ರೂ.45 ಸಾವಿರ ಕೋಟಿಯ ಮಿಲಿಟರಿ ಸಾಮಗ್ರಿ ಖರೀದಿಗೆ ಅನುಮತಿ

Rajnath Singh
Published on

ನವದೆಹಲಿ: ಅಂದಾಜು 45,000 ಕೋಟಿ ರೂ. ವೆಚ್ಚದಲ್ಲಿ ವಿವಿಧ ಶಸ್ತ್ರಾಸ್ತ್ರ ವ್ಯವಸ್ಥೆಗಳು ಮತ್ತು ಯುದ್ಧೋಪಕರಣಗಳ ಖರೀದಿಗೆ ರಣಾ ಸಚಿವಾಲಯ ಅನುಮತಿ ನೀಡಿದೆ. ಅಲ್ಪ ವ್ಯಾಪ್ತಿಯ ಆಗಸದಿಂದ ಭೂಮಿಗೆ ಚಿಮ್ಮುವ ಧ್ರುವಸ ಪಣಿ ಮತ್ತು 12 ಎಸ್​ಯು-30 ಎಂಕೆಐ ಯುದ್ಧ ವಿಮಾನಗಳು ಇದರಲ್ಲಿ ಸೇರಿವೆ.

ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ನೇತೃತ್ವದ ರಕ್ಷಣಾ ಸ್ವಾಧಿನ ಮಂಡಳಿಯು (ಡಿಎಸಿ) ಒಟ್ಟು ಒಂಬತ್ತು ಖರೀದಿ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎಲ್ಲಾ ಖರೀದಿಗಳನ್ನು ಭಾರತೀಯ ಮಾರಾಟಗಾರರಿಂದ ಖರೀದಿ ಮಾಡಲಾಗುವುದು. ಇದು 'ಆತ್ಮನಿರ್ಭರ ಭಾರತ' ಗುರಿಯನ್ನು ಸಾಧಿಸಲು ಭಾರತೀಯ ರಕ್ಷಣಾ ಉದ್ಯಮಕ್ಕೆ ಗಣನೀಯ ಉತ್ತೇಜನ ನೀಡುತ್ತದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net