ನಲ್ಲಿ ಭಾರತದ ಭೂಪ್ರದೇಶವ ಒಳಗೆ ಮೇ ತಿಂಗಳಲ್ಲೇ ಒಳನುಸುಳಿ ಅತಿಕ್ರಮಣ ಮಾಡಿದ್ದರು ಎಂದು ರಕ್ಷಣಾ ಸಚಿವಾಲಯ ವೆಬ್​ಸೈಟ್​ಗೆ ಕೆಲವು ದಾಖಲೆಗಳ ಸಮೇತ ಅಪ್ಲೋಡ್​ ಮಾಡಿತ್ತು. ಇದು ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದಲ್ಲದೆ, ಕಾಂಗ್ರೆಸ್ ನಾಯಕ ರಾಹುಲ್​ ಗಾಂಧಿ ಟ್ವೀಟ್​ ಕೂಡ ಮಾಡಿ, ಚೀನಾ ಸೈನಿಕರು ಒಳನುಗ್ಗಿದ್ದರು ಎಂದು ಹೇಳಲಾಗುತ್ತಿದೆ. ಹೀಗಿರುವಾಗ ಪ್ರಧಾನಿ ನರೇಂದ್ರ ಮೋದಿಯವರೇಕೆ ಸುಳ್ಳು ಹೇಳುತ್ತಿದ್ದಾರೆ ಎಂದು ಪ್ರಶ್ನಿಸಿದ್ದರು.

ಆದರೆ ಇದೀಗ ಇನ್ನೊಂದು ಮಹತ್ವದ ಬೆಳವಣಿಗೆ ನಡೆದಿದ್ದು, ರಕ್ಷಣಾ ಸಚಿವಾಲಯ ವೆಬ್​ಸೈಟ್​ನಲ್ಲಿ ಈ ಮಾಹಿತಿಯನ್ನು ಡಿಲೀಟ್​ ಮಾಡಿದೆ. ಮೇ ತಿಂಗಳಲ್ಲಿ ಚೀನಾ ಸೈನಿಕರು ಭಾರತದ ಭೂ ಪ್ರದೇಶವನ್ನು ಅತಿಕ್ರಮಣ ಮಾಡಿದ್ದರು ಎಂದು ಅಪ್ಲೋಡ್​ ಮಾಡಿದ್ದ ವಿವರಗಳನ್ನು ಅಲ್ಲಿಂದ ತೆಗೆಯಲಾಗಿದೆ. ಇದನ್ನೂ ಓದಿ: ಶಿಲಾನ್ಯಾಸದ ನಂತರ ಪ್ರಧಾನಿ ಮೋದಿ ಜೈ ಶ್ರೀರಾಮ್​ ಹೇಳದೆ, ಜೈ ಸಿಯಾ ರಾಮ್​ ಎಂದೇ ಹೇಳಿದ್ದೇಕೆ? ಕಾರಣ ಇಲ್ಲಿದೆ ನೋಡಿ…

ಚೀನಾದ ಒಳನುಸುಳುವಿಕೆಯನ್ನು ಅತಿಕ್ರಮಣ ಎಂದು ಉಲ್ಲೇಖಿಸಿದ್ದ ರಕ್ಷಣಾ ಸಚಿವಾಲಯ, ಪ್ಯಾಂಗೋಂಗ್ ಸರೋವರದಿಂದ ಭಾರತ ಹಿಂದೆ ಸರಿಯಬೇಕು ಎಂದು ಚೀನಾ ಬೇಡಿಕೆ ಇಡುತ್ತಿರುವ ಮಧ್ಯೆ ಈ ಸಂಘರ್ಷದ ನಿಲುವು ದೀರ್ಘವಾಗಿ ಇರಬಹುದು ಎಂದು ಹೇಳಿತ್ತು. ಭಾರತ ಮತ್ತು ಚೀನಾ ಸೈನಿಕರ ನಡುವಿನ ಹೊಡೆದಾಟದ ನಂತರ ಮೊದಲ ಬಾರಿಗೆ ರಕ್ಷಣಾ ಸಚಿವಾಲಯ ಚೀನಾ ವಿರುದ್ಧ ಅತಿಕ್ರಮಣ ಎಂಬ ಪದ ಪ್ರಯೋಗ ಮಾಡಿ ವೆಬ್​ಸೈಟ್​ನಲ್ಲಿ ಸಂಪೂರ್ಣ ಮಾಹಿತಿ ಹಾಕಿತ್ತು. ಆದರೆ ಇದು ರಾಜಕೀಯ ವಿವಾದಕ್ಕೆ ಕಾರಣವಾದ ನಂತರ ಅಲ್ಲಿಂದ ಡಿಲಿಟ್​ ಮಾಡಲಾಗಿದೆ. ಇದನ್ನೂ ಓದಿ: ಚೀನಾ ಸೈನಿಕರ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಸುಳ್ಳು ಯಾಕೆ ಹೇಳಿದರು?-ರಾಹುಲ್ ಗಾಂಧಿ

ಚೀನಾದ ಸೈನಿಕರು ಮೇ 17,18ರಂದು ಉತ್ತರ ಹಾಟ್​ಸ್ಪ್ರಿಂಗ್ಸ್​​ನ ಪೆಟ್ರೋಲಿಂಗ್​ ಪಾಯಿಂಟ್​ 15ರ ಬಳಿ ಇರುವ ಕುಗ್ರಾಂಗ್ ನಾಲಾ, ಗೋಗ್ರಾ (ಪಿಪಿ 17ಎ) ಮತ್ತು ಪ್ಯಾಂಗೋಂಗ್ ತ್ಸೋದ ಉತ್ತರ ದಡದ ಬಳಿ ಗಡಿ ನಿಯಮ ಉಲ್ಲಂಘಿಸಿ, ಅತಿಕ್ರಮಣ ಮಾಡಿದ್ದರು ಎಂದು ವೆಬ್​ಸೈಟ್​ನಲ್ಲಿ ದಾಖಲಾಗಿತ್ತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net