ಜಿಂಕೆ ಕೊಂಬು ಸಾಗಾಟ; ಇಬ್ಬರ ಸೆರೆ

arrest
Published on

ಬೆಂಗಳೂರು: ವನ್ಯ ಜೀವಿ ಜಿಂಕೆಗಳ ತಲೆಬುರುಡೆ ಮತ್ತು ಕೊಂಬುಗಳನ್ನು ಮಾರಾಟಕ್ಕೆ ಯತ್ನಿಸಿದ ಇಬ್ಬರು ಆರೋಪಿಗಳನ್ನು ಕಾಡುಗೋಡಿ ಪೊಲೀಸರು ಬಂಧಿಸಿದ್ದಾರೆ.

ಆಂಧ್ರಪ್ರದೇಶದ ವಿಜಯವಾಡ ಮೂಲದ ಣಿಂದರ್ ಚಾರ್ ಮತ್ತು ರಾಜಮಂಡ್ರಿ ಮೂಲದ ರೆಹಮಉಲ್ಲಾ ಖಾನ್ ಬಂಧಿತರು. ಜಿಂಕೆ ತಲೆಬುರುಡೆ ಸಹಿತ 6 ಕೊಂಬು ಮತ್ತು 33 ಕೊಂಬುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಮಾಹಿತಿ ನೀಡಿದ್ದಾರೆ.

ಆಂಧ್ರಪ್ರದೇಶದ ಗುಂಡೂರು ಅರಣ್ಯ ಪ್ರದೇಶದಲ್ಲಿ ತಲೆಮರೆಸಿಕೊಂಡಿರುವ ಕಿಂಗ್‌ಪಿನ್ ಬಳಿ ವನ್ಯ ಜೀವಿ ಕಳೆಬರಹಗಳನ್ನು ಖರೀದಿಸಿದ್ದರು. ಅಲ್ಲಿಂದ ಬೆಂಗಳೂರಿನಲ್ಲಿ ಓರ್ವ ವ್ಯಕ್ತಿಗೆ ಮಾರಾಟ ಮಾಡಲು ಆರೋಪಿಗಳು ಬಂದಿಸಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ಮಫ್ತಿಯಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ ಜಿಂಕೆ ತಲೆಬುರುಡೆ ಮತ್ತು ಕೊಂಬುಗಳನ್ನು ಜಪ್ತಿ ಮಾಡಿದ್ದಾರೆ. ಇದಕ್ಕೂ ಮೊದಲು ಒಂದು ಬಾರಿ ಆರೋಪಿಗಳು ಬೆಂಗಳೂರಿಗೆ ಬಂದು ಜಿಂಕೆ ಕಳೆಬರಹ ಮಾರಾಟ ಮಾಡಿರುವುದು ಒಪ್ಪಿಕೊಂಡಿದ್ದಾರೆ.

ಇದೀಗ ಆರೋಪಿಗಳಿಗೆ ಸರಬರಾಜು ಮಾಡಿದ ವ್ಯಕ್ತಿ ಮತ್ತು ಇವರಿಂದ ಖರೀದಿಗೆ ಮುಂದಾಗಿದ್ದ ಗಿರಾಕಿ ಸುಳಿವು ಲಭ್ಯವಾಗಿದ್ದು, ಬಂಧನಕ್ಕೆ ಕಾರ್ಯಾಚರಣೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net